Skip to main content

Posts

Showing posts from June, 2025

SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ರೇಂಜ್ ಕಾಂಫರೆನ್ಸ್.ವಿ ಎ ಮುಹಮ್ಮದ್ ಸಖಾಫಿ ಕ್ವಿಝ್ ಸ್ಪರ್ಧೆಯಲ್ಲಿ ಪ್ರಥಮ.ಮಾದರೀಯೋಗ್ಯ ತರಗತಿ ನಡೆಸಿದ ಝೈನುದ್ದೀನ್ ಮದನಿ

ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ರೇಂಜ್ ಕಾಂಫರೆನ್ಸ್ ಉಳ್ಳಾಲ ಮುಕ್ಕಚೇರಿಯ ಅಲ್ ಮುಬಾರಕ್ ಮದ್ರಸ ಆಡಿಟೋರಿಯಂ ನಲ್ಲಿ ಇತ್ತೀಚೆಗೆ ನಡೆಯಿತು. ರೇಂಜ್ ಅಧ್ಯಕ್ಷರಾದ ಜಲಾಲುದ್ದೀನ್ ಮದನಿ ಅಧ್ಯಕ್ಷತೆ ವಹಿಸಿದರು. ಮುಕ್ಕಚೇರಿ ಮದ್ರಸದ ಮುಖ್ಯೋಪಾಧ್ಯಾಯರಾದ ವಿ ಕೆ ಅಬ್ದುರ್ರಹ್ಮಾನ್ ಸಖಾಫಿ ದುಆ ನೆರವೇರಿಸಿದರು. ದಾರಂದಬಾಗಿಲು ಜುಮಾ ಮಸ್ಜಿದ್ ಖತೀಬರಾದ ಜಾಬಿರ್ ಫಾಳಿಲಿ ಖಿರಾಅತ್ ಪಠಿಸಿ, ಸಭೆಗೆ ಚಾಲನೆ ನೀಡಿದರು. ಮುಕ್ಕಚೇರಿ ಜುಮಾ ಮಸ್ಜಿದ್ ಖತೀಬರಾದ ಶರೀಫ್ ಬಾಖವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ವರದಿ ಮಂಡಿಸಿದರು. ಕೋಶಾಧಿಕಾರಿ ವಿ ಎ ಮುಹಮ್ಮದ್ ಸಖಾಫಿ ಲೆಕ್ಕಪತ್ರ ಮಂಡಿಸಿದರು. ಮುಕ್ಕಚೇರಿ ಮಸೀದಿ, ಮದ್ರಸದ ಆಡಳಿತ ಸಮಿತಿಯ ಅಧ್ಯಕ್ಷರಾದ ಜಮಾಲಿಯ ಅಬ್ದುಲ್ ಖಾದರ್ ರವರ ಪುತ್ರ, ಸಮಿತಿ ಸದಸ್ಯರಾದ ಖಲೀಲ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಸಭೆಯ ಪ್ರಾರಂಭಕ್ಕೂ ಮುನ್ನ ಅಳೇಕಲ ನಜಾತುಸ್ಸಿಬಿಯಾನ್ ಮದ್ರಸದ ಮುಅಲ್ಲಿಂ ಝೈನುದ್ದೀನ್ ಮದನಿ ವಿದ್ಯಾರ್ಥಿಗಳಿಗೆ ಮಾದರೀ ಯೋಗ್ಯವಾದ ತರಗತಿ ನಡೆಸಿದರು. ತರಗತಿಯಲ್ಲಿ ಹಾಜರಿದ್ದ ಮುಅಲ್ಲಿಮರಿಂದ ವ್ಯಾಪಕ ಪ್ರಶಂಶೆಗೆ ಝೈನುದ್ದೀನ್ ಮದನಿ ಯವರ ತರಗತಿ ಪಾತ್ರವಾಯಿತು. ಅಳೇಕಲ ಮದ್ರಸದ ಮತ್ತೋರ್ವ ಮುಅಲ್ಲಿಮರಾದ ನಿಝಾಂ ಅಮಾನಿ ...