ರಂಝಾನ್ ತಿಂಗಳ ವೃತಾಚರಣೆ ಮುಗಿದು ವಿಶ್ವಾಸಿ ಸಮುದಾಯವು ಪವಿತ್ರ ಈದುಲ್ ಫಿತ್ರ್ ಹಬ್ಬ ಕ್ಕೆ ತೆರಳುತಿದ್ದು ರಂಝಾನ್ ತಿಂಗಳಲ್ಲಿ ನಡೆಸಿದ ಆತ್ಮಶುದ್ದಿ ಮತ್ತು ಪವಿತ್ರತೆ ಸಂದೇಶಗಳನ್ನು ಸಮಾಜದಲ್ಲಿ ಹರಡುವಂತಾಗಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಖುರ್ರತ್ತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಲ್ ಮದನಿ ಅಲ್ ಬುಖಾರಿ ಕೂರತ್ ಕರೆ ನೀಡಿದ್ದಾರೆ.
ಸಮಾಜದ ಎಲ್ಲ ವರ್ಗದ ಜನರ ಮಧ್ಯೆ ಶಾಂತಿ ಮತ್ತು ಸಾಮರಸ್ಯ ಖಾತರಿ ಪಡಿಸಲು ಈದ್ ದಿನವು ಕಾರಣವಾಗ ಬೇಕೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ
ಈದ್ ಆಚರಣೆ ಆತ್ಮ ಶುಧ್ಧಿ ಮತ್ತು ಸಾಮರಸ್ಯದ ಸಂದೇಶ ನೀಡುವಂತಾಗಲಿ
ಖಾಝಿ ಬೇಕಲ್ ಉಸ್ತಾದ್.
ಒಂದು ತಿಂಗಳ ಕಠಿಣ ವ್ರತ ಮುಗಿದು ಮುಸ್ಲಿಂ ಸಮುದಾಯ ಪವಿತ್ರ ಈದುಲ್ ಫಿತರ್ ಆಚರಣೆಗೆ ತೆರಳುತ್ತಿದ್ದು , ಅದು ಒಂದು ತಿಂಗಳ ಕಾಲ ಗಳಿಸಿದ ಆತ್ಮ ಶುಧ್ದಿ ಮತ್ತು ಪರಸ್ಪರ ಸೌಹಾರ್ದ ದ ಸಂದೇಶಗಳನ್ನು ಸಮಾಜದಲ್ಲಿ ಸಾರುವಂತಾಗಬೇಕೆಂದು ದಕ್ಷಿಣ ಕರ್ನಾಟಕದ ಸಂಯುಕ್ತ ಮೊಹಲ್ಲಾಗಳ ಖಾಝಿ ಯಾಗಿರುವ ಮೌಲಾನಾ ಪಿ.ಎಂ.ಇಬ್ರಾಹಿಮ್ ಮುಸ್ಲಿಯಾರ್ ಬೇಕಲ್ ಕರೆ ನೀಡಿದ್ದಾರೆ
ರಂಝಾನ್ ತಿಂಗಳು ಮನುಷ್ಯನ ಆಂತರಿಕ ಮತ್ತು ಬಾಹ್ಯ ಪರಿಶುಧ್ದಿಯನ್ನು ಸಾಧಿಸಲು ಸೃಷ್ಟಿ ಕರ್ತನಾದ ಅಲ್ಲಾಹನು ಮೀಸಲಿರಿಸಿದ ದಿನಗಳಾಗಿದ್ದು ಅದು ಮುಗಿದ ಮೇಲೂ ಆಂತರಿಕ ನೈರ್ಮಲ್ಯ ಕದಡುವ ಯಾವುದೇ ಕೆಲಸಗಳನ್ನು ವಿಶ್ವಾಸಿ ಸಮೂಹ ಮಾಡಬಾರದು, ರಂಝಾನ್ ತಿಂಗಳ ಒಳಿತುಗಳನ್ನು ಮುಂದುವರಿಸುವಂತೆ ಅವರು ಆಹ್ವಾನ ನೀಡಿದ್ದಾರೆ
ಸಮಾಜದ ಎಲ್ಲ ವರ್ಗದ ಜನರ ಮಧ್ಯೆ ಶಾಂತಿ ಮತ್ತು ಸಾಮರಸ್ಯ ಖಾತರಿ ಪಡಿಸಲು ಈದ್ ದಿನವು ಕಾರಣವಾಗುವುದೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ


