Skip to main content

Posts

Showing posts from April, 2020

ರಂಝಾನ್ ತಿಂಗಳ ಚಂದ್ರದರ್ಶನ ಗೌರವಾನ್ವಿತ ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಗಲ್ ಘೋಷಣೆ

ರಂಝಾನ್ ತಿಂಗಳ ಚಂದ್ರದರ್ಶನ ಗೌರವಾನ್ವಿತ ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಗಲ್ ಘೋಷಣೆ ಇಂದು ( ಗುರುವಾರ ಅಸ್ತ ಶುಕ್ರವಾರ ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ 24-04-2020 ಶುಕ್ರವಾರ ( ನಾಳೆ ) ರಮಳಾನ್ ತಿಂಗಳ ಚಾಂದ್ ಒಂದು ಆಗಿರುತ್ತದೆ ಎಂದು ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಗೌರವಾನ್ವಿತ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The Honourable Khazi of ullala Qurrathussadath Seyyed Fazal Koyamma Thangal  has announced that 24-04-2020 is first of Ramadan

ಸಯ್ಯಿದ್ ಮದನಿ SJM ಉಳ್ಳಾಲ ರೇಂಜ್ ವತಿಯಿಂದ ರಂಝಾನ್ ಕಿಟ್ ವಿತರಣೆ

ಸಯ್ಯಿದ್ ಮದನಿ ಎಸ್ ಜೆ ಎಂ ಉಳ್ಳಾಲ ರೇಂಜ್ ವತಿಯಿಂದ ಪ್ರತೀ ವರ್ಷದ ರಂಝಾನ್ ತಿಂಗಳ ಮುಂಚೆ ರೇಂಜ್ ವ್ಯಾಪ್ತಿಯ ಮದ್ರಸ ಅಧ್ಯಾಪಕರುಗಳಿಗೆ ವಿತರಿಸಲಾಗುತ್ತಿದ್ದ ರಂಝಾನ್ ಕಿಟ್ ವಿತರಣೆ ಈ ವರ್ಷವೂ ವಿತರಿಸಲಾಯಿತು. ಸಯ್ಯಿದ್ ಮದನಿ ಉಳ್ಳಾಲ ರೇಂಜ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮದನಿನಗರ, ದಾರಂದಬಾಗಿಲು, ಪಟ್ಲ, ಸೇವಂತಿಗುಡ್ಡೆ, ಕಲ್ಲಾಪು, ಮಂಚಿಲ, ಮಾರ್ಗತಲೆ, ಅಳೇಕಲ, ಅಕ್ಕರೆಕೆರೆ, ಮಾಸ್ತಿಕಟ್ಟೆ, ಮುಕ್ಕಚ್ಚೇರಿ, ಸುಂದರಭಾಗ್ ಹಾಗೂ ತೋಟ ಮದ್ರಸಗಳ ಅಧ್ಯಾಪಕರುಗಳಿಗೆ ರಂಝಾನ್ ಕಿಟ್ ಮತ್ತು ನಗದು ಮೊತ್ತವನ್ನು ವಿತರಿಸಲಾಯಿತು. ಜಾಗತಿಕ ಮಾರಕ ವೈರಾಣು ಕೋವಿಡ್ -19 ಹರಡುವುದನ್ನು ತಡೆಗಟ್ಟಲು ಸರಕಾರ ಘೋಷಿಸಿದ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಉಳ್ಳಾಲ ರೇಂಜ್ ಅಧೀನದಲ್ಲಿ ಸೇವೆಗೈಯ್ಯುತ್ತಿರುವ ದೂರದೂರಿನ ಅಧ್ಯಾಪಕರುಗಳಿಗೆ ನಗದನ್ನು ಅವರ ಖಾತೆಗೆ ವರ್ಗಾವಣೆ ಮಾಡಲಾಯಿತು. ಪ್ರಸ್ತುತ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮದ ನೇತ್ರತ್ವವನ್ನು ರೇಂಜ್ ಕ್ಷೇಮನಿಧಿ ವಿಭಾಗ ಚೇಯರ್ಮಾನ್ ಜಲಾಲ್ ಮದನಿ ವಹಿಸಿದ್ದರು. ರೇಂಜ್ ಅಧ್ಯಕ್ಷರಾದ ಯೂನುಸ್ ಇಮ್ದಾದಿ, ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಮಹ್ಲರಿ, ಕ್ಷೇಮನಿಧಿ ವಿಭಾಗ ಕನ್ವೀನರ್ ಯೂಸುಫ್ ಮುಸ್ಲಿಯಾರ್ ಸಜಿಪ, ಪರೀಕ್ಷಾ ವಿಭಾಗ ಕನ್ವೀನರ್ ನವಾಝ್ ಸಖಾಫಿ ಹಾಜರಿದ್ದರು.

ಉಳ್ಳಾಲ ಅಳೇಕಲ ಜಮಾಅತ್ ಮುಂದಾಳುತ್ವದಲ್ಲಿ ಇಡೀ ದಕ್ಷಿಣ ಕನ್ನಡ ಜಿಲ್ಲೆಗೇ ಮಾದರೀ ಯೋಗ್ಯವಾದ ಶ್ಲಾಘನೀಯ ಸಾಂತ್ವನ ಸೇವೆ.

ಉಳ್ಳಾಲ ಅಳೇಕಲ ಜಮಾಅತ್ ಮುಂದಾಳುತ್ವದಲ್ಲಿ ಇಡೀ ದಕ್ಷಿಣ ಕನ್ನಡ ಜಿಲ್ಲೆಗೇ ಮಾದರೀ ಯೋಗ್ಯವಾದ ಶ್ಲಾಘನೀಯ ಸಾಂತ್ವನ ಸೇವೆ. ------------------------------ ಕೋವಿಡ್ 19 ಮಾರಕ ವೈರಾಣು ಹರಡುವುದನ್ನು ತಡೆಗಟ್ಟಲು ಸರಕಾರ ಘೋಷಿಸಿದ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಜನರ ಸಂಕಷ್ಟವನ್ನು ಅರಿತು ಸ್ಪಂದಿಸಲು ಉಳ್ಳಾಲ ಅಳೇಕಲ ಜಮಾಅತ್ ಮುಂದಾಳುತ್ವದಲ್ಲಿ ಇತರ ಸಮಿತಿಗಳು ಮತ್ತು ಸಂಘ ಸಂಸ್ಥೆಗಳ ಸಂಪೂರ್ಣ ಸಹಕಾರದೊಂದಿಗೆ ಮತ್ತು ದೇಶ ವಿದೇಶಗಳಲ್ಲಿರುವ ಕೊಡುಗೈ ದಾನಿಗಳ ಸಹಾಯದೊಂದಿಗೆ ಊರಿನ ಯುವಕರ ತನು, ಮನ, ಧನದ ಸಹಕಾರದೊಂದಿಗೆ ಅಳೇಕಲ ಜಮಾಅತಿನಲ್ಲಿರುವ ಬಡವರು, ಮಧ್ಯಮ ವರ್ಗದವರು, ಶ್ರೀಮಂತರು ಎಂಬ ವ್ಯತ್ಯಾಸವಿಲ್ಲದೆ ಸರ್ವ ಜಮಾಅತ್ ಬಾಂಧವರಿಗೂ ಮತ್ತು ಹಿಂದು, ಮುಸ್ಲಿಂ, ಕ್ರೈಸ್ತ ಬಾಂಧವರಿಗೂ ಆಹಾರ ಧಾನ್ಯಗಳ ಒಂದು ಸಾವಿರ ಕಿಟ್ಟುಗಳನ್ನು ವಿತರಿಸಲಾಯಿತು. ತಲಾ 2,700 ಮೌಲ್ಯದ ಪ್ರತೀ ಕಿಟ್ಟುಗಳನ್ನು ಎಲ್ಲರ ಮನೆ ಬಾಗಿಲಿಗೆ ತಲುಪಿಸಲಾಯಿತು. ಅಳೇಕಲ ಜಮಾಅತ್ ಅಧ್ಯಕ್ಷರಾದ ಬಹು ಪಿ ಎಸ್ ಎಂ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಳ್ಳಾಲ ಕಿಟ್ಟುಗಳ ವಿತರಣಾ ಕಾರ್ಯಕ್ರಮದಲ್ಲಿ ದುವಾ ನೆರವೇರಿಸಿ ಈ ವಿಷಯವನ್ನು ತಿಳಿಸಿದರು.  ಪ್ರಸ್ತುತ ಕಾರ್ಯಕ್ರಮದಲ್ಲಿ   ಜಮಾಅತ್ ಉಪಾಧ್ಯಕ್ಷರಾದ ಅಶ್ರಫ್ ಯು ಡಿ, ಪ್ರಧಾನ ಕಾರ್ಯದರ್ಶಿ ಫಾರೂಕ್ ಹಾಜಿ, ಮದ್ರಸಾ ಸಂಚಾಲಕ ರಿಯಾಝ್, ಕಾರ್ಯ ದರ್ಶಿ ಜಾಫರ್, ಉಳ್ಳಾಲ ನಗರಸಭಾ ...

ಕೇಳೋರು ಯಾರು ರಿಕ್ಷಾ ಚಾಲಕರ ಗೋಳು...

ಕೇಳೋರು ಯಾರು ರಿಕ್ಷಾ ಚಾಲಕರ ಗೋಳು...     ಹೌದು..ಕಠಿಣ ಹಾಗೂ ಜನಸ್ನೇಹಿ ದುಡಿಮೆಯ ಮೂಲಕ ಗುರುತಿಸಲ್ಪಡುವ ರಿಕ್ಷಾ ಚಾಲಕರ ಇಂದಿನ ಸ್ಥಿತಿಯ  ಬಗ್ಗೆ ನಾವೆಲ್ಲ ಗಮನ ಹರಿಸಲೇಬೇಕಾಗಿದೆ.ಸದ್ಯದ ಲಾಕ್‌-ಡೌನ್ ಸ್ಥಿತಿಯಿಂದಾಗಿ ಇವರ ಬದುಕು ದುಸ್ತರವಾಗಿದೆ ಎನ್ನುವುದಂತೂ ತೀರಾ ವಾಸ್ತವ.           ವಿಶಾಲ ಮನಸ್ಸಿನ ರಿಕ್ಷಾ ಚಾಲಕರು ದಿನನಿತ್ಯದ ಜೀವನಕ್ಕಾಗಿ ಕಷ್ಟಪಟ್ಟು ದುಡಿಮೆ ಸಾಗಿಸುತ್ತಿದ್ದಾರೆ.ಲಾಕ್-ಡೌನ್‌ ನಿಂದಾಗಿ ಅವರ ಇಂದಿನ ಸ್ಥಿತಿ ತೀರಾ ಶೋಚನೀಯ.ವಿಶ್ವದ ನಾನಾ ಕಡೆಗಳಲ್ಲಿ ಹರಡಿಕೊಂಡಿರುವ ಮಹಾ ಮಾರಿ ಕೊರೊನ ವೈರಸ್ ನಿಂದ ದೇಶದ ಜನರೆಲ್ಲ  ಜೀವನ ಸಾಗಿಸುವಲ್ಲಿ ಕಂಗಾಲಾಗಿದ್ದಾರೆ. ಮಾತ್ರವಲ್ಲ ತಮ್ಮ ದಿನನಿತ್ಯದ ಆಹಾರಕ್ಕೆ ಪರದಾಡುವಂತಹ ಸ್ಥಿತಿಯೂ ಅವರದ್ದಾಗಿದೆ.ನಮ್ಮ‌ ಜಿಲ್ಲೆಯಲ್ಲಿ ಹೆಚ್ಚಿನವರು ತಮ್ಮ ಜೀವನೋಪಾಯಕ್ಕಾಗಿ  ರಿಕ್ಷಾದ ದುಡಿಮೆಯನ್ನೇ ಅವಲಂಬಿಸಿದ್ದು ಸದ್ಯ ಲಾಕ್‌-ಡೌನ್ ನಿಂದಾಗಿ ಇವರ  ಸ್ಥಿತಿಯು ತೀರಾ ಕಳವಳಕಾರಿಯಾಗಿದೆ.            ಯಾವುದೇ ತುರ್ತು ಸಂದರ್ಭಗಳಲ್ಲಿ ತಮ್ಮ ದುಡಿಮೆಯ ಮೂಲಕ ಇತರರಿಗೆ ನಾನಾ ರೀತಿಯಲ್ಲಿ ಸಹಾಯ ಸಹಕಾರಗಳನ್ನು ಮಾಡುವ ಈ ನಮ್ಮರಿಕ್ಷಾ ಚಾಲಕರು ಕರ್ತವ್ಯ ನಿಷ್ಠರು ಮಾತ್ರವಲ್ಲದೆ ಸಾರ್ವಜನಿಕರಿಗೆ ಅಪಘಾತ ಅಥವಾ ಇನ್ನು ಯಾವುದೇ ಬಗೆಯ  ತೊಂದರೆಗಳಾದಲ್ಲಿ  ಜನ...

ಬರಾಅತ್ ರಾತ್ರಿಯ ಪ್ರಾರ್ಥನೆ ಮನೆಯಲ್ಲಿ ಆಗಲಿ :> ಸಯ್ಯಿದ್ ಕೂರತ್ ತಂಗಲ್

السلام عليكم ورحمة الله وبركاته             ಇಸ್ಲಾಮಿನ ಪವಿತ್ರ ರಾತ್ರಿಗಳಲ್ಲಿ ಒಂದಾದ "ಶಅ್ ಬಾನ್ 15 ರ  ಬರಾಅತ್  ರಾತ್ರಿ 08/04/2020 ಬುಧವಾರ ಅಸ್ತ ಗುರುವಾರ ರಾತ್ರಿ ಆಗಿರುತ್ತದೆ. ಬರಾಅತ್ ಉಪವಾಸ 9-4-2020 ಗುರುವಾರ ಆಗಿರುತ್ತದೆ ಎಂದು ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾದ ಗೌರವಾನ್ವಿತ ಸಯ್ಯಿದ್ ಕೂರತ್ ತಂಗಲ್ ತಿಳಿಸಿದ್ದು, ಪುರಾತನ ಕಾಲದಿಂದಲೇ ಇದನ್ನು ಪವಿತ್ರ ರಾತ್ರಿಯಾಗಿ ಪರಿಗಣಿಸಿ, ಸತ್ಯ ವಿಶ್ವಾಸಿಗಳು ಮಸೀದಿಗಳಿಗೆ ತೆರಳಿ, ಸಾಮೂಹಿಕ ಪ್ರಾರ್ಥನೆ ಮಾಡುವುದು ರೂಢಿಯಾಗಿದೆ. ಆದರೆ ಇಂದು ದೇಶದಾದ್ಯಂತ ಮಾರಕವಾಗಿ ಪರಿಣಮಿಸಿರುವ ಕೋವಿಡ್ 19 ಹರಡುವುದನ್ನು ತಡೆಗಟ್ಟುವ ಸಲುವಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ಹೊರಡಿಸಿರುವ "ಲಾಕ್ ಡೌನ್" ಆದೇಶ ಜಾರಿಯಲ್ಲಿರುವುದರಿಂದ, ಸಾರ್ವಜನಿಕರು ಮಸೀದಿಗಳಿಗೆ ತೆರಳದೆ, ಮನೆಯಲ್ಲಿಯೇ ಪ್ರತ್ಯೇಕವಾಗಿ ಪ್ರಾರ್ಥಿಸಬೇಕಾಗಿ, ಎಲ್ಲಾ ಆಡಳಿತ ಸಮಿತಿ ಹಾಗೂ ಜಮಾಅತ್ ಬಾಂಧವರಲ್ಲಿ ಗೌರವಾನ್ವಿತ ಖಾಝಿ ಕೂರತ್ ತಂಗಲ್ ವಿಜ್ಞಾಪಿಸಿದ್ದಾರೆ.          ದೇಶದಲ್ಲೆಡೆ ವ್ಯಾಪಕವಾಗಿರುವ ಕೊರೋನಾ ವೈರಸ್ ನಿರ್ಮೂಲನೆಯಾಗಲು ಹಾಗೂ ದೇಶದ ಸರ್ವ ಧರ್ಮೀಯರ ಐಶ್ವರ್ಯ ಹಾಗೂ ನೆಮ್ಮದಿಗಾಗಿ ವಿಶೇಷವಾಗಿ ಪ್ರಾರ್ಥಿಸುವಂತೆಯೂ,ಈ ಮೂಲಕ ಮನವಿ ಮಾಡಲಾಗಿದೆ.

ಪರೀಕ್ಷೆ ಇಲ್ಲದೆ ಪಾಸ್

ಪರೀಕ್ಷೆ ಇಲ್ಲದೆ 7,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳು ಪಾಸ್! ರಾಜ್ಯದಲ್ಲಿನ 7, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಿಲ್ಲ. ಈ ವರ್ಷ ಎಲ್ಲರನ್ನೂ ಪಾಸ್ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಎಸ್‌ಎಸ್‌ಎಲ್‌ ಸಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಏ. 14ರ ನಂತರ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಾಗುತ್ತದೆ ಎಂದಿದ್ದಾರೆ. ವಿದ್ಯಾರ್ಥಿಗಳು ಈ ಹಿಂದಿನ ತರಗತಿಯ ಪರೀಕ್ಷಾ ಅಂಕಗಳ ಆಧಾರದ ಮೇಲೆ ಪಾಸ್ ಮಾಡಲಾಗುತ್ತದೆ ಎಂದಿದ್ದಾರೆ

ಎ ಸಿ ಎ ಕಾಂತಪುರಂ ಮುಫತ್ತಿಷ್ ಉಸ್ತಾದ್ ಮರೆಯಲಸಾಧ್ಯವಾದ ವ್ಯಕ್ತಿತ್ವ

ಉಳ್ಳಾಲದ ಸಯ್ಯಿದ್ ಮದನಿ ಅರೆಬಿಕ್ ಟ್ರಸ್ಟ್ ಅಧೀನದಲ್ಲಿ ಹಲವಾರು ವರ್ಷಗಳು ಮುಫತ್ತಿಷ್ ಆಗಿ ಸೇವೆಗೈದಿದ್ದ ಎ ಸಿ ಎ ಕಾಂತಪುರಂ ಉಸ್ತಾದ್ ಇಂದಿಗೂ ಉಳ್ಳಾಲದ ಜನಮಾನಸದಲ್ಲಿ ಅಮರರಾಗಿರುವರು. ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದರ ಪ್ರಾರಂಭಿಕ ಶಿಷ್ಯರೂ, ತನ್ನೂರಿನವರೂ ಆದ ಎಸಿಎ ಕಾಂತಪುರಂ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಪ್ರಗಲ್ಭ ವಿದ್ವಾಂಸರೂ, ಅಗಾಧ ಜ್ಞಾನಿಯೂ ಆಗಿದ್ದರು. ಉಸ್ತಾದರು ಉಳ್ಳಾಲದಲ್ಲಿ ಮುಫತ್ತಿಷ್ ಆಗಿದ್ದಂತಹ ಸಂದರ್ಭದಲ್ಲಿ ಎಲ್ಲರ ಪ್ರೀತಿಗೆ, ಮೆಚ್ಚುಗೆಗೆ ಪಾತ್ರರಾಗಿದ್ದರು.  ಮದ್ರಸ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯನ್ನು ಸ್ರಷ್ಟಿಸಿದ್ದರು. ಮದ್ರಸ ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ ಕಲಿಕಾ ವ್ಯವಸ್ಥೆಯಲ್ಲಿ ನವ ಹುಮ್ಮಸ್ಸು, ನವ ಚೈತನ್ಯವನ್ನು ತುಂಬಿದ್ದರು. ಅದೇ ಕಾರಣದಿಂದ ಅಂದಿನ ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ, ಊರವರಿಗೂ ಉಸ್ತಾದರೊಂದಿಗೆ ಅಗಾಧ ಗೌರವ ಈಗಲೂ ಇದೆ. ನನ್ನ ಪೂರ್ತಿ ಮದ್ರಸ ಜೀವನದ ಮುಫತ್ತಿಶ್ ಆಗಿದ್ದ ಉಸ್ತಾದರು ಅವರು ಮದ್ರಸಕ್ಕೆ ಇಂದು ಭೇಟಿಯಾಗುವರು ಎಂಬ ವಾರ್ತೆ ಮದ್ರಸ ಅಧ್ಯಾಪಕರಿಂದ ತಿಳಿದರೆ ಕಲಿಕೆಯಲ್ಲಿ ಎಲ್ಲರಿಗಿಂತ ಮುಂದೆ ಇದ್ದರೂ ಎದೆ ನಡುಕ ಪ್ರಾರಂಭವಾಗುತ್ತಿತ್ತು. ನಾನು ಅಕ್ಕರೆಕೆರೆ ಮದ್ರಸದಲ್ಲಿ ನಾಲ್ಕನೇ ತರಗತಿಯಲ್ಲಿದ್ದಾಗ ತಜ್ವೀದ್ ನಿಯಮದ ಮತ್ತು ಅಕ್ಷರ ಉಚ್ಛಾರಣೆಯ ಕುರಿತು ಒಂದೊಂದು ಪ್ರಶ್ನೆ ಕೇಳಿದ್ದರು. ಸಲೀಸಾಗಿ ಅದರ ಉತ್ತರವೂ ನೀಡ...