100 ಸಾದಾತ್ ಕುಟುಂಬಗಳಿಗೆ 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ 100 ಮನೆಗಳ ನಿರ್ಮಾಣ, ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದ್ ಮದನೀಯಂ ಪ್ರಥಮ ವಾರ್ಷಿಕ ಸಮಾರಂಭದಲ್ಲಿ ಘೋಷಣೆ
ಮದನಿಯ್ಯ ಸಾದಾತ್ ಫೌಂಡೇಶನ್ ಕರ್ನಾಟಕ ಶ್ಲಾಘನೆ..🔅
ಮದನೀಯಂ ಮಜ್ಲಿಸಿನ ರೂವಾರಿ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ಉಸ್ತಾದರ ನೇತ್ರತ್ವದಲ್ಲಿ ಪ್ರತೀ ದಿನವೂ ಎಡೆಬಿಡದೆ ಪ್ರತೀ ದಿನ ರಾತ್ರಿಗಳಲ್ಲಿ ನಡೆಯುತ್ತಿರುವ ಮದನೀಯಂ ಮಜ್ಲಿಸ್ ಮನೆ, ಮನಃಗಳನ್ನು ಆಧ್ಯಾತ್ಮಿಕತೆ ಯತ್ತ ವಾಲಿಸಿ, ಮನೆ ಮನಃಗಳಲ್ಲಿ ಈಮಾನಿನ ಪ್ರಭೆ ಬೆಳಗಿಸಿ ಮುನ್ನಡೆಯುತ್ತಿದೆ. ನಿಜವಾಗಿಯೂ ಇದೊಂದು ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ಮದನೀಯಂ ಮಜ್ಲಿಸಿನ ರೂವಾರಿ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ಉಸ್ತಾದರಿಗೆ ಕೋಟಿ ಕೋಟಿ ಅಭಿನಂದನೆಗಳು.
2021 ಆಗಸ್ಟ್ 08 ರಂದು ರಾತ್ರಿ ಮದನೀಯಂ ಮಜ್ಲಿಸಿನ ಪ್ರಥಮ ವಾರ್ಷಿಕ ಸಮಾರಂಭ ನಡೆಯಿತು. ಗಣ್ಯಾತಿಗಣ್ಯ ಸಾದಾತುಗಳು, ಉಲಮಾಗಳು ಭಾಗವಹಿಸಿದ ಪ್ರಸ್ತುತ ಕಾರ್ಯಕ್ರಮದಲ್ಲಿ ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದ್ ರವರು 100 ಸಾದಾತ್ ಕುಟುಂಬಗಳಿಗೆ 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ 100 ಮನೆಗಳ ನಿರ್ಮಾಣ ಮಾಡಲಾಗುವುದೆಂದು ಘೋಷಣೆ ಮಾಡಿದರು. ಇದೊಂದು ಐತಿಹಾಸಿಕವಾದ ಮಾದರಿಯುತವಾದ ಪ್ರಶಂಶನೀಯ, ಶ್ಲಾಘನೀಯ ಕಾರ್ಯವಾಗಿದೆಯೆಂದು ಸಾದಾತುಗಳ ಏಳಿಗೆಗಾಗಿ, ಅಭಿವ್ರದ್ಧಿಗಾಗಿ ಕಾರ್ಯಾಚರಿಸುತ್ತಿರುವ *ಮದನಿಯ್ಯಃ ಸಾದಾತ್ ಫೌಂಡೇಶನ್ ಕರ್ನಾಟಕ ಇದರ ಅಧ್ಯಕ್ಷರಾದ ಸಯ್ಯಿದ್ ಜವಾದ್ ತಂಙಳ್ ತಮ್ಮ ಸಂತೋಷ ಮತ್ತು ಸಂಪೂರ್ಣ ಸಹಕಾರವನ್ನು ವ್ಯಕ್ತಪಡಿಸಿದರು.*
ಮದನಿಯ್ಯ ಸಾದಾತ್ ಫೌಂಡೇಶನ್ ಕರ್ನಾಟಕ ಇದರ ಅಧೀನದಲ್ಲಿ ವಿವಿಧ ಊರುಗಳಲ್ಲಿ ಹಲವು ಸರ್ಕಲ್ ಸಮಿತಿಗಳು ಕಾರ್ಯಾಚರಿಸುತ್ತಿದ್ದು, ಕೋವಿಡ್-19 ನ ಪೂರ್ವ ಮತ್ತು ಕೋವಿಡ್ ಕಾಲದಲ್ಲಿ ಹಲವು ಸಾಂತ್ವನ ಚಟುವಟಿಕೆಗಳು, ತೀರಾ ಸಂಕಷ್ಟ ಬದುಕು ಅನುಭವಿಸುತ್ತಿರುವ ಸಾದಾತುಗಳನ್ನು ಗುರುತಿಸಿ ಸಹಾಯ, ವಿದ್ಯಾಭ್ಯಾಸದ ಅಭಿವ್ರದ್ಧಿಗೆ ಪೂರಕವಾದ ಹಲವು ಕಾರ್ಯ ಚಟುವಟಿಕೆಗಳು ನಡೆಸಿಕೊಂಡು ಬರುತಿದೆ.
ಇತೀ,
SADATH WEB
Media Wing
MADANIYYA SADATH FOUNDATION®
KARNATAKA


Comments
Post a Comment