ಉಳ್ಳಾಲ : ತ್ವೈಬಾ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರೆಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ತ್ವೈಬಾ ಮಹಿಳಾ ಶರೀಅತ್ ಕಾಲೇಜಿನಲ್ಲಿ ಎರಡು ವರ್ಷ ಕಲಿತ ವಿದ್ಯಾರ್ಥಿನಿಯರಿಗೆ ಸರ್ಟಿಫಿಕೇಟ್ ವಿತರಣೆ ಮತ್ತು ತ್ವೈಬಾ ಸ್ಕೂಲ್ ಆಫ್ ಕುರ್ ಆನ್ ವೀಕೆಂಡ್ ಕ್ಲಾಸ್ ಇದರ ಎರಡನೇ ವಾರ್ಷಿಕ ಕಾರ್ಯಕ್ರಮ ತಾಜುಲ್ ಉಲಮಾ ಆಡಿಟೇೂರಿಯಂ ಮೇಲಂಗಡಿಯಲ್ಲಿ ಸೈಯ್ಯಿದ್ ಜಲಾಲ್ ತಂಙಳ್ ಅಳೇಕಲ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ತ್ವೈಬಾ ಸಂಸ್ಥೆಯ ನಿರ್ದೇಶಕರಾದ ಎಂ.ಸಿ ಮುಹಮ್ಮದ್ ಫೈಝಿ ಪಟ್ಲ ಉಸ್ತಾದರು ಕಾರ್ಯಕ್ರಮ ಉದ್ಘಾಟಿಸಿದರು.ತ್ವೈಬಾ ಮಹಿಳಾ ಶರೀಅತ್ ಕಾಲೇಜಿನ ಫ್ರೋಫೆಸರ್ ಇಸ್ಮಾಯಿಲ್ ನಈಮಿ ಮಂಗಳಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯಲ್ಲಿ ಶಿಕ್ಷಣ ಪೂರ್ತೀಕರಿಸಿದ ವಿದ್ಯಾರ್ಥಿನಿಯರಿಗೆ ಸರ್ಟಿಫಿಕೇಟ್ ನೀಡಲಾಯಿತು ಮತ್ತು ಉನ್ನತ ಅಂಕ ಪಡೆದ ವಿದ್ಯಾರ್ಥಿನಿ ಸಯ್ಯಿದತ್ ಜಶೀರಾ ಇಲ್ಹಾಮ್ ಬೀವಿ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತ್ವೈಬಾ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕ ಮುಸ್ತಫ ಮಾಸ್ಟರ್ ಉಳ್ಳಾಲ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.



