Skip to main content

Posts

Showing posts from December, 2019

ಹೊಸ ಪೌರತ್ವ ಕಾನೂನನ್ನು ವಿರೋಧಿಸಿ ಸಿಡಿದೆದ್ದ ಮಲೇಷ್ಯಾ ಪ್ರಧಾನಿ

ಮಲೇಷ್ಯಾ : ಮಲೇಷ್ಯಾ ಪ್ರಧಾನಿ ಮಹಾತಿರ್ ಮೊಹಮದ್ ಅವರು ಭಾರತದ ಹೊಸ ಪೌರತ್ವ ಕಾನೂನನ್ನು ಟೀಕಿಸಿದ್ದಾರೆ, ಇದು ಮುಸ್ಲಿಮರ ವಿರುದ್ಧ ತಾರತಮ್ಯವೆಂದು ಪರಿಗಣಿಸಲ್ಪಟ್ಟಿದೆ ಮತ್ತು ಭಾರತದಾದ್ಯಂತ ಮಾರಕ ಪ್ರತಿಭಟನೆಗಳನ್ನು ಹುಟ್ಟುಹಾಕಿದೆ ಎಂದರು. ಕೌಲಾಲಂಪುರ್ ಶೃಂಗಸಭೆಯಲ್ಲಿ. ಮಾತನಾಡಿದ ಅವರು ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) “ಅವಶ್ಯಕತೆ” ಯನ್ನು ಪ್ರಶ್ನಿಸಿದರು,ಮತ್ತು ಭಾರತೀಯರು “70 ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದಾರೆ”. ಈ ಕಾನೂನಿನಿಂದ ಜನರು ಸಾಯುತ್ತಿದ್ದಾರೆ. 70 ವರ್ಷಗಳಿಂದ ಅವರು ಯಾವುದೇ ಸಮಸ್ಯೆಯಿಲ್ಲದೆ ನಾಗರಿಕರಾಗಿ ಒಟ್ಟಾಗಿ ವಾಸಿಸುತ್ತಿರುವಾಗ ಇದನ್ನು ಮಾಡುವ ಅವಶ್ಯಕತೆ ಏಕೆ?” ಎಂದು ಕೇಳಿದರು. ಮೂರು ನೆರೆಹೊರೆಯ ದೇಶಗಳಿಂದ “ಕಿರುಕುಳಕ್ಕೊಳಗಾದ” ಅಲ್ಪಸಂಖ್ಯಾತರಿಗೆ ಪೌರತ್ವ ಪಡೆಯುವುದನ್ನು ಸಿಎಎ ಯ ಕಾನೂನು ಹೇಳುತ್ತದೆ ಆದರೆ ಮುಸ್ಲಿಮರಿಗೆ ಯಾಕಿಲ್ಲ? ಎಂದು ಪ್ರಶ್ನಿಸಿದರು. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಮತ್ತು ಭಾರತದ 1.3 ಬಿಲಿಯನ್ ಜನಸಂಖ್ಯೆಯಲ್ಲಿ ಸುಮಾರು 14 ಪ್ರತಿಶತದಷ್ಟು ಇರುವ 200 ಮಿಲಿಯನ್ ಮುಸ್ಲಿಮರನ್ನು ದೂರಮಾಡಲು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಾರೆ ಎಂಬ ಆತಂಕವನ್ನು ಕಾನೂನು ಹುಟ್ಟುಹಾಕಿದೆ. “ಈಗ ಜಾತ್ಯತೀತ ರಾಷ್ಟ್ರವೆಂದು ಹೇಳಿಕೊಳ್ಳುವ ಭಾರತವು ಕೆಲವು ಮುಸ್ಲಿಮರನ್ನು ಅವರ ಪೌರತ್ವವನ್ನು ಕಸಿದುಕೊಳ್ಳಲು ಕ್ರಮ ಕೈಗೊಳ್ಳುತ್ತಿರುವುದನ್ನು ನೋಡಿ ನನಗೆ ವಿ...

ಭ್ರಷ್ಟರನ್ನು ಹೊರತುಪಡಿಸಿ ಉಳ್ಳಾಲದ ಮಹಾ ಜನತೆಯು ಆಡಳಿತಾಧಿಕಾರಿಯನ್ನು ಸ್ವಾಗತಿಸುತ್ತದೆ – ಅಧ್ಯಕ್ಷರು

         ಪ್ರೆಸ್ ನೋಟ್ ಇತಿಹಾಸ ಪ್ರಸಿದ್ಧ ಉಳ್ಳಾಲ ಖುತುಬುಝ್ಝಮಾನ್ ಅಸ್ಸೆಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ. ಮತ್ತು ಕೇಂದ್ರ ಜುಮಾ ಮಸೀದಿ (402) ಇದರ ಆಡಳಿತ ಸಮಿತಿಗೆ 2016-17 ನೇ ಸಾಲಿನಲ್ಲಿ  ನ್ಯಾಯಯುತವಾದ ಚುನಾವಣೆ ನಡೆಯದೆ ಅನಧಿಕೃತವಾಗಿ ಆಡಳಿತವನ್ನು ವಶಪಡಿಸಿಕೊಂಡು ಸ್ವಯಂ ಘೋಷಿತವಾಗಿ  ಪದಾಧಿಕಾರಿಗಳನ್ನು ನೇಮಿಸಿ ಪ್ರಸ್ತುತ ವಜಾಗೊಂಡಿರುವ  ಅಬ್ದುಲ್ ರಶೀದ್ ಮತ್ತು ಸಹವರ್ತಿಗಳು ಕಳೆದ ಮೂರುವರೆ ವರ್ಷದಿಂದ ಕಾನೂನು ಉಲ್ಲಂಘನೆ,  ಅವ್ಯವಹಾರ,  ಭ್ರಷ್ಟಾಚಾರ,  ದಬ್ಬಾಳಿಕೆ,  ಸರ್ವಾಧಿಕಾರ ಮತ್ತು  ಸಮಾಜಘಾತುಕ ಶಕ್ತಿಗಳ ಪೋಷಣೆಯನ್ನು ನಡೆಸುತ್ತಾ ಬಂದಿದೆ. ಇವೆಲ್ಲವನ್ನು ಮನಗಂಡು  ಸರಕಾರದ ಸ್ವಾಯತ್ತ ಸಂಸ್ಥೆಯಾದ  ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು,ಉಳ್ಳಾಲ ದರ್ಗಾ ಆಡಳಿತ ಸಮಿತಿಯನ್ನು ಬರ್ಖಾಸ್ತು ಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಿ ಆದೇಶವನ್ನು (KSBW/MSC/08/DKD/2016/-17) ದಿನಾಂಕ 21-11-2019 ಗುರುವಾರ ದಂದು ಹೊರಡಿಸಿದೆ. ಇದನ್ನು ಉಳ್ಳಾಲದ ಮಹಾ  ಜನತೆಯು ಸ್ವಾಗತಿಸುತ್ತದೆ. ಆದರೆ  ಅಧಿಕಾರ ದಾಹಿಗಳಾದ ಉಚ್ಚಾಟಿತ ಅಬ್ದುಲ್ ರಶೀದ್ ನೇತೃತ್ವದ ಅನಧಿಕೃತ ಆಡಳಿತ ಸಮಿತಿ ಮತ್ತು ಅವರ ಕೆಲವು ಬೆಂಬಲಿಗರು, ಗಲಭೆಗಳಿಗೆ ಪ್ರಚೋದನೆ ನೀಡಿ ಜನರಿಗೆ ವಕ್ಫ್ ಕಾಯ್ದೆ ಮತ್ತು ಆದೇಶದ ಬಗ್ಗೆ ತಪ್ಪು...

ಉಳ್ಳಾಲ ದರ್ಗಾ ಆಡಳಿತಾಧಿಕಾರಿ ನೇಮಕ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ – ಇಬ್ರಾಹೀಂ ಗೂನಡ್ಕ

ಮಂಗಳೂರು : ಉಳ್ಳಾಲ ಸಯ್ಯದ್ ಮದನಿ ದರ್ಗಾ ಹಾಗೂ ಅದರ ಅಧೀನ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು ಸರಕಾರ ಕುತಂತ್ರ ನಡೆಸುತ್ತಿದೆ ಎಂಬ ವಿಚಾರವು ಸತ್ಯಕ್ಕೆ ದೂರವಾದದ್ದು ಎಂದು ಇಬ್ರಾಹೀಂ ಗೂನಡ್ಕ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ಉಳ್ಳಾಲ ಸಯ್ಯದ್ ಮದನಿ ದರ್ಗಾ ಹಾಗೂ ಅದರ ಅಧೀನ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನಾಗಿ ನನ್ನನ್ನು ನೇಮಕ ಮಾಡಿದೆ. ಈ ಆದೇಶಕ್ಕೆ ತಡೆ ನೀಡುವಂತೆ ಕೋರಿ ಉಳ್ಳಾಲ ದರ್ಗಾ ಸಮಿತಿಯವರು ಮನವಿ ಸಲ್ಲಿಸಿದ್ದರು. ರಾಜ್ಯ ಉಚ್ಚ ನ್ಯಾಯಾಲಯವು ಪ್ರಕರಣದ ಬಗ್ಗೆ ತನಿಖೆ ನಡೆಸಿ ಆಡಳಿತ ಅಧಿಕಾರಿ ನೇಮಕಾತಿ ಬಗ್ಗೆ ತಡೆಯಾಜ್ಞೆ ನೀಡಲು ನಿರಾಕರಿಸಿ, ಸರಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಆದರೆ ಈ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ರವಾನಿಸಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದು ವಿಷಾದನೀಯ ಎಂದರು. ಪ್ರಸ್ತುತ ಉಳ್ಳಾಲ ಸಯ್ಯದ್ ಮದನಿ ದರ್ಗಾ ರಾಜ್ಯ ವಕ್ಫ್ ಮಂಡಳಿಯ ಆಧೀನದಲ್ಲಿದ್ದು, ಈ ಸಂಸ್ಥೆಯ ದೈನಂದಿನ ಆಡಳಿತಕ್ಕೆ ಸಂಬಂಧಿಸಿದ ವಿಷಯ, ನೂತನ ಆಡಳಿತ ಮಂಡಳಿಯ ರಚನೆಯ ಸಿದ್ಧತೆ, ಮತ್ತು ಪ್ರತೀ 5 ವರ್ಷಕ್ಕೆ ಒಮ್ಮೆ ನಡೆಯುವ ಉರೂಸ್’ಗೆ ಪೂರ್ವ ತಯಾರಿ ಮಾಡುವಂತೆ ನನ್ನನ್ನು ಸರ್ಕಾರ 6 ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ ಎಂದು ತಿಳಿಸಿದರು. ವಕ್ಫ್ ಮಂಡಳಿಗೆ ಒಳಪಟ್ಟ ಮಸೀದಿ ಅಥಾವ ದರ್ಗಾಗಳಲ್ಲಿ ಗೊಂದಲಗಳು ನಿರ್ಮ...

ಡಿಸೆಂಬರ್ -7 ಶನಿವಾರ ಅಸ್ತ ಆದಿತ್ಯವಾರ ರಾತ್ರಿ ರಬೀಉಲ್ ಆಖಿರ್ 11 ಜೀಲಾನಿ ದಿನ

ನಾಳೆ  ಡಿಸೆಂಬರ್ -7 ಶನಿವಾರ ಅಸ್ತ ಆದಿತ್ಯವಾರ ರಾತ್ರಿ ರಬೀಉಲ್ ಆಖಿರ್ 11 ಜೀಲಾನಿ ದಿನವಾಗಿರುತ್ತದೆ ಎಂದು ಉಳ್ಳಾಲದ ಸರ್ವ ಮೊಹಲ್ಲಾಗಳ ಗೌರವಾನ್ವಿತ ಖಾಝಿಯೂ, ದ.ಕ.ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿಯೂ ಆದ  ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಲ್ ಘೋಷಿಸಿದ್ದಾರೆ. --------------------------------