Skip to main content

Posts

Showing posts from 2021

ಎಸ್ ವೈ ಎಸ್ ಫರೀದ್ ನಗರ ಬ್ರಾಂಚ್ ದ್ವಿ ವಾರ್ಷಿಕ ಮಹಾಸಭೆ

ಎಸ್ ವೈ ಎಸ್ ಫರೀದ್ ನಗರ ಬ್ರಾಂಚ್ ದ್ವಿ ವಾರ್ಷಿಕ ಮಹಾಸಭೆ ಫರೀದ್ ನಗರದ ಎಸ್ ವೈ ಎಸ್, ಎಸ್ಲೆಸ್ಲೆಫ್ ಕಛೇರಿಯಲ್ಲಿ ನಡೆಯಿತು. ಶಾಹುಲ್ ಹಮೀದ್ ಫರೀದ್ ನಗರ ಅಧ್ಯಕ್ಷತೆ ವಹಿಸಿದರು.  ಅಸ್ಸಯ್ಸಿದ್ ಶರಫುದ್ದೀನ್ ತಂಗಲ್ ಫರೀದ್ ನಗರ ದುವಾ ನೆರವೇರಿಸಿ, ಸಭೆಯನ್ನು ಉದ್ಘಾಟಿಸಿದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಫರೀದ್ ನಗರ ಸ್ವಾಗತಿಸಿದರು. ಬಳಿಕ ವರದಿ ಮಂಡಿಸಿದರು. ಬ್ರಾಂಚ್ ಕೋಶಾಧಿಕಾರಿ ಉಸ್ಮಾನ್ ಬಿ ಲೆಕ್ಕಪತ್ರ ಮಂಡಿಸಿದರು.  ಎರಡು ವರ್ಷಗಳ ಅವಧಿಯಲ್ಲಿ ಬ್ರಾಂಚ್ ಮಾಡಿದ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯ ಚಟುವಟಿಕೆಯ ಮಾಹಿತಿಯನ್ನು ಶಾಹುಲ್ ಹಮೀದ್ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು. ಚುನಾವಣಾ ವೀಕ್ಷಕರಾಗಿ  ಹರೇಕಳ ಸೆಂಟರ್ ಅಧ್ಯಕ್ಷರಾದ ಹೈದರಾಲಿ ಸಖಾಫಿ ಇನೋಳಿ, ಸೆಂಟರ್ ಕೋಶಾಧಿಕಾರಿ ಅಬ್ದುಲ್ ರಝ್ಝಾಖ್ ಹಾಜಿ ಮಲಾರ್ ಹಾಗು ಸೆಂಟರ್ ಟ್ಪೈನಿಂಗ್ ಕಾರ್ಯದರ್ಶಿ ಉಸ್ಮಾನ್ ಎ.ಎಚ್ ಆಗಮಿಸಿದರು. ಸೆಂಟರ್ ಅಧ್ಯಕ್ಷರಾದ ಹೈದರಾಲಿ ಸಖಾಫಿ ಇನೋಳಿ ಎಸ್ ವೈ ಎಸ್ ಸಂಘಟನೆಯ ಅನಿವಾರ್ಯತೆಯ ಕುರಿತು ಮಾತನಾಡಿದರು. ಬಳಿಕ ಹಾಲಿ ಸಮಿತಿಯನ್ನು ವಿಸರ್ಜಿಸಿ, 2021-2023 ನೇ ಸಾಲಿನ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಎಸ್ ವೈ ಎಸ್ ಫರೀದ್ ನಗರ ಬ್ರಾಂಚ್ ಸಮಿತಿಯ ನೂತನಾಧ್ಯಕ್ಷರಾಗಿ ಆಸಿಫ್ ಬಿ.ಎಚ್, ಪ್ರಧಾನ ಕಾರ್ಯದರ್ಶಿಯಾಗಿ ಫೈಝಲ್, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಕೆ ಆಯ್ಕೆಯಾದರು...

ಮದನಿಯ್ಯ ಸಾದಾತ್ ಫೌಂಡೇಶನ್ ಕರ್ನಾಟಕ ಶ್ಲಾಘನೆ.

100 ಸಾದಾತ್ ಕುಟುಂಬಗಳಿಗೆ 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ 100 ಮನೆಗಳ ನಿರ್ಮಾಣ, ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದ್ ಮದನೀಯಂ ಪ್ರಥಮ ವಾರ್ಷಿಕ ಸಮಾರಂಭದಲ್ಲಿ ಘೋಷಣೆ ಮದನಿಯ್ಯ ಸಾದಾತ್ ಫೌಂಡೇಶನ್ ಕರ್ನಾಟಕ ಶ್ಲಾಘನೆ..🔅 ಮದನೀಯಂ ಮಜ್ಲಿಸಿನ ರೂವಾರಿ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ಉಸ್ತಾದರ ನೇತ್ರತ್ವದಲ್ಲಿ ಪ್ರತೀ ದಿನವೂ ಎಡೆಬಿಡದೆ ಪ್ರತೀ ದಿನ ರಾತ್ರಿಗಳಲ್ಲಿ ನಡೆಯುತ್ತಿರುವ ಮದನೀಯಂ ಮಜ್ಲಿಸ್ ಮನೆ, ಮನಃಗಳನ್ನು ಆಧ್ಯಾತ್ಮಿಕತೆ ಯತ್ತ ವಾಲಿಸಿ, ಮನೆ ಮನಃಗಳಲ್ಲಿ ಈಮಾನಿನ ಪ್ರಭೆ ಬೆಳಗಿಸಿ ಮುನ್ನಡೆಯುತ್ತಿದೆ. ನಿಜವಾಗಿಯೂ ಇದೊಂದು ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ಮದನೀಯಂ ಮಜ್ಲಿಸಿನ ರೂವಾರಿ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ಉಸ್ತಾದರಿಗೆ ಕೋಟಿ ಕೋಟಿ ಅಭಿನಂದನೆಗಳು. 2021 ಆಗಸ್ಟ್ 08 ರಂದು ರಾತ್ರಿ ಮದನೀಯಂ ಮಜ್ಲಿಸಿನ ಪ್ರಥಮ ವಾರ್ಷಿಕ ಸಮಾರಂಭ ನಡೆಯಿತು. ಗಣ್ಯಾತಿಗಣ್ಯ ಸಾದಾತುಗಳು, ಉಲಮಾಗಳು ಭಾಗವಹಿಸಿದ ಪ್ರಸ್ತುತ ಕಾರ್ಯಕ್ರಮದಲ್ಲಿ ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದ್ ರವರು 100 ಸಾದಾತ್ ಕುಟುಂಬಗಳಿಗೆ 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ 100 ಮನೆಗಳ ನಿರ್ಮಾಣ ಮಾಡಲಾಗುವುದೆಂದು ಘೋಷಣೆ ಮಾಡಿದರು. ಇದೊಂದು ಐತಿಹಾಸಿಕವಾದ ಮಾದರಿಯುತವಾದ ಪ್ರಶಂಶನೀಯ, ಶ್ಲಾಘನೀಯ ಕಾರ್ಯವಾಗಿದೆಯೆಂದು ಸಾದಾತುಗಳ ಏಳಿಗೆಗಾಗಿ, ಅಭಿವ್ರದ್ಧಿಗಾಗಿ ಕಾರ್ಯಾಚರಿಸುತ್ತಿರುವ *ಮದನಿಯ್...

ವರ್ಣ ರಂಜಿತ ಗೋಡೆ ಬರಹಗಳು

 ವರ್ಣ ರಂಜಿತ ಗೋಡೆ ಬರಹಗಳಿಗಾಗಿ ಸಂಪರ್ಕಿಸಿರಿ ಮುಹಮ್ಮದ್ ಇಕ್ಬಾಲ್ ಮಂಗಳಪೇಟೆ +919242728152

ಜುಲೈ 21 ಬುಧವಾರ ಈದುಲ್ ಅದ್'ಹಾ. ಗೌರವಾನ್ವಿತ  ಉಳ್ಳಾಲ  ಖಾಝಿ  ಖುರ್ರತುಸ್ಸಾದಾತ್  ಸಯ್ಯಿದ್  ಫಝಲ್  ಕೋಯಮ್ಮ  ಕೂರತ್  ತಂಗಲ್  ಪ್ರಕಟನೆ.

 ನಿನ್ನೆ  ( ಶನಿವಾರ  ಅಸ್ತ  ಆದಿತ್ಯವಾರ )  ರಾತ್ರಿ  ದ್ಸುಲ್ ಹಿಜ್ಜಃ   ತಿಂಗಳ  ಚಂದ್ರ  ದರ್ಶನವಾಗದ  ಹಿನ್ನೆಲೆಯಲ್ಲಿ  ಜುಲೈ 12  ಸೋಮವಾರ  ದ್ಸುಲ್ ಹಿಜ್ಜ  ತಿಂಗಳು  ಪ್ರಾರಂಭವಾಗಲಿದ್ದು,  ಅದರಂತೆ  ಜುಲೈ 20  ಮಂಗಳವಾರ  ಅರಫಾ  ದಿನ  ಮತ್ತು ಜುಲೈ 21,  ಬುಧವಾರ   ಈದುಲ್ ಅದ್'ಹಾ  ( ಪೆರ್ನಾಲ್ ಹಬ್ಬ )  ಆಚರಿಸಲಾಗುತ್ತದೆ  ಎಂದು  ಗೌರವಾನ್ವಿತ  ದ.ಕ  ಜಿಲ್ಲಾ  ಸಂಯುಕ್ತ  ಜಮಾಅತ್  ಖಾಝಿ  ಖುರ್ರತುಸ್ಸಾದಾತ್  ಅಸ್ಸಯ್ಯಿದ್  ಫಝಲ್  ಕೋಯಮ್ಮ  ಮದನಿ  ಅಲ್  ಬುಖಾರಿ  ಕೂರತ್  ತಂಗಳ್  ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The  Honourable  Khazi of Ullala  Qurrathussadath  Seyyid  Fazal  Koyamma  Thangal  Al Bukhari  has  announced  that  July 12-2021  is  first  of  Dul hijja  and The Day of Arafa July 20,  Eid ul ad'ha  will be  celebrated  on  Wednesday (J...

ಆಝಾದ್ ನಗರ ಯೂತ್ ಫೌಂಡೇಶನ್ ವತಿಯಿಂದ ಚಿಕಿತ್ಸೆಗೆ ನೆರವು.

ಉಳ್ಳಾಲ : ಮಾಸ್ತಿಕಟ್ಟೆ ಆಝಾದ್ ನಗರದ ನಾಗರಿಕರು, ಯುವಕರು ಸೇರಿ ಇತ್ತೀಚೆಗೆ ಅಸ್ತಿತ್ವಕ್ಕೆ ತಂದ ಆಝಾದ್ ನಗರ ಯೂತ್ ಫೌಂಡೇಶನ್ ವತಿಯಿಂದ ಜುಲೈ 08-2021 ರಂದು ಬಶೀರ್ ಎಂಬವರ ಚಿಕಿತ್ಸೆಗೆ 10,000 ರೂಪಾಯಿಗಳು ನೀಡುವ ಮೂಲಕ ಆಝಾದ್ ಫೌಂಡೇಶನ್ ತನ್ನ ಕಾರ್ಯ ಚಟುವಟಿಕೆಯ ಪ್ರಥಮ ಚಾರಿಟಿ ಫಂಡ್ ವರ್ಗಾವಣೆ ಮಾಡಿದೆ. "ಮನುಷ್ಯನ ನಿಜವಾದ ಸಂಪತ್ತು ಈ ಜಗತ್ತಿನಲ್ಲಿ ಅವನು ಮಾಡುವ ಒಳಿತು ಕಾರ್ಯಗಳಾಗಿವೆ." ಎಂದು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ರವರು ಹೇಳಿರುವರು. ಆಝಾದ್ ನಗರ ಯೂತ್ ಫೌಂಡೇಶನ್ ತನ್ನ ಕಾರ್ಯಾಚರಣೆ ಪ್ರಾರಂಭಿಸಿದೆ. ಸಮಾಜದಲ್ಲಿ ಹೆಚ್ಚಿನ ಬದಲಾವಣೆ ತರಲು ಇನ್ನೂ ಕೂಡಾ ತಮ್ಮ ಸಹಾಯ ಸಹಕಾರ ಆಶಿಸುತ್ತೇವೆ ಎಂದು ಫೌಂಡೇಶನ್ ಅಧ್ಯಕ್ಷರಾದ ಇಬ್ರಾಹಿಂ ಶೌಕತ್ ತಿಳಿಸಿದರು. ಪ್ರಸ್ತುತ ಸೇವಾ ಕಾರ್ಯದಲ್ಲಿ ಉಪಾಧ್ಯಕ್ಷರಾದ ಅಝ್ಮಲ್ ಸುಂದರಬಾಗ್, ಪ್ರಧಾನ ಕಾರ್ಯದರ್ಶಿ ನಾಸಿರ್ ಅರಫಾತ್ ಹಾಗು ಜೊತೆ ಕಾರ್ಯದರ್ಶಿ ಶಂಸುದ್ದೀನ್ ಉಪಸ್ಥಿತರಿದಿದರು.  

ಆಝಾದ್ ನಗರ ಯೂತ್ ಫೌಂಡೇಶನ್ ಅಸ್ತಿತ್ವಕ್ಕೆ.

ಆಝಾದ್ ನಗರ ಯೂತ್ ಫೌಂಡೇಶನ್ ಅಸ್ತಿತ್ವಕ್ಕೆ. ಉಳ್ಳಾಲ : ಮಾಸ್ತಿಕಟ್ಟೆ  ಆಝಾದ್  ನಗರದ  ನಾಗರಿಕರು,  ಯುವಕರು  ಸೇರಿ  ಆಝಾದ್  ನಗರದಲ್ಲಿ  ನಡೆದ  ಸಭೆಯಲ್ಲಿ  ಆಝಾದ್  ನಗರ ಯೂತ್  ಫೌಂಡೇಶನ್  ಅಸ್ತಿತ್ವಕ್ಕೆ  ತರಲಾಯಿತು. ಅಧ್ಯಕ್ಷರಾಗಿ ಇಬ್ರಾಹಿಂ ಶೌಕತ್, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಅರಾಫತ್, ಕೋಶಾಧಿಕಾರಿಯಾಗಿ ಮುಹಮ್ಮ ದ್ ಫ್ಯಾನ್ಸಿ, ಉಪಾಧ್ಯಕ್ಷರಾಗಿ ಅಜ್ಮಲ್ ಹಾಗು ಫಾರೂಕ್, ಜೊತೆ ಕಾರ್ಯದರ್ಶಿಯಾಗಿ ಶಂಸುದ್ದೀನ್ ಹಾಗು ಅಝರ್, ಲೆಕ್ಕ ಪರಿಶೋಧಕರಾಗಿ ಇಲ್ಯಾಸ್ ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಅನ್ವರ್, ಮುಜಮ್ಮಿಲ್, ತನ್ಝೀಲ್, ಫಯಾಜ್ (ಆಟೋ), ಫಹದ್,ಅಶ್ರಫ್, ಫಾರೂಕ್ ಇವರುಗಳನ್ನು ಆರಿಸಲಾಯಿತು. ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯ, ಬಡ ರೋಗಿಗಳ ಚಿಕಿತ್ಸಾ ನೆರವು, ಅರ್ಹ ಬಡ ಕುಟುಂಬಗಳಿಗೆ ಆಹಾರ ಕಿಟ್ ಗಳ ಪೂರೈಕೆ ಹಾಗು ಇನ್ನಿತರ ಸಮಾಜಮುಖಿ ಸಾಂತ್ವನ ಚಟುವಟಿಕೆಗಳೊಂದಿಗೆ ಈ ಫೌಂಡೇಶನ್ ಕಾರ್ಯಾಚರಿಸಲಿದೆ. ಪ್ರಸ್ತುತ ಫೌಂಡೇಶನಿನ ಊರಿನ ಸದಸ್ಯರು ಮಾಸಿಕ 200, ವಿದೇಶದಲ್ಲಿರುವ ಸದಸ್ಯರು 500 ರೂಪಾಯಿಗಳಂತೆ ಫೌಂಡೇಶನ್ ಕಾರ್ಯಚಟುವಟಿಕೆಗಳಿಗೆ ನೀಡುವುದು.

ಲಕ್ಷದ್ವೀಪ: ವಿವಾದಿತ ಕಾನೂನುಗಳನ್ನು ಜಾರಿಗೊಳಿಸುವುದಿಲ್ಲವೆಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ

ಎಪಿ ಉಸ್ತಾದರಿಗೆ ದೂರವಾಣಿ  ಕರೆ ಮಾಡಿ ನಿಲುವು ಸ್ಪಷ್ಟಪಡಿಸಿದ ಅಮಿತ್ ಶಾ ಕೋಝಿಕೋಡ್ |  ಲಕ್ಷದ್ವೀಪ ಜನರ ಇಚ್ಛೆಗಳಿಗೆ ವಿರುದ್ಧವಾಗಿ ಕಾನೂನು ಜಾರಿಗೊಳಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.  ಅಮಿತ್ ಶಾ ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ. ಪಿ. ಅಬೂಬಕರ್ ಮುಸ್ಲಿಯಾರ್ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.  ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಪರಿಚಯಿಸಿದ ಕಾನೂನುಗಳು ದ್ವೀಪವಾಸಿಗಳ ಜೀವನ ಮತ್ತು ಸಂಸ್ಕೃತಿಗೆ ಅಪಾಯವನ್ನುಂಟು ಮಾಡುವ ಕಾರಣ ಮಧ್ಯಪ್ರವೇಶಿಸುವಂತೆ ಕೋರಿ ಕಾಂತಪುರಂ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು.  ಇದನ್ನು ಓದಿದ ನಂತರ ಅವರು ನೇರವಾಗಿ ಕರೆ ಮಾಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಪತ್ರದಲ್ಲಿ ಎದ್ದಿರುವ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದು ಗೃಹ ಸಚಿವರು ಹೇಳಿದರು.  ಕೇಂದ್ರ ಸರ್ಕಾರ ಲಕ್ಷದ್ವೀಪ ಜನರೊಂದಿಗಿದೆ.  ದ್ವೀಪದ ಜನರ ಸಂಸ್ಕೃತಿ ಮತ್ತು ಜೀವನ ವಿಧಾನವನ್ನು ರಕ್ಷಿಸಲು ತೆಗೆದುಕೊಂಡ ಕ್ರಮಗಳೊಂದಿಗೆ  ಕೇಂದ್ರ ಸರ್ಕಾರ ನಿಲ್ಲುತ್ತದೆ. ಜನ ವಿರೋಧಿ ನೀತಿಗಳ ಬಗ್ಗೆ ಯಾವುದೇ ಚಿಂತೆ ಬೇಡ ಎಂದು ಅಮಿತ್ ಶಾ ಹೇಳಿದರು. ಅದೇ ಸಮಯದಲ್ಲಿ, ದ್ವೀಪವಾಸಿಗಳು ಹೆಚ್ಚು ಭಯಭೀತರಾಗಿದ್ದಾರೆ ಮತ್ತು ಕಳೆದ ಆರು ತಿಂಗಳಲ್ಲಿ ಅವರ ಮೇಲೆ ಹೇರಿದ ಕಾನೂನುಗಳನ್ನು ಹಿಂ...

ಮುತಅಲ್ಲಿಮರಿಗೊಂದು ಸುವರ್ಣಾವಕಾಶ

 ಮುತಅಲ್ಲಿಮರಿಗೊಂದು ಸುವರ್ಣಾವಕಾಶ ಧಾರ್ಮಿಕ, ಲೌಕಿಕ ವಿಜ್ಞಾನ ದಾಹಿಗಳಿಗೆ ಸುಲಭ ಸಾಧ್ಯವಾದ ಸ್ಥಳ. ದ.ಕ ಜಿಲ್ಲೆಯ ಹೆದ್ದಾರಿ ಪಕ್ಕದಲ್ಲಿರುವ ಆರೋಗ್ಯಕರ ತಂಪಾದ ಪ್ರತಿಷ್ಠಿತ ಊರು. ತಫ್ಸೀರ್, ಹದೀಸ್, ಫಿಕ್ಹ್, ತಸವ್ವುಫ್, ಚರಿತ್ರೆ, ನಹ್ವ್ ಗಳ ಸಮಗ್ರ ಅಧ್ಯಯನ. ಕುರ್ ಆನ್ ಪಾರಾಯಣ ರೀತಿ ಹಾಗು ಪಾರಾಯಣ ಶಾಸ್ತ್ರ ( ತಜ್ವೀದ್ ) ಗಳ ತರಗತಿ. ಭಾಷಾ ಕಲಿಕೆ, ಬರಹ, ಭಾಷಣಾ ತರಬೇತಿ. ವ್ಯಕ್ತಿತ್ವ ವಿಕಸನಾ ಕ್ಲಾಸ್. ಹಿಫ್ಲ್ ಕಲಿಯಲು ಮತ್ತು ಹಿಫ್ಲ್ ದೌರಃ (ಪುನರಾವರ್ತನೆ) ಮಾಡಲು ಸೌಕರ್ಯ. ವಾರಕ್ಕೊಮ್ಮೆ ಭಾಷಣಾ ಪರಿಶೀಲನೆ.ಬುರ್ದಾ ಆಲಾಪನಾ ರೀತಿ ಹಾಗು ವಿವರಣಾ ತರಗತಿ. ಊಟ, ವಸತಿ ಸಂಪೂರ್ಣ ಉಚಿತ. ಪರಿಣತ ಉಸ್ತಾದರ ಸಾರಥ್ಯ. ಇನ್ನೇಕೆ ತಡ. ತಮ್ಮ ಮಕ್ಕಳನ್ನು ಸೇರಿಸಿ, ಸುಂದರ ಭವಿಷ್ಯ ತಮ್ಮದಾಗಿಸಿ. ಸಂಪರ್ಕಿಸಿ : 9164502994

ಗುರುವಾರ ಈದುಲ್ ಫಿತ್ರ್.

 ಗುರುವಾರ ಈದುಲ್ ಫಿತ್ರ್. ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಲ್ ಘೋಷಣೆ ಇಂದು ( ಮಂಗಳವಾರ ಅಸ್ತ ಬುಧವಾರ ) ರಾತ್ರಿ ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ಬುಧವಾರ ರಮಳಾನ್ 30 ಪೂರ್ತಿಗೊಳಿಸಿ 13 - 05 - 2021 ಗುರುವಾರ ಈದುಲ್ ಫಿತ್ರ್ ( ಪೆರ್ನಾಲ್ ಹಬ್ಬ ) ಆಚರಿಸಲಾಗುತ್ತದೆ ಎಂದು ಗೌರವಾನ್ವಿತ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The Honourable Khazi of Ullala Qurrathussadath Seyyid Fazal Koyamma Thangal Al Bukhari has announced that 13-05-2021 is first of Shawwal and Eid ul Fithr will be celebrated on Thursday (13-05-2021)

ಮದನಿ ನಗರದ ಅಲ್ ಮದರಸತುಲ್ ಸಯ್ಯಿದ್ ಮದನಿ ಇದರ ವತಿಯಿಂದ "SBS ಗ್ರಾಂಡ್ ಫಿನಾಲೇ ಅಲ್ ಇಂಜಾಝ್ 21"

 ಮದನಿ ನಗರದ ಅಲ್ ಮದರಸತುಲ್ ಸಯ್ಯಿದ್ ಮದನಿ ಇದರ ವತಿಯಿಂದ  "SBS ಗ್ರಾಂಡ್ ಫಿನಾಲೇ ಅಲ್ ಇಂಜಾಝ್ 21" ಎಂಬ ಮದರಸ ವಿಧ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ಇತ್ತೀಚೆಗೆ ಮದ್ರಸ ಸಭಾಂಗಣದಲ್ಲಿ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಇಸ್ಮಾಯಿಲ್ SA ವಹಿಸಿದರು. ಬಹು. ಅಸ್ಸಯ್ಯಿದ್ ಯು ಎಸ್ ಶಿಹಾಬುದ್ದೀನ್ ತಂಗಲ್ ಮದಕ ದುಅ ಮತ್ತು ಮುಖ್ಯಭಾಷಣಗೈದರು. ವಿವಿದ ಸ್ಪರ್ಧೆಗಳನ್ನೊಳಗೊಂಡ ಈ ಪ್ರತಿಭಾ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ನೀಡಲಾಯಿತು.   ವಿದ್ಯಾರ್ಥಿಗಳ ನಡೆ ನುಡಿ, ಕಲಿಕೆ, ಪ್ರತಿಭೆಯನ್ನು ಗುರುತಿಸಿ ಉತ್ತಮ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಎರಡು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮದನಿ ನಗರದ ಮುನ್ನೂರು  ಪಂಚಾಯತಿನ 5ನೇ ವಾರ್ಡಿನ ನೂತನ ವಾಗಿ ಚುನಾಯಿತ ಸದಸ್ಯರಾದ ಅಬ್ದುಲ್ ಅಝೀಝ್ ಹಾಗೂ ಮಹಮ್ಮದ್ ಆರಿಫ್ ಇರುವರಿಗೆ ಮದರಸ ಸಮಿತಿ  ಹಾಗೂ SYS, SSF ಮದನಿ ನಗರ ವತಿಯಿಂದ ಸನ್ಮಾನಿಸಲಾಯಿತು.  ಪ್ರಸ್ತುತ ಕಾರ್ಯಕ್ರಮದಲ್ಲಿ  SYS ಮದನಿ ನಗರ ಬ್ರಾಂಚ್, SSF ಮದನಿ ನಗರ ಶಾಖೆಯ ಪದಾಧಿಕಾರಿಗಳು, ಊರಿನ ಹಿರಿಯರು ಉಪಸ್ಥಿತರಿದ್ದರು.   ಮದರಸದ ಮುಖ್ಯಶಿಕ್ಷಕರಾದ ಅಯ್ಯೂಬ್ ಮಹ್ಲರಿ ಸ್ವಾಗತಿಸಿದರು.  SSF ಮದನಿ ನಗರ ಶಾಖಾ ಪ್ರಧಾನ ಕಾರ್ಯದರ್ಶಿ ಹಂಝತುಲ್ ಖರ್ರಾರ್ ವಂದಿಸಿದರು. ...

ರಂಝಾನ್ ತಿಂಗಳ ಚಂದ್ರದರ್ಶನ

 ರಂಝಾನ್ ತಿಂಗಳ ಚಂದ್ರದರ್ಶನ . ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಲ್ ಘೋಷಣೆ ಇಂದು ( ಸೋಮವಾರ ಅಸ್ತ ಮಂಗಳವಾರ ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ 13 - 04 - 2021 ಮಂಗಳವಾರ ( ನಾಳೆ ) ರಮಳಾನ್ ತಿಂಗಳ ಚಾಂದ್ ಒಂದು ಆಗಿರುತ್ತದೆ ಎಂದು ಉಳ್ಳಾಲ ಹಾಗು ದ.ಕ ಜಿಲ್ಲೆಯ ಹಲವು ಮೊಹಲ್ಲಾಗಳ ಖಾಝಿ ಗೌರವಾನ್ವಿತ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The Honourable Khazi of ullala Qurrathussadath Seyyed Fazal Koyamma Thangal  has announced that 13-04-2021 is first of Ramadan

ತಾಜುಶ್ಶರೀಅಃ ಉಸ್ತಾದ್ ಅನುಸ್ಮರಣೆ ಮತ್ತು ರಂಝಾನ್ ಕಿಟ್ ವಿತರಣೆ.

ಉಳ್ಳಾಲ : ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ವತಿಯಿಂದ ತಾಜುಶ್ಶರೀಅಃ ಉಸ್ತಾದ್ ಅನುಸ್ಮರಣೆ ಮತ್ತು ಉಳ್ಳಾಲ ರೇಂಜ್ ಅಧೀನದ ಮದ್ರಸಗಳ ಎಲ್ಲಾ ಉಸ್ತಾದರುಗಳಿಗೆ ರಂಝಾನ್ ಕಿಟ್ ವಿತರಣೆ ಮಾಸ್ತಿಕಟ್ಟೆ ಆಝಾದ್ ನಗರದ ಮದ್ರಸ ಸಭಾಂಗಣದಲ್ಲಿ ನಡೆಯಿತು. ಅಳೇಕಲ ಜಾಮಿಅತು ಅಲ್ ಅಮೀನ್ ಮಸೀದಿಯ ಖತೀಬರಾದ ಅಬೂಝಿಯಾದ್ ಮದನಿ ಪಟ್ಟಾಂಬಿ ಉಸ್ತಾದರು ದುವಾ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಂದರಭಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಶರೀಫ್ ಸಅದಿ ಉದ್ಘಾಟಿಸಿದರು. ತಾಜುಶ್ಶರೀಅಃ ಅಲಿ ಕುಞ್ಞಿ ಉಸ್ತಾದ್ ಅನುಸ್ಮರಣಾ ಪ್ರಭಾಷಣ ರೇಂಜ್ ಅಧ್ಯಕ್ಷರಾದ ಯೂನುಸ್ ಇಮ್ದಾದಿ ಅಲ್ ಫುರ್ಖಾನೀ ನಡೆಸಿದರು. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ನಾಯಕರಾದ ಬಿ ಜಿ ಹನೀಫ್ ಹಾಜಿ ಉಳ್ಳಾಲ ಶುಭ ಹಾರೈಸಿ ಮಾತನಾಡಿದರು. ರೇಂಜ್ ಸಾಂತ್ವನ ವಿಭಾಗದ ಚೇಯರ್ಮಾನ್ ಜಲಾಲ್ ಮದನಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ರಂಝಾನ್ ಕಿಟ್ ವಿತರಿಸಲಾಯಿತು. ಮಂಚಿಲ ಜುಮಾ ಮಸೀದಿಯ ಖತೀಬರಾದ ಟಿ ಕೆ ಇಸ್ಮಾಯಿಲ್ ಸಅದಿ ಸಮಾಪನಾ ದುಆ ನಡೆಸಿದರು. ಕಾರ್ಯಕ್ರಮದಲ್ಲಿ ಆಝಾದ್ ನಗರ ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ಫ್ಯಾನ್ಸಿ, ಉಳ್ಳಾಲ ರೇಂಜ್ ಅಧೀನದ ಮದ್ರಸಗಳ, ಖತೀಬರು, ಮುದರ್ರಿಸರು, ಮುಅಲ್ಲಿಮರು ಭಾಗವಹಿಸಿದರು. ಸಾಂತ್ವನ ವಿಭಾಗದ ಕನ್ವೀನರ್ ಯೂಸುಫ್ ಉಸ್ತಾದ್ ಸಜಿಪ ಕಾರ್ಯಕ್ರಮ ನಿರ್ವಹಣೆ ಮಾಡಿದರು. ರೇಂಜ್ ಪ್ರಧಾನ ಕಾರ...