Skip to main content

Posts

Showing posts from March, 2020

ಭಾರತದ ಗ್ರ್ಯಾಂಡ್ ಮುಫ್ತಿ ಶೇಖ್ ಅಬೂಬಕರ್ ಅಹ್ಮದ್ ಅವರು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಗೌರವಾನ್ವಿತ ಗೃಹ ಸಚಿವ ಅಮಿತ್ ಶಾ ಭೇಟಿ

ಭಾರತದ ಗ್ರ್ಯಾಂಡ್ ಮುಫ್ತಿ ಶೇಖ್ ಅಬೂಬಕರ್ ಅಹ್ಮದ್ ಅವರು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಗೌರವಾನ್ವಿತ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯ ತಮ್ಮ ಕಚೇರಿಗಳಲ್ಲಿ ನಿನ್ನೆ ಸಂಜೆ ಭೇಟಿಯಾದರು.  ಪ್ರಧಾನಿ ಮತ್ತು ಗೃಹ ಸಚಿವರೊಂದಿಗಿನ ಅವರ ಸುದೀರ್ಘ ಸಂಭಾಷಣೆಯಲ್ಲಿ, ಗ್ರ್ಯಾಂಡ್ ಮುಫ್ತಿ ನೇತೃತ್ವದ ನಿಯೋಗವು ಹೊಸ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ನಾಗರಿಕರ ರಾಷ್ಟ್ರೀಯ ನೋಂದಾವಣೆ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಕುರಿತು ಜನರ ಕಳವಳಗಳ ಬಗ್ಗೆ ಮಾತನಾಡಿದರು.  .  ಭಾರತದಲ್ಲಿ ಪೌರತ್ವದ ಪ್ರಶ್ನೆಯನ್ನು ಅಭೂತಪೂರ್ವ ಅನುಪಾತದ ಬಿಕ್ಕಟ್ಟಿಗೆ ಎಳೆಯುವ ಈ ಹೊಸ ಕಾರ್ಯಗಳು ಮತ್ತು ಕಾರ್ಯವಿಧಾನಗಳನ್ನು ಕಾರ್ಯಗತಗೊಳಿಸದಂತೆ ನಿಯೋಗವು ಅವರನ್ನು ಕೋರಿತು, ಇದರಿಂದಾಗಿ ರಾಷ್ಟ್ರದ ಆರೋಗ್ಯ ಮತ್ತು ಸಮಗ್ರತೆಗೆ ಅಪಾಯವಿದೆ.  ವಿವಿಧ ಸಾಂವಿಧಾನಿಕ ಸ್ವರೂಪದ ಭಿನ್ನಾಭಿಪ್ರಾಯಗಳ ಮೂಲಕ ರಾಷ್ಟ್ರದಾದ್ಯಂತ ವ್ಯಾಪಕವಾಗಿ ವ್ಯಕ್ತವಾಗುತ್ತಿರುವ ಜನರ ಕಳವಳಗಳನ್ನು ಸರ್ಕಾರ ಪರಿಹರಿಸಬೇಕು ಮತ್ತು ಸಂವಿಧಾನದ ನಿಜವಾದ ಮನೋಭಾವಕ್ಕೆ ಅಗತ್ಯವಿರುವ ರೀತಿಯಲ್ಲಿ ಅವುಗಳನ್ನು ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಬ್ರಹತ್ ಅಜ್ಮೀರ್ ಮೌಲಿದ್ ಆತ್ಮೀಯ ಸಂಗಮ

ಬ್ರಹತ್ ಅಜ್ಮೀರ್ ಮೌಲಿದ್ ಆತ್ಮೀಯ ಸಂಗಮ SYS ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಹಮ್ಮಿಕೊಂಡ ಅಜ್ಮೀರ್ ಮೌಲಿದ್ ಆತ್ಮೀಯ ಮಜ್ಲಿಸ್ ನಾಳೆ ರಾತ್ರಿ ಇಶಾ ನಮಾಝ್ ಬಳಿಕ 8-30 ಗಂಟೆಗೆ ಅಕ್ಕರೆಕೆರೆ ಆಫೀಸ್ ಸಭಾಂಗಣದಲ್ಲಿ ನಡೆಯಲಿದೆ. ಪ್ರಸ್ತುತ ಕಾರ್ಯಕ್ರಮಕ್ಕೆ ಸರ್ವರಿಗೂ ಆತ್ಮೀಯ ಸ್ವಾಗತ

ಅಳೇಕಲ ಹಾಗು ಆಝಾದ್ ನಗರದಲ್ಲಿ ಮರ್ಕಝ್ ಪ್ರಚಾರ ಸಭೆ

ದೇಶ ವಿದೇಶಗಳಲ್ಲಿ ಮಿಂಚುತ್ತಿರುವ ಸರಿಸಾಟಿಯಿಲ್ಲದ ನೇತಾರ ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಸಂಸ್ಥೆಯಾದ ಮರ್ಕಝುಸ್ಸಖಾಫತಿಸ್ಸುನ್ನಿಯ್ಯಃ ಕ್ಯಾಲಿಕಟ್ ಕೇರಳ ಇದರ 43 ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರಾರ್ಥ ನೂರಾರು ಮೊಹಲ್ಲಾಗಳಲ್ಲಿ ದ.ಕ ಜಿಲ್ಲಾ ಸಖಾಫಿ ಕೌನ್ಸಿಲ್ ಹಮ್ಮಿಕೊಂಡ ಮರ್ಕಝ್ ಪ್ರಚಾರ ಸಂಗಮ ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ವ್ಯಾಪ್ತಿಗೆ ಬರುವ ಉಳ್ಳಾಲದ ಅಳೇಕಲ ಹಾಗು ಆಝಾದ್ ನಗರ ಮೊಹಲ್ಲಾಗಳಲ್ಲಿ ಮಾರ್ಚ್ 06 ರಂದು ಶುಕ್ರವಾರ ಜುಮಾ ನಮಾಝ್ ಬಳಿಕ ನಡೆಯಿತು. ಅಳೇಕಲದಲ್ಲಿ ಮುಹಮ್ಮದ್ ಕುಞ್ಞಿ ಅಮ್ಜದಿ ಹಾಗು ಮಾಸ್ತಿಕಟ್ಟೆ ಆಝಾದ್ ನಗರದಲ್ಲಿ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರ್ ಮರ್ಕಝ್ ಹಾಗು ಅದರ ಕಾರ್ಯವೈಖರಿಯ ಕುರಿತು ವಿವರಿಸಿದರು. ಮೊಹಲ್ಲಾದ ನಿವಾಸಿಗಳು ಮತ್ತು ಸುತ್ತಮುತ್ತಲ ಮೊಹಲ್ಲಾದ ಮರ್ಕಝ್ ಹಿತೈಷಿಗಳಾದ ಸುನ್ನೀ ಸಂಘ ಕುಟುಂಬದ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಜಮಾಯಿಸಿದ್ದರು. ಪ್ರಸ್ತುತ ಸಭೆಯಲ್ಲಿ ಮರ್ಕಝ್ ಸಂಸ್ಥೆಗೆ ಹಲವು ದಾನಿಗಳು ಸಹಾಯ ಹಸ್ತ ಚಾಚಿದರು. ಅಲ್ಲಾಹನು ದ್ವಿಲೋಕದಲ್ಲಿ ಅವರಿಗೆ ಅರ್ಹ ಪ್ರತಿಫಲವನ್ನು ಅಲ್ಲಾಹನು ನೀಡಲಿ. ಅವರ ಸರ್ವ ಸದುದ್ಧೇಶಗಳನ್ನು ಅಲ್ಲಾಹನು ಈಡೇರಿಸಲಿ. ಆಮೀನ್. ✍  * ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ *

ಉಳ್ಳಾಲದ ತೊಕ್ಕೋಟು ತಾಜುಲ್ ಉಲಮಾ ಜುಮಾ ಮಸೀದಿಯಲ್ಲಿ ಮರ್ಕಝ್ ಪ್ರಚಾರ ಸಂಗಮ.

ಉಳ್ಳಾಲದ ತೊಕ್ಕೋಟು ತಾಜುಲ್ ಉಲಮಾ ಜುಮಾ ಮಸೀದಿಯಲ್ಲಿ ಮರ್ಕಝ್ ಪ್ರಚಾರ ಸಂಗಮ.  ಮರ್ಕಝ್. ಇದೊಂದು ವಿಸ್ಮಯ, ನಮ್ಮೆಲ್ಲರ ಹೆಮ್ಮೆಯ, ಅಭಿಮಾನದ ಸಂಕೇತ, ಅನಾಥ, ನಿರ್ಗತಿಕ ಮಕ್ಕಳ ಶ್ರೇಯೋಭಿವ್ರದ್ಧಿಗಾಗಿ ಶ್ರಮಿಸುತ್ತಿರುವ ಆಶ್ರಯ ತಾಣ, ಲೌಕಿಕ, ಧಾರ್ಮಿಕ, ಸಾಮಾಜಿಕ, ಸಾಮುದಾಯಿಕ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಸಂಸ್ಥೆ, ದೇಶ ವಿದೇಶಗಳಲ್ಲಿ ಮಿಂಚುತ್ತಿರುವ ಸರಿಸಾಟಿಯಿಲ್ಲದ ನೇತಾರ ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಸಂಸ್ಥೆ. ಹೌದು, ಮರ್ಕಝುಸ್ಸಖಾಫತಿಸ್ಸುನ್ನಿಯ್ಯಃ ಕ್ಯಾಲಿಕಟ್ ಕೇರಳ ಇದರ 43 ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರಾರ್ಥ ನೂರಾರು ಮೊಹಲ್ಲಾಗಳಲ್ಲಿ ದ.ಕ ಜಿಲ್ಲಾ ಸಖಾಫಿ ಕೌನ್ಸಿಲ್ ಹಮ್ಮಿಕೊಂಡ ಮರ್ಕಝ್ ಪ್ರಚಾರ ಸಂಗಮ ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ವ್ಯಾಪ್ತಿಗೆ ಬರುವ ಉಳ್ಳಾಲದ ತೊಕ್ಕೋಟು ತಾಜುಲ್ ಉಲಮಾ ಜುಮಾ ಮಸೀದಿಯಲ್ಲಿ ಮಾರ್ಚ್ 13, ಶುಕ್ರವಾರ ಜುಮಾ ನಮಾಝ್ ಬಳಿಕ ನಡೆಯಲಿರುವುದು. ಸುತ್ತಮುತ್ತಲ ಮೊಹಲ್ಲಾದ ಮರ್ಕಝ್ ಹಿತೈಷಿಗಳಾದ ಸುನ್ನೀ ಸಂಘ ಕುಟುಂಬದ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಅಧಿಕ ಸಂಖ್ಯೆಯಲ್ಲಿ ತೊಕ್ಕೋಟು ಜುಮಾ ಮಸೀದಿಯಲ್ಲಿ ಜಮಾಯಿಸಿ, ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿ. ಅಧ್ಯಕ್ಷರು ಮತ್ತು ಸರ್ವ ಸದಸ್ಯರು. ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್