ಮದ್ರಸ ವಿದ್ಯಾರ್ಥಿನಿಗಳ ವಿಶೇಷ ಸಾಧನೆ
ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ದೇಶ ವಿದೇಶಗಳಲ್ಲಿ ಏಕ ಕಾಲದಲ್ಲಿ ನಡೆಸಿದ ಸ್ಮಾರ್ಟ್ ಸ್ಕಾಲರ್ಶಿಪ್ ಮುಖ್ಯ ಪರೀಕ್ಷೆಯಲ್ಲಿ ಅಳೇಕಲದ ನಜಾತುಸ್ಸಿಬಿಯಾನ್ ಹೈಯರ್ ಸೆಕೆಂಡರಿ ಮದ್ರಸದ ವಿದ್ಯಾರ್ಥಿನಿಗಳಾದ +1 ತರಗತಿಯ ಮರಿಯಂ ರುಫೈದಃ ಪ್ರಥಮ ಹಾಗು ಫಾತಿಮ ರಿಝಾ ದ್ವಿತೀಯ ರ್ಯಾಂಕ್ ಪಡೆದು ಬಂಗಾರದ ನಾಣ್ಯ ತಮ್ಮದಾಗಿಸಿ ಮದ್ರಸ, ಕುಟುಂಬ, ಊರಿಗೆ ಕೀರ್ತಿಯನ್ನು ತಂದಿದ್ದಾರೆ. ವಿದ್ಯಾರ್ಥಿನಿಗಳಿಗೆ ಉಳ್ಳಾಲ ಮುಅಲ್ಲಿಮರ ಒಕ್ಕೂಟ ಎಸ್ ಜೆ ಎಂ, ಅಳೇಕಲ ಅಧ್ಯಾಪಕರು, ಎಸ್ ಬಿ ಎಸ್ ಅಳೇಕಲ ಅಭಿನಂದಿಸಿದೆ.
ಮರಿಯಂ ರುಫೈದಃ ಹನೀಫ್ ಸಅದಿ ಅಲ್ ಅಫ್ಲಲಿ ಹಾಗು ಬುಶ್ರಾ ದಂಪತಿಯ ಪುತ್ರಿಯಾಗಿದ್ದು, ಫಾತಿಮ ರಿಝ ಯು.ಡಿ ಅಶ್ರಫ್ ಹಾಗು ರಶೀದಃ ದಂಪತಿಯ ಪುತ್ರಿಯಾಗಿದ್ದಾಳೆ.
Comments
Post a Comment