ಸಾದಾತ್ ಫಂಡ್ ಎಸೋಸಿಯೇಷನ್ ಉಳ್ಳಾಲ ಇದರ ಆಶ್ರಯದಲ್ಲಿ ತೀರಾ ಹಿಂದುಳಿದ ಸಯ್ಯಿದ್ ಕುಟುಂಬಗಳಿಗೆ ಪೆರ್ನಾಲ್ ವಸ್ತ್ರವನ್ನು ನೀಡಲಾಯಿತು. ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರು, ಅಲ್ ಮದೀನ ಮಂಜನಾಡಿ ಸಾರಥಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಪೆರ್ನಾಲ್ ವಸ್ತ್ರವನ್ವು ಬಿಡುಗಡೆಗೊಳಿಸಿದರು. ಇದಕ್ಕೂ ಮುನ್ನ ಉಳ್ಳಾಲದ ಸಯ್ಯಿದ್ ಕುಟುಂಬದ ತೀರಾ ಬಡತನದಲ್ಲಿರುವ ಓರ್ವ ಸಯ್ಯಿದರಿಗೆ ಹತ್ತು ಸಾವಿರ ರೂಪಾಯಿಗಳು ನೀಡಲಾಯಿತು.
ಈ ಸಂದರ್ಭದಲ್ಲಿ ಉಳ್ಳಾಲ ಮಾಸ್ತಿಕಟ್ಟೆ ಜುಮಾ ಮಸೀದಿ ಖತೀಬರಾದ ಕಲಂದರ್ ಸಖಾಫಿ, ಮಂಚಿಲ ಜುಮಾ ಮಸೀದಿ ಖತೀಬರಾದ ಅಬೂ ಅನಸ್ ಜಮಾಲ್ ಉಸ್ತಾದ್, ಸಾದಾತ್ ಫಂಡ್ ಎಸೋಸಿಯೇಷನ್ ಅಧ್ಯಕ್ಷರಾದ ಸಯ್ಯಿದ್ ಜವಾದ್ ತಂಗಲ್, ಪ್ರಧಾನ ಕಾರ್ಯದರ್ಶಿ ಪೆಪ್ಸಿ ಹಂಝ ಸುಂದರಿಬಾಗ್, ಕೋಶಾಧಿಕಾರಿ ರಮೀಝ್ ಮೇಲಂಗಡಿ ಉಪಸ್ಥಿತರಿದ್ದರು
Comments
Post a Comment