ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ 2023-24 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಎಸ್ ಜೆ ಎಂ ಉಳ್ಳಾಲ ರೇಂಜ್ ಮಟ್ಟದಲ್ಲಿ ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನ್ ಟ್ರಸ್ಟ್ ಅಧೀನದ ಅಳೇಕಲ ನಜಾತುಸ್ಸಿಬಿಯಾನ್ ಹೈಯರ್ ಸೆಕೆಂಡರಿ ಮದ್ರಸದ ವಿದ್ಯಾರ್ಥಿನಿಗಳಾದ ಫಾತಿಮ ಸ್ವಫಾ ಝವಾತ್ ಮತ್ತು ಫಾತಿಮ ಕಶೀಫಃ ಪ್ರಥಮ ಹಾಗು ದ್ವಿತೀಯ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಇವರನ್ನು ಅಳೇಕಲ ಮದ್ರಸ ಅಧ್ಯಾಪಕರ ಒಕ್ಕೂಟ, ಎಸ್ ಬಿ ಎಸ್ ಅಳೇಕಲ ಶಾಖೆ ಮತ್ತು ಎಸ್ ಜೆ ಎಂ ಉಳ್ಳಾಲ ರೇಂಜ್ ಅಭಿನಂದಿಸಿದೆ. ಅಳೇಕಲ ಮದ್ರಸ ಆಡಳಿತ ಸಮಿತಿಯು ಮದ್ರಸ ವಿದ್ಯಾರ್ಥಿಗಳ ಮೀಲಾದುನ್ನಬಿ ಕಾರ್ಯಕ್ರಮದಲ್ಲಿ ಚಿನ್ನದ ಉಂಗುರವನ್ನು ನೀಡಿ ವಿಶೇಷ ಅಭಿನಂದನೆ ಸಲ್ಲಿಸಿದೆ.