Skip to main content

Posts

Showing posts from June, 2018

ಖುವ್ವತುಲ್ ಇಸ್ಲಾಂ ಮದ್ರಸ ಪಟ್ಲ ಇದರ 2018 - 2019 ನೇ ಸಾಲಿನ ಮದ್ರಸ ಪ್ರಾರಂಭೋತ್ಸವ ಹಾಗು ಮನೆ ಮನೆಗೆ ಸಸಿ ವಿತರಣಾ ಕಾರ್ಯಕ್ರಮ

ಖುವ್ವತುಲ್ ಇಸ್ಲಾಂ ಮದ್ರಸ ಪಟ್ಲ ಇದರ 2018 - 2019 ನೇ ಸಾಲಿನ ಮದ್ರಸ ಪ್ರಾರಂಭೋತ್ಸವ ಹಾಗು ಮನೆ ಮನೆಗೆ ಸಸಿ ವಿತರಣಾ ಕಾರ್ಯಕ್ರಮ ಕಲ್ಲಾಪು ಪಟ್ಲದ ಮದ್ರಸ ಹಾಲ್ ನಲ್ಲಿ ನಡೆಯಿತು.              ತಖ್ವಾ ಜುಮಾ ಮಸೀದಿ ಪಟ್ಲ ಅಧ್ಯಕ್ಷರಾದ ಮಹಮೂದ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಮದ್ರಸ ಪ್ರಾರಂಭೋತ್ಸವವನ್ನು ಕಲ್ಲಾಪುವಿನ ಸಮಾಜ ಸ್ನೇಹಿಯೋರ್ವರ ಸಂಪೂರ್ಣ ಸಹಕಾರದೊಂದಿಗೆ  ಮನೆ ಮನೆಗೆ ಸಸಿ ವಿತರಿಸುವ ಮೂಲಕ ವೈವಿಧ್ಯಮಯ ರೀತಿಯಲ್ಲಿ ಆಚರಿಸಲಾಯಿತು. ಅರಿವಿನಂಗಳಕ್ಕೆ ಮನುಕುಲವನ್ನು ನಡೆಸಿದ ಪ್ರವಾದಿ ಮುಹಮ್ಮದ್ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ದೇವಸಂದೇಶದ ಮೂಲಕ ಸಂಸ್ಥಾಪಿತಗೊಂಡ ಪವಿತ್ರ ಇಸ್ಲಾಂ ಎಂಬ ಶಾಂತಿಯ ಜೀವನದರ್ಶನಗಳ ಆರಂಭದ ಹೆಜ್ಜೆ ಮದ್ರಸಾಗಳು ಆಗಿದೆ. ಅದರತ್ತ ಕಣ್ಣೋಟ ಹರಿಸುವಾಗ ಆಧುನಿಕ ಮದ್ರಸಾ ರಂಗದ ಸ್ಫಷ್ಟ ರಚನಾಕಾರ ಸಂಸ್ಥಾಪಕ ಮರ್ಹೂಂ ನೂರುಲ್ ಉಲಮಾ ಎಂ.ಎ. ಅಬ್ದುಲ್ ಖಾದಿರ್ ಮುಸ್ಲಿಯಾರ್  ನಮ್ಮ ನಡುವೆ ಶತಾಯುಷಿಯಾಗಿ ಬಾಳೀ ವಫಾತಾದ ವಿದ್ವಾಂಸ ಗುರು ಸದಾಕಾಲವು ಚಿರಸ್ಮರಣೀಯರು. ಬಹಳ ವರ್ಷಗಳ ಹಿಂದೆ ಊರು ಕೇರಿಗಳಿಗೆ ಪಾದಯಾತ್ರೆ ಮಾಡಿ ಅರೆಹೊಟ್ಟೆಯಲ್ಲಿ ಸಾಗಿ ಮದ್ರಸ ಸಂಸ್ಥಾಪನೆಯ ಸಂದೇಶ ಮುಟ್ಟಿಸಿ ಪ್ರಾಯೋಗಿಕತೆಗೆ ತಂದ ಮದ್ರಸಾ ಪ್ರಸ್ಥಾನ ಇಂದು ಬೆಳೆದು ಹೆಮ್ಮರವಾಗಿ ತಲೆಮಾರಿಗೆ ದೀನೀ ಅರಿವಿನ ನೆರಳನ್ನು ನೀಡುತ್ತಿದೆ. ಅದರ ಪ್ರತಿಫಲ...

THAJUL ULAMA JUMUA MASJID THOKKOTU

🌱🌿💥🌱🌿💥🌱🌿💥🌱🌿 ತೊಕ್ಕೋಟು ಹ್ರದಯ ಭಾಗದಲ್ಲಿರುವ ತಾಜುಲ್ ಉಲಮಾ ಜುಮಾ ಮಸೀದಿಗೆ ನೂತನ ಖತೀಬರಾಗಿ    _*ಸಲೀಂ ಸಅದಿ ಹೊನ್ನಾವರ*_   ಆಯ್ಕೆ. ತಾಜುಲ್ ಉಲಮಾ ಜುಮಾ ಮಸೀದಿಯಲ್ಲಿ ಪ್ರತೀ ದಿನ ಸುಬಹ್ ನಮಾಜು ಬ...

ನಾಳೆ ಪೆರ್ನಾಲ್ - ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಕೂರತ್ ತಂಗಲ್

ನಾಳೆ ಪೆರ್ನಾಲ್ - ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಕೂರತ್ ತಂಗಲ್  ಶವ್ವಾಲ್ ಒಂದರ  ಚಂದ್ರದರ್ಶನವಾದ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಜೂನ್ 15 ( ನಾಳೆ ) ಈದುಲ್ ಫಿತ್ರ್ ಆಗಿದೆಯೆಂದು ಉಳ್ಳಾಲ ಹಾಗು ದ.ಕ ಜಿಲ್ಲೆಯ ನೂರಕ್ಕೂ ಮಿಕ್ಕ ಮೊಹಲ್ಲಾಗಳ ಗೌರವಾನ್ವಿತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಕೂರತ್ ತಂಗಲ್ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜನುಮ ದಿನ

ಇಂದು ಜೂನ್ 14. ನನ್ನ ಜನುಮ ದಿನ. 40 ನೇ ವರ್ಷಕ್ಕೆ ಪಾದಾರ್ಪಣೆ. ಹಲವಾರು ಸ್ನೇಹಿತರು ಶುಭಾಶಯ ಸಲ್ಲಿಸಿದ್ದೀರಿ..ಸಾಮಾನ್ಯರಲ್ಲಿ ಸಾಮಾನ್ಯನಾದ ನನಗೆ ತಾವುಗಳು ನೀಡಿದ ಪ್ರೀತಿ ಅಭಿಮಾನಕ್ಕೆ ಚಿರರುಣಿಯಾಗಿದ...

ಪೆರ್ನಾಲ್ ವಸ್ತ್ರ ಹಾಗು ಧನ ಸಹಾಯ ವಿತರಣೆ

ಸಾದಾತ್ ಫಂಡ್ ಎಸೋಸಿಯೇಷನ್ ಉಳ್ಳಾಲ ಇದರ ಆಶ್ರಯದಲ್ಲಿ ತೀರಾ ಹಿಂದುಳಿದ ಸಯ್ಯಿದ್ ಕುಟುಂಬಗಳಿಗೆ ಪೆರ್ನಾಲ್ ವಸ್ತ್ರವನ್ನು ನೀಡಲಾಯಿತು. ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರು, ಅಲ್ ಮದೀನ ಮಂಜನಾಡಿ ಸಾರಥಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಪೆರ್ನಾಲ್ ವಸ್ತ್ರವನ್ವು ಬಿಡುಗಡೆಗೊಳಿಸಿದರು. ಇದಕ್ಕೂ ಮುನ್ನ ಉಳ್ಳಾಲದ  ಸಯ್ಯಿದ್ ಕುಟುಂಬದ ತೀರಾ ಬಡತನದಲ್ಲಿರುವ ಓರ್ವ ಸಯ್ಯಿದರಿಗೆ ಹತ್ತು ಸಾವಿರ ರೂಪಾಯಿಗಳು ನೀಡಲಾಯಿತು. ಈ ಸಂದರ್ಭದಲ್ಲಿ ಉಳ್ಳಾಲ ಮಾಸ್ತಿಕಟ್ಟೆ ಜುಮಾ ಮಸೀದಿ ಖತೀಬರಾದ ಕಲಂದರ್ ಸಖಾಫಿ, ಮಂಚಿಲ  ಜುಮಾ ಮಸೀದಿ ಖತೀಬರಾದ ಅಬೂ ಅನಸ್ ಜಮಾಲ್ ಉಸ್ತಾದ್, ಸಾದಾತ್ ಫಂಡ್ ಎಸೋಸಿಯೇಷನ್ ಅಧ್ಯಕ್ಷರಾದ ಸಯ್ಯಿದ್ ಜವಾದ್ ತಂಗಲ್, ಪ್ರಧಾನ ಕಾರ್ಯದರ್ಶಿ ಪೆಪ್ಸಿ ಹಂಝ ಸುಂದರಿಬಾಗ್, ಕೋಶಾಧಿಕಾರಿ ರಮೀಝ್ ಮೇಲಂಗಡಿ ಉಪಸ್ಥಿತರಿದ್ದರು

ಸಯ್ಯಿದ್ ಹಾಗು ಸಯ್ಯಿದತ್ ಗಳಿಗೆ ಸೀರೆ ಹಾಗು ವಸ್ತ್ರ ವಿತರಣಾ ಕಾರ್ಯಕ್ರಮ

ಸಾದಾತ್ ಫಂಡ್ ಎಸೋಸಿಯೇಷನ್ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲದ  ಸಯ್ಯಿದ್ ಕುಟುಂಬದ ತೀರಾ ಹಿಂದುಳಿದ ಸಯ್ಯಿದ್ ಹಾಗು ಸಯ್ಯಿದತ್ ಗಳಿಗೆ ಸೀರೆ ಹಾಗು ವಸ್ತ್ರ ವಿತರಣಾ ಕಾರ್ಯಕ್ರಮ ಸಾದಾತು ಫಂಡ್ ಅಸೋಸಿಯೇಷನ್ ಉಳ್ಳಾಲ ಇದರ ಅಧ್ಯಕ್ಷರಾದ ಸಯ್ಯಿದ್ ಜವಾದ್ ತಂಗಲ್ ಅಧ್ಯಕ್ಷತೆಯಲ್ಲಿ ಅಳೇಕಲದ ಯು ಡಿ ಅಶ್ರಫ್ ನಿವಾಸದಲ್ಲಿ ನಡೆಯಿತು.  ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಕುಟುಂಬ ಪರಂಪರೆಯಿಂದ ಬಂದ ಸಾದಾತುಗಳು ಮುಸ್ಲಿಮರಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವವರಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಸಾದಾತುಗಳಿಗೆ ಸಹಾಯ ಹಸ್ತ ನೀಡುವ ಉದ್ಧೇಶದಿಂದ ಸಾದಾತ್ ಫಂಡ್ ಅಸೋಸಿಯೇಷನ್ ರಚಿಸಲಾಗಿದೆ. ಇದರ ಆಶ್ರಯದಲ್ಲಿ ಉಳ್ಳಾಲದ ತೀರಾ ಬಡತನದಲ್ಲಿರುವ ಸಯ್ಯಿದರುಗಳನ್ನು ಗುರುತಿಸಿ ಸಾಂತ್ವನ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತದೆ ಎಂದು ಸಯ್ಯಿದ್ ಜವಾದ್ ತಂಗಲ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಸಾದಾತ್ ಫಂಡ್ ಎಸೋಸಿಯೇಷನ್ ಇದರ ಕಾರ್ಯ ಚಟುವಟಿಕೆಯನ್ನು ಚುರುಕುಗೊಳಿಸುವ ಸಲುವಾಗಿ ಸಮಿತಿಯನ್ನು ರಚಿಸಲಾಗಿದ್ದು, ಸಯ್ಯಿದ್ ಜಲಾಲ್ ತಂಗಲ್ ಸಂಚಾಲಕರು, ಸಯ್ಯಿದ್ ಜವಾದ್ ತಂಗಲ್ ಅಧ್ಯಕ್ಷರು, ಪೆಪ್ಸಿ ಹಂಝ ಸುಂದರಭಾಗ್ ಪ್ರಧಾನ ಕಾರ್ಯದರ್ಶಿ, ರಮೀಝ್ ಮೇಲಂಗಡಿ ಕೋಶಾಧಿಕಾರಿ, ಶಫೀಖ್ ಅಳೇಕಲ ಜೊತೆ ಕಾರ್ಯದರ್ಶಿ ಹಾಗು ಹನ್ನೊಂದು ಮಂದಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕಾರ್ಯಕ್...