ಹೌದು, ಈ ದುಃಖತಪ್ತ ಮಾತು ಕಣ್ಣಂಬನಿ ಮಿಡಿಯುತ್ತಾ ನನಗೆ ಕರೆಮಾಡಿ ಹೇಳಿದ್ದು *" ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರಾಗಿದ್ದರು.* ನಾನು ಹಾಸನದತ್ತ ಪಯಣ ಬೆಳೆಸಿದ ಆದಿಯಿಂದ ಜನಾಝ ಸಿಗುವವರೆಗೂ ನದಿಗೆ ಕಾಲೆಡವಿ ಬಿದ್ದು ಕಾಣದಿದ್ದ ಸಿರಾಜ್ ನ ಪಾವನ ಜನಾಝ ಸಿಕ್ಕಿತಾ ಇಕ್ಬಾಲ್ ಎಂದು ನನಗೆ ಪದೇ ಪದೇ ಕರೆಮಾಡಿ ಕೇಳುತ್ತಿದ್ದರು. ಆ ನಂಡೆ ಕುಂಞಿ ಎಂಬ ಪದ ಈಗಲೂ ನನ್ನ ಕಿವಿಗೆ ಮಾರ್ದನಿಸುತ್ತಿದೆ. ಹೇ.. ಸಿರಾಜ್ ನೀನು ಅದೆಷ್ಟು ಭಾಗ್ಯವಂತ ಕಣೋ, ನದಿ ತಡಿಯಲ್ಲಿ ಬೃಹತ್ ಸರೀಸೃಪಗಳು, ವಿಶಿಷ್ಟ ರೀತಿಯ ಮೀನುಗಳು, ಮೊಸಳೆಗಳು ಇದ್ದರೂ ಕೂಡಾ ನಿನ್ನ ಶರೀರಕ್ಕೆ ಯಾವುದೇ ಕೊರತೆಯಾಗದಿರಲು *ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್,ಕುರ್ರತುಸ್ಸದಾತ್ ಸಯ್ಯದ್ ಕೂರಃ ತಙಲ್* ರಂತಹ ಹಲವು ವಿದ್ವಾಂಸರು, ನಿನಗಾಗಿ ಕಂಬನಿ ಮಿಡಿದ ನೂರಾರು ಜೀವಗಳು ಓದಿದ ನಾರಿಯತ್ ಸ್ವಲಾತುಗಳು, ಪ್ರಾರ್ಥನೆಯ ಫಲವೆಂಬಂತೆ ಅದೇ ರೀತಿ ನೀನು ಕಂಠಪಾಠ ಮಾಡಿದ 15 ಜುಝ್ಅ ಹಾಗು ಕಲಿತ ಇಲ್ಮ್ ನ ಫಲವೆಂಬಂತೆ ನಿನ್ನ ಶರೀರ ಪೂರ್ಣ ಸಲಾಮತ್ ಆದ ರೀತಿಯಲ್ಲಿ ಮೇಲೆಕ್ಕೆತ್ತಲಾಯಿತ್ತಲ್ಲವೇ. ಅದರಲ್ಲೂ ಆ ನದಿಯಲ್ಲಿ ಬಿದ್ದು ಮರಣಹೊಂದಿದವರ ಮಯ್ಯಿತ್ ಈವರೆಗೆ ಪರಿಪೂರ್ಣವಾಗಿ ಸಿಕ್ಕಿರಲಿಲ್ಲವಂತೆ ಎಂದು ಅಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿಯವರು, ಪೋಲೀಸರು ಹೇಳಿದ್ದು ಸಿರಾಜಿನ ಶರೀರ ಪೂರ್ಣವಾಗಿ ಸಿಕ್ಕಿದಾಗ ಅವರೆಲ್ಲಾ ಮೂಖವಿಸ್ಮಿತರಾಗಿ " ಇವನೆಷ್ಟು ಭಾಗ...