Skip to main content

ಯಂಡೆ ಕುಞಿ ಸಿರಾಜ್ ಯುಡೆ ಜನಾಝ ಕಿಟ್ಟಿಯೋ.. ಮರ್ಝೂಖಿ- ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಮಾತು...



ಹೌದು, ಈ ದುಃಖತಪ್ತ ಮಾತು ಕಣ್ಣಂಬನಿ ಮಿಡಿಯುತ್ತಾ ನನಗೆ ಕರೆಮಾಡಿ ಹೇಳಿದ್ದು *" ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರಾಗಿದ್ದರು.* ನಾನು‌ ಹಾಸನದತ್ತ ಪಯಣ ಬೆಳೆಸಿದ ಆದಿಯಿಂದ ಜನಾಝ ಸಿಗುವವರೆಗೂ ನದಿಗೆ ಕಾಲೆಡವಿ ಬಿದ್ದು ಕಾಣದಿದ್ದ ಸಿರಾಜ್ ನ ಪಾವನ ಜನಾಝ ಸಿಕ್ಕಿತಾ ಇಕ್ಬಾಲ್ ಎಂದು ನನಗೆ ಪದೇ ಪದೇ ಕರೆಮಾಡಿ ಕೇಳುತ್ತಿದ್ದರು. ಆ ನಂಡೆ ಕುಂಞಿ ಎಂಬ ಪದ ಈಗಲೂ ನನ್ನ ಕಿವಿಗೆ ಮಾರ್ದನಿಸುತ್ತಿದೆ‌.

ಹೇ..
ಸಿರಾಜ್ ನೀನು ಅದೆಷ್ಟು ಭಾಗ್ಯವಂತ ಕಣೋ, ನದಿ ತಡಿಯಲ್ಲಿ ಬೃಹತ್ ಸರೀಸೃಪಗಳು, ವಿಶಿಷ್ಟ ರೀತಿಯ ಮೀನುಗಳು, ಮೊಸಳೆಗಳು ಇದ್ದರೂ ಕೂಡಾ ನಿನ್ನ ಶರೀರಕ್ಕೆ ಯಾವುದೇ ಕೊರತೆಯಾಗದಿರಲು *ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್,ಕುರ್ರತುಸ್ಸದಾತ್ ಸಯ್ಯದ್  ಕೂರಃ ತಙಲ್* ರಂತಹ ಹಲವು ವಿದ್ವಾಂಸರು, ನಿನಗಾಗಿ ಕಂಬನಿ ಮಿಡಿದ ನೂರಾರು ಜೀವಗಳು ಓದಿದ ನಾರಿಯತ್ ಸ್ವಲಾತುಗಳು, ಪ್ರಾರ್ಥನೆಯ ಫಲವೆಂಬಂತೆ ಅದೇ ರೀತಿ ನೀನು ಕಂಠಪಾಠ ಮಾಡಿದ 15 ಜುಝ್ಅ ಹಾಗು ಕಲಿತ ಇಲ್ಮ್ ನ  ಫಲವೆಂಬಂತೆ ನಿನ್ನ ಶರೀರ ಪೂರ್ಣ ಸಲಾಮತ್ ಆದ ರೀತಿಯಲ್ಲಿ ಮೇಲೆಕ್ಕೆತ್ತಲಾಯಿತ್ತಲ್ಲವೇ. ಅದರಲ್ಲೂ ಆ ನದಿಯಲ್ಲಿ ಬಿದ್ದು ಮರಣಹೊಂದಿದವರ ಮಯ್ಯಿತ್ ಈವರೆಗೆ ಪರಿಪೂರ್ಣವಾಗಿ ಸಿಕ್ಕಿರಲಿಲ್ಲವಂತೆ ಎಂದು ಅಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿಯವರು, ಪೋಲೀಸರು ಹೇಳಿದ್ದು ಸಿರಾಜಿನ ಶರೀರ ಪೂರ್ಣವಾಗಿ ಸಿಕ್ಕಿದಾಗ ಅವರೆಲ್ಲಾ ಮೂಖವಿಸ್ಮಿತರಾಗಿ " ಇವನೆಷ್ಟು ಭಾಗ್ಯವಂತ ಕಣ್ರೀ ಎಂದು ಹೇಳಿದ್ದು ಗೆಳೆಯನೊಬ್ಬ ಹೇಳಿದಾಗ ಅದಕ್ಕೆಲ್ಲಾ ಕಾರಣ ನಿನಗಾಗಿ ಕಂಬನಿ ಮಿಡಿದು ಪ್ರಾರ್ಥಿಸಿದ ನೂರಾರು ಮನಸ್ಸುಗಳಾಗಿದೆ‌ ಸಿರಾಜ್..

ನನ್ನ ಪ್ರೀತಿಯ ಶಿಷ್ಯರಲ್ಲಿ ನೀನೂ ಒಬ್ಬ ಕಣೋ, ಅದೆಂತಾ ಸ್ವಭಾವ, ಅದಕ್ಕೆ ತಕ್ಕ ಮುಗ್ಥತೆ. ಯಾವಾಗಲೂ ಮುಗುಳ್ನಗುವ ಮುಖ ಚಹರೆ. ಅಲ್ ಮದೀನಾ ಸಂಸ್ಥೆಯ ಉಸ್ತಾದರುಗಳೆಲ್ಲಾ ಅದೇನೇ ಕೆಲಸವಿರಲಿ ಅವರಿಗೆ ಥಟ್ಟನೆ ನೆನಪಾಗುವುದು 'ಸಿರಾಜ್' ನಿನ್ನ ಹೆಸರಾಗಿದೆ ಕಣೋ. ಅವರು ಕರೆದಾಗ ಓಡೋಡಿ ಬರುವ ದೃಶ್ಯ ನನ್ನ ಕಣ್ಣಂಚಿನಲ್ಲಿ ಈಗಲೂ ತೇಲಿಬರುತ್ತಿದೆ ಕಣೋ.

ಪ್ರವಾದಿವರ್ಯರ ಪ್ರಕೀರ್ತನಾ ಸಾಲುಗಳಾದ ಬುರ್ದಾ ಶರೀಫ್ ನಿನಗೆ ಅದೆಷ್ಟು ಇಷ್ಟ ಕಣೋ. ಬುರ್ದಾ ಹಾಡಲೆಂದು ನೀನು ಅದೆಷ್ಟು ವೇದಿಕೆಗಳು ಹತ್ತಿದ್ದಿಯಾ. ಝಿಯಾರತ್ ಅಂದರೆ ನಿನಗೆ ಪಂಚಪ್ರಾಣ, ನನ್ನೊಂದಿಗೆ ಕೇರಳ,ತಮಿಳ್ನಾಡು ಕಡೆಗೂ ನೀನು ಬಂದಿದ್ದೀಯ. ಅದರ ಫೋಟೋಗಳಲ್ಲಿ  ಮುಂದೆ ನಿಂತು ಆಮೀನ್ ಹೇಳುತ್ತಿದ್ದನ್ನು ನೋಡುವಾಗ ಆ ದೃಶ್ಯವೆಲ್ಲಾ ನೆನಪಿಗೆ ಬರುತ್ತಿದೆ.

ನೀನು ಪಠ್ಯ ವಿಷಯದಲ್ಲಿ ಮಾತ್ರವಲ್ಲ ಪಠ್ಯೇತರ ವಿಷಯದಲ್ಲೂ ಮುಂಪಕ್ತಿಯಲ್ಲಿದ್ದೆ. ಅದಕ್ಕೆ ನಿದರ್ಶನವೆಂಬಂತೆ ಈ ಕಳೆದ
ಕೆಲವು ತಿಂಗಳ ಹಿಂದೆ ಅಲ್‌ ಮದೀನಾ ಕ್ಯಾಂಪಸಿನಲ್ಲಿ ನಡೆದ *ಮುಜಸ್ಸಮ್ 2k19* ಪ್ರತಿಭಾ ಕಾರ್ಯಕ್ರಮದಲ್ಲಿ *ಟೀಮ್ ಫರ್ಹಾನ್* ಚಾಂಪಿಯನ್ ಆಗಿ ಹೊರಹೊಮ್ಮಿತು. ಅದಕ್ಕೆ ಎಲ್ಲಾ  ಕಾರಣ ನಿನ್ನ ಓಡಾಟ, ಸರಿಸಾಟಿಯಿಲ್ಲದ ನಿಯಂತ್ರಣವಾಗಿತ್ತು. ಇದರ ಜೊತೆಗೆ ಕಳೆದ ಕೆಲವು ತಿಂಗಳ ಹಿಂದೆ ಕಾಟಿಪಳ್ಳ ದಲ್ಲಿ ನಡೆದ SJM state level ಪ್ರತಿಭಾ ಸಂಗಮದಲ್ಲಿ ದ‌.ಕನ್ನಡ ಜಿಲ್ಲೆಯ ಪರವಾಗಿ ಭಾಗಿಯಾಗಿ ಎಲ್ಲರ ಪ್ರಶಂಸೆ ನೀನು ಗಿಟ್ಟಿಸಿಕೊಂಡಿದ್ದೀಯ ಕಣೋ. ಅವನ ತೀರ್ಮಾನಕ್ಕೆ ಎಲ್ಲರೂ ತಲೆಬಾಗಲೇಬೇಕು. ಅದರಂತೆ ನೀನು ಬೇಗ ಹೋಗಿಬಿಟ್ಟೆ.

ಇನ್ನು ನಿನ್ನ ಮಯ್ಯಿತ್ ಸಿಕ್ಕಿದ್ದೇ ತಡ, ನಿನ್ನ ಮಯ್ಯಿತ್ ಕಾಣಲು ಅದೆಷ್ಟೋ ಆಲಿಂಗಳು, ಉಸ್ತಾದರುಗಳು, ನಮ್ಮ ಅಲ್ ಮದೀನಾ ಸಂಸ್ಥೆಯ ಅವನ ಗೆಳೆಯರು, ನನ್ನ ಮರ್ಝೂಖಿ ಸಹಮಿತ್ರರು, ನೆರೆಯ ಸಂಸ್ಥೆ ದಾರುಲ್ ಇರ್ಶಾದ್ ಸಂಸ್ಥೆಯ ನಿನ್ನ ಅಣ್ಣನ ಗೆಳೆಯರು ಕೂಡಾ ಬಂದಿದ್ದು ಎಲ್ಲರ ಬಾಯಿ ಮಂತ್ರಿಸುತ್ತಿದ್ದು ಸಿರಾಜ್ ಅದೆಷ್ಟು ಒಳ್ಳೆಯ ಹುಡುಗ, ಅಲ್ಲಾಹು ಒಳ್ಳೆಯವರನ್ನೆಲ್ಲಾ ಬೇಗನೇ ತನ್ನ ಬಳೆ ಕರೆಸಿಕೊಳ್ಳುತ್ತಾನೆ. ಆ ಪಾಲಿಗೆ ನೀನು ಕೂಡಾ ಸೇರಿಬಿಟ್ಟೆ ಕಣೋ. ಮೊನ್ನೆ ನಿನ್ನ ಮಯ್ಯಿತಿನ ಮುಂದೆಯೇ ನಿನ್ನ ಕಾಣಲು ಬಂದ ಈ ವಿಶ್ವಾಸಿ ಜನರೆಲ್ಲಾ ನಿನಗಾಗಿ ಕಣ್ಣಂಬನಿ ಅಶ್ರುಧಾರೆಯಾಗಿಸಿ ಓದಿದ ಕುರ್'ಆನುಗಳು, ದ್ಸಿಕ್ರ್-ತಹ್ಲೀಲುಗಳು, ಪ್ರಾರ್ಥನೆಗಳು ಅದರಲ್ಲೂ ಕೊನೆಯದಾಗಿ ಅರ್ಧರಾತ್ರಿ ಹೊತ್ತಿಗೆ ಕಣ್ಣೀರು ಸುರಿಸುತ್ತಾ *ಉಸ್ಮಾನ್ ಜೌಹರಿ*  ಉಸ್ತಾದರ ಪ್ರಾರ್ಥನೆ ಎಲ್ಲವೂ ನಿನಗೆ ಸಿಕ್ಕಿತಲ್ಲವೇ..ನೀನು ನಿಜಕ್ಕೂ ಭಾಗ್ಯವಂತ ಎಂದು ಹೇಳುವುದರಲ್ಲಿ ಯಾವುದೇ ಸಂಶಯವಿಲ್ಲ ಕಣೋ...

ಕಟ್ಟಕಡೆಯದಾಗಿ ಪೂರ್ವಿಕರಾದ ಅಂಬಿಯಾಗಳು, ಔವುಲಿಯಾಗಳು ಅಲ್ಲಾಹನ ಇಬಾದತ್ ಮಾಡುತ್ತಿದ್ದ ಸುಮಾರು ಒಂದುವರೆ ಗಂಟೆಗೆ ನಿನ್ನ ಜನಾಝ ದಫನ್ ಮಾಡಿದಾಗ ನಿನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ನಿನ್ನ ತಂದೆ, ತಾಯಿ ಕುಟುಂಬಿಕರ ರೋಧನ ಮುಗಿಲು ಮುಟ್ಟುವಂತಿತ್ತು. ಅವರನ್ನೆಲ್ಲಾ ಸಮಾಧಾನ ಮಾಡಿಸಿ *ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್* ಮಗುವಿಗಾಗಿ ಪ್ರಾರ್ಥಿಸಿದ್ದಾರೆ ಎಂದು ಧೈರ್ಯ ಹೇಳಿದೆನು‌. ಸಿರಾಜ್ ಭಾಗ್ಯಶಾಲಿ ಎಂದೂ ಅವನಿಂದಲೇ ನೀವು ದ್ವಿಲೋಕ ವಿಜಯಿಯಾಗಲಿರುವಿರಿ ಎಂದೂ ಹೇಳಿ ನಾವು ಮರಳಿದೆವು..😢

ನಿನ್ನ ಮರಣದ ವಿವರ ಕೇಳಿ ನಿನ್ನ ಹೆಸರಲ್ಲಿ ಹಲವಾರು ವಾಟ್ಸಾಫ್ ಗ್ರೂಪುಗಳು ಮಾಡಿ ಅದರ ಮುಖಾಂತರ " ಹತ್ತಾರು ಕುರ್'ಆನ್ ಖತಮುಗಳು, ನೂರಾರು ಯಾಸೀನ್ ಮತ್ತಿನ್ನಿತರ ಸೂರಾಗಳು ಲಕ್ಷ ಲಕ್ಷಗಟ್ಟಲೆ ದ್ಸಿಕ್ರ್-ತಹ್ಲೀಲುಗಳನ್ನು ಎಲ್ಲರೂ ನಿನ್ನ ಮೇಲೆ ಸಮರ್ಪಿಸಿದರು.ಇದನ್ನೆಲ್ಲಾ ಕಾಣುವಾಗ ನನ್ನ ಶಿಷ್ಯನಿಗೆ ಸಿಕ್ಕ ಸ್ಥಾನಮಾನ ಕಂಡು ನೆನೆಯುವಾಗ ನನಗೆ ನೀನು ನನ್ನ ಶಿಷ್ಯ ಎಂದು ಹೇಳಲು ನನಗೆ ಅಭಿಮಾನವಾಗುತ್ತಿದೆ ಕಣೋ‌‌. ಆಲಿಂ ಆಗಬೇಕು ಎಂಬ ನಿನ್ನ ನಿಯ್ಯತ್ತಿಗೆ ತಕ್ಕಂತೆ ಸಮೂಹದಲ್ಲಿ ಆಲಿಂಗಳಿಗೆ ಸಿಗುವ ಸ್ಥಾನಮಾನ, ಪ್ರಾರ್ಥನೆ ಎಲ್ಲವೂ ನೀನು ಗಿಟ್ಟಿಸಿಕೊಂಡಿದ್ದೀಯ.

ಓ ಸಿರಾಜ್ ನೀನು ನಿಜಕ್ಕೂ ಭಾಗ್ಯವಂತ ಕಣೋ. ನಾಳೆ ಮಹ್ಶರಾ ಲೋಕದಲ್ಲಿ ನಿನ್ನ ತಂದೆ-ತಾಯಿ, ಅಣ್ಣ-ತಮ್ಮಂದಿರ ಕೈ ಹಿಡಿದು ಸ್ವರ್ಗಕ್ಕೆ ಕೊಂಡೊಯ್ಯುವಾಗ ನಮ್ಮನ್ನೂ ನೀನು ಮರೆಯಬಾರದು ಸಿರಾಜ್..🙏🏻😢

*ಅಲ್ಲಾಹು ನನ್ನ ಶಿಷ್ಯ ಸಿರಾಜಿನ ಕಬರ್ ಪ್ರಕಾಶಮಯಗೊಳಿಸಲಿ, ಅವನಿಗಾಗಿ ಓದಿದ ಕುರ್'ಆನ್, ದ್ಸಿಕ್ರ್ ತಹ್ಲೀಲುಗಳು ಎಲ್ಲವನ್ನೂ ನೀನು ಸ್ವೀಕರಿಸಿ ಆ ಕುಟುಂಬಕ್ಕೆ ಸಮಾಧಾನ ನೀಡಿ ಅನುಗ್ರಹಿಸಬೇಕು ಅಲ್ಲಾಹ್, ಆಮೀನ್...🤲🏻*

*✍🏻ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ*

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.