ಉಳ್ಳಾಲ ಅಳೇಕಲ : ಇತ್ತೀಚೆಗೆ ಅಲ್ ಮದೀನಾ ಮಂಜನಾಡಿಯಲ್ಲಿ ಹಮ್ಮಿಕೊಂಡಿದ್ದ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ರಾಜ್ಯ ಮಟ್ಟದ ಪ್ರತಿಭಾ ಸಂಗಮದಲ್ಲಿ ಉಳ್ಳಾಲ ಅಳೇಕಲ ನಜಾತುಸ್ಸಿಬಿಯಾನ್ ಹೈಯರ್ ಸೆಕೆಂಡರಿ ಮದ್ರಸದ ವಿದ್ಯಾರ್ಥಿಗಳಾದ ನಿಹಾನ್ ಅಬ್ದುಲ್ ರಹ್ಮಾನ್ ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಹಾಗು ಅಫ್ಫಾನ್ ಮುಹಮ್ಮದ್ ಇಸ್ಮಾಯಿಲ್ ಉರ್ದು ಕಥೆ ಹೇಳುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ರೇಂಜ್, ಜಿಲ್ಲಾ, ರಾಜ್ಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿ ಮದ್ರಸ, ನಾಡಿನ ಕೀರ್ತಿ ಹೆಚ್ಚಿಸಿದ ಇವರನ್ನು ಅಳೇಕಲ ಮದ್ರಸ ಅಧ್ಯಾಪಕರ ಒಕ್ಕೂಟ, ಮದ್ರಸ ಆಡಳಿತ ಸಮಿತಿ, ಎಸ್ ಬಿ ಎಸ್ ಅಳೇಕಲ ಶಾಖೆ, ಎಸ್ ಜೆ ಎಂ ಉಳ್ಳಾಲ ರೇಂಜ್ ಅಭಿನಂದಿಸಿದೆ.
ಪ್ರಥಮ ಸ್ಥಾನಿಯಾದ ನಿಹಾನ್ ಎಂಬ ವಿದ್ಯಾರ್ಥಿ ಅಯಾಝ್ ಅಬ್ದುಲ್ ರಹ್ಮಾನ್ ಮತ್ತು ಆಯಿಷ ಬಾನು ಅಲ್ ಫಾತ್ವಿಮಿಯ್ಯಃ ದಂಪತಿಯ ಪುತ್ರ ಹಾಗು ದ್ವಿತೀಯ ಸ್ಥಾನ ಪಡೆದ ಅಫ್ಫಾನ್ ಎಂಬ ವಿದ್ಯಾರ್ಥಿ ಯು.ಡಿ ಅಬ್ದುಲ್ ಹಮೀದ್ ಅರಮೆಕ್ಸ್ ಮತ್ತು ಆಯಿಷ ದಂಪತಿಯ ಪುತ್ರನಾಗಿದ್ದಾನೆ.
Comments
Post a Comment