Skip to main content

Posts

Showing posts from May, 2020

ರವಿವಾರ ಈದುಲ್ ಫಿತ್ರ್.

ರವಿವಾರ ಈದುಲ್ ಫಿತ್ರ್. ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಲ್ ಘೋಷಣೆ ಇಂದು ( ಶುಕ್ರವಾರ ಅಸ್ತ ಶನಿವಾರ ) ರಾತ್ರಿ ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ 24 - 05 - 2020 ಆದಿತ್ಯವಾರ ಈದುಲ್ ಫಿತ್ರ್ ( ಪೆರ್ನಾಲ್ ಹಬ್ಬ ) ಆಗಿರುತ್ತದೆ ಎಂದು ಗೌರವಾನ್ವಿತ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The Honourable Khazi of Ullala Qurrathussadath Seyyid Fazal Koyamma Thangal Al Bukhari has announced that 24-05-2020 is first of Shawwal and Eid ul Fithr will be celebrated on Sunday (24-05-2020)

ಆ ಭಾಗ್ಯವಂತರು ನಮ್ಮನ್ನಗಲಿ ಇಂದಿಗೆ 6 ವರ್ಷ

ಆ  ಭಾಗ್ಯವಂತರು ನಮ್ಮನ್ನಗಲಿ ಇಂದಿಗೆ 6 ವರ್ಷ ! ಪ್ರತಿವರ್ಷ ರಮಳಾನ್ ಒಂದು ಆಯಿತೆಂದರೆ ಅವರು ಮೊದಲ ರಾತ್ರಿಯೇ ಖರ್ಜುರದ ಕಟ್ಟನ್ನು ಹಿಡಿದು ಸಮೀಪದ ಮಸೀದಿಯ ಉಸ್ತಾದರುಗಳಿಗೆಲ್ಲಾ ಅದನ್ನು ವಿತರಣೆ ಮಾಡುತ್ತಿದ್ದರು.  ಹಬೀಬ್  ﷺ ರ ಕುಟುಂಬಸ್ಥರಾದ ಸಾದತ್ ಗಳನ್ನು, ಧಾರ್ಮಿಕ ಉಲಮಾಗಳನ್ನು, ಮುತಅಲ್ಲಿಂಗಳನ್ನು, ಕಂಡರೆ ಅವರಿಗೆ ತುಂಬಾ ಪ್ರೀತಿ ಮತ್ತು ಆರ್ಥಿಕ ನೆರವು ನೀಡಿವುದಲ್ಲದೆ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಆಹಾರ   ನೀಡುವುದರಲ್ಲಿ ಅವರು ಎತ್ತಿದ ಕೈ.  ನಿತ್ಯ ನಿರಂತರ ಮಸೀದಿಯೊಂದಿಗೆ ಸಂಪರ್ಕ ಮತ್ತು ಜಮಾತ್ ಗಳಲ್ಲಿ ಮೊದಲ ಸ್ವಫ್ಫ್ ನಲ್ಲೇ ಅವರ ಉಪಸ್ಥಿತಿ. ಸುನ್ನತ್ ಜಮಾತ್ ವಿರೋಧಿಗಳನ್ನು ತನ್ನ ಗಟ್ಟಿ ಧ್ವನಿಯಲ್ಲಿ ಗದರಿಸುವ ಮನೋಧಾರ್ಡ್ಯತೆ.  ಇಂತಹ ಹತ್ತು ಹಲವಾರು ಉತ್ತಮ ಕಾರ್ಯ ತನ್ನ ಜೀವಿತಾವಧಿಯಲ್ಲಿ ಮಾಡಲು ಭಾಗ್ಯ ದೊರೆತ ಒಬ್ಬ ಮಹಾನ್  ವ್ಯಕ್ತಿ........  ಅವರೇ *ಮರಹೂಂ  ಯು.ಟಿ ಇಲ್ಯಾಸ್ ಹಾಜಿ ಮುಕ್ಕಚ್ಚೇರಿ*   ಈ ಎಲ್ಲಾ ಒಳಿತುಗಳ ಕಾರಣದಿಂದಲೇ  ರಮಳಾನ್ 27 ರ ಶುಕ್ರವಾರ ಲೈಲತುಲ್ ಖದ್ರ್ ದಿನ ಅಪಾರ ಪುಣ್ಯ ತುಂಬಿದ ರಾತ್ರಿ ಅವರು ಮರಣ ಹೊಂದುವ ಭಾಗ್ಯ ಪಡೆದುಕೊಂಡರು.  ಅವರು ನಮ್ಮನ್ನಗಲಿ ಇಂದಿಗೆ ಆರು ವರ್ಷ ! ಅವರಿಗಾಗಿ ನಾವು ದುಆ ಮಾಡಬೇಕಾಗಿದೆ.  ಅಲ್ಲಾಹನು ಅವರ ಸ್ಥಾನವನ್ನು ಉನ್ನತಿಗೇರಿಸಲಿ - ಆಮೀನ್   S...

ಮದನಿಯ್ಯಃ ಸಾದಾತ್ ಫೌಂಡೇಶನ್ ಉಳ್ಳಾಲ ವತಿಯಿಂದ ಸಾದಾತುಗಳಿಗೆ ಈದ್ ಕಿಟ್ ವಿತರಣೆ

ಮದನಿಯ್ಯಃ ಸಾದಾತ್ ಫೌಂಡೇಶನ್ ಉಳ್ಳಾಲ ವತಿಯಿಂದ ಸಾದಾತುಗಳಿಗೆ ಈದ್ ಕಿಟ್ ವಿತರಣೆ ಮದನಿಯ್ಯಃ ಸಾದಾತ್ ಫೌಂಡೇಶನ್ ಉಳ್ಳಾಲ ಕಳೆದ ಮೂರು ವರುಷಗಳಿಂದ ಹಲವು ಸಾಂತ್ವನ ಕಾರ್ಯ ಚಟುವಟಿಕೆಯನ್ನು ನಡೆಸಿದೆ. ಇದೀಗ ಲಾಕ್ ಡೌನ್ ಕಾಲಾವಧಿಯಲ್ಲಿ ಮೂರು ಹಂತಗಳಾಗಿ ರಿಲೀಫ್ ಚಟುವಟಿಕೆಯನ್ನು ನಡೆಸಿದ್ದು, ಮೂರನೇ ಹಂತವಾಗಿ ಅಲ್ತಾಫ್ ಹುಸೈನ್ ಸಾರಥ್ಯದ ಕಿಂಝ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ 60 ಸಾದಾತ್ ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಯಿತು.  ಎಸ್ ವೈ ಎಸ್ ಗೌರವಾಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಲ್ ದುವಾ ನೆರವೇರಿಸಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ನಾಯಕರಾದ ಸಯ್ಯಿದ್ ಖುಬೈಬ್ ತಂಗಲ್ ಸಾದಾತುಗಳ ಕುರಿತು ಮಾತನಾಡಿದರು. ಸಯ್ಯಿದ್ ಝಿಯಾದ್ ತಂಗಲ್ ಶುಭ ಹಾರೈಸಿ ಮಾತನಾಡಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ, ಉಳ್ಳಾಲ ಸೆಂಟರ್ ಜೊತೆ ಕಾರ್ಯದರ್ಶಿ ಇಲ್ಯಾಸ್ ಕೈಕೋ,  ಮದನಿಯ್ಯ ಸಾದಾತ್ ಫೌಂಡೇಶನ್ ಅಧ್ಯಕ್ಷರಾದ ಸಯ್ಯಿದ್ ಜವಾದ್ ತಂಗಲ್, ಮುಝಮ್ಮಿಲ್ ಮದನಿ ಕೋಟೆಪುರ, ಇಮ್ರಾನ್ ಸ್ವಲಾತ್ ನಗರ, ಹಂಝ ಸುಂದರಿಭಾಗ್, ರಮೀಝ್ ಮೇಲಂಗಡಿ, ಶಫೀಕ್ ಅಳೇಕಲ, ಜಾವಿದ್ ಅಳೇಕಲ ಉಪಸ್ಥಿತರಿದ್ದರು. ವೀಡಿಯೋ ವೀಕ್ಷಿಸಲು ಎರಡು ಬಾರಿ ವೀಡಿಯೋದ ಮೇಲೆ ಕ್ಲಿಕ್ ಮಾಡಿ  👇

4000 Covid ರೋಗಿಗಳ ಮಧ್ಯೆ ಸೇವಾನಿರತ ನಮ್ಮೋರ್ವ ಕಾರ್ಯಕರ್ತ

4000 Covid ರೋಗಿಗಳ ಮಧ್ಯೆ ಸೇವಾನಿರತ ನಮ್ಮೋರ್ವ ಕಾರ್ಯಕರ್ತ ಜಗತ್ತಿನಾದ್ಯಂತ ಹರಡಿರುವ ಕೋವಿಡ್ 19, ಲಕ್ಷಾಂತರ ಜನರನ್ನು ಬಲಿಪಡೆದಿದೆ.  ಇದರಲ್ಲಿ ಸರಿಸುಮಾರು 4000 ಕ್ಕಿಂತಲೂ ಅಧಿಕ ರೋಗಿಗಳು ಕುವೈತ್ ನಲ್ಲೂ ಇದ್ದಾರೆ.   ಕುವೈತ್ ನ  ಆಸ್ಪತ್ರೆಗಳು  ಪ್ರತಿನಿಮಿಷ ಬಹಳ ಎಚ್ಚರದಿಂದಲೇ ದಿನದ 24 ಗಂಟೆಗಳು ರೋಗಿಗಳ ಸೇವೆಯಲ್ಲೇ ತೊಡಗಿದೆ. ಅದರಲ್ಲೂ ನಮ್ಮ ಉಳ್ಳಾಲದ ಬಶೀರ್ ರವರ ಸೇವೆ ಶ್ಲಾಘನೀಯ. ಸೆಯ್ಯಿದ್ ಕುಂಬೋಳ್ ತಂಗಳ್ ರವರ ಆಶೀರ್ವಾದ ಪಡೆದು ಕುವೈತ್ ಆಸ್ಪತ್ರೆಯಲ್ಲಿ OT Anaesthesia Technician ಸೇವೆಯಲ್ಲಿರುವ ಬಶೀರ್ ರವರು ಇದೀಗ ತನ್ನ 24 ಗಂಟೆಗಳೂ ಕೋರೋಣ ಭಾದಿತರ ಮಧ್ಯೆ ಇದ್ದು ಅವರ ಶುಶ್ರೂಷೆಯಲ್ಲೇ ದಿನ ಕಳೆಯುತ್ತಿದ್ದಾರೆ.  ಬಿಡುವಿಲ್ಲದ 24 ಗಂಟೆಯೂ ಸೇವೆ. ಕೋವಿಡ್ ರಕ್ಷಣಾ ವಸ್ತ್ರ ಧರಿಸಿಯೇ ದಿನದ ಐದು ವಕ್ತ್ ಖಳಾ ಆಗದಂತೆ ನಮಾಜ್ ನಿರ್ವಹಣೆ,  ರಂಜಾನ್ ಉಪವಾಸ,ಸಹರಿ, ಇಫ್ತಾರ್,ತರಾವೀಹ್ ಇವೆಲ್ಲಾ ಇಬಾದತ್ ಗೆ ಒಂದೂ ನಷ್ಟವಾಗದೆ ಸಮಯ ಕಂಡುಕೊಳ್ಳಲು ಹರಸಾಹಸ ಪಡುತ್ತಿರುವುದಾಗಿ ಅವರ ಮಾತಿನಿಂದ ತಿಳಿಯಲಾಯಿತು. ಅಷ್ಟಕ್ಕೂ ಅವರು ಅಲ್ಲಾಹನ ಮೇಲಿನ ತವಕ್ಕುಲ್, ಮಹಾತ್ಮರ ರಕ್ಷಣೆಯ ಭರವಸೆ, ಕಾರ್ಯಕರ್ತರ ದುಆದ ನಿರೀಕ್ಷೆಯಲ್ಲಿ ಧೈರ್ಯದಿಂದ ಮುನ್ನಡೆಯುತ್ತಿದ್ದಾರೆ. ನಾಡಿನಲ್ಲಿ ಸುನ್ನತ್ ಜಮಾಹತ್ ಗಾಗಿ ಹಲವು ಕಾರ್ಯಗಳಲ್ಲಿ ತನ್ನ ಸಹಕಾರ ಮತ್ತು ಸಾನಿಧ್ಯ ಕೊಡುತ್ತಾ, ಕಳೆದ ಸಾಲಿ...

ಕ್ಯಾಬ್ , ಆಟೋ ಚಾಲಕರಿಗೆ 5000 ರೂ. ಹೇಗೆ ಅರ್ಜಿ ಸಲ್ಲಿಸುವುದು ? ಯಾವ ತಾಣದಲ್ಲಿ ಅರ್ಜಿ ಸಲ್ಲಿಸಬೇಕು ? 

ಕ್ಯಾಬ್ , ಆಟೋ ಚಾಲಕರಿಗೆ 5000 ರೂ. ಹೇಗೆ ಅರ್ಜಿ ಸಲ್ಲಿಸುವುದು ? ಯಾವ ತಾಣದಲ್ಲಿ ಅರ್ಜಿ ಸಲ್ಲಿಸಬೇಕು ? ರಾಜ್ಯ ಸರ್ಕಾರ ಘೋಷಿಸಿರುವ 1,610 ಕೋಟಿ ರೂ ಗಳ ವಿಶೇಷ ಪ್ಯಾಕೇಜ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಟ್ಯಾಕ್ಸಿ , ಕ್ಯಾಬ್ ಮತ್ತು ಆಟೋ ಚಾಲಕರಿಗೆ 5,000 ರೂ . ಸಹಾಯ ಧನ ಘೋಷಿಸಿದೆ . ಅರ್ಹ ಫಲಾನುಭವಿಗಳು ಸಾರಿಗೆ ಇಲಾಖೆಯ ಸೇವಾ ಸಿಂಧು ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬೇಕಿದೆ . ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಿದ್ದು , ಅದನ್ನು ಹೊರತು ಬೇರೆ ಯಾವುದೇ ರೂಪದಲ್ಲಿ ಸಲ್ಲಿಸಲಾಗುವ ಅರ್ಜಿ ಸ್ವೀಕೃತವಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ . ಹೆಚ್ಚಿನ ಮಾಹಿತಿಗಾಗಿ : 7760329039 (ವಾಟ್ಸಪ್)

ಕಿಂಝ್ ಫೌಂಡೇಶನ್ ಇದರ ಚೇರ್ಮಾನ್ ಅಲ್ತಾಫ್ ಹುಸೈನ್ ರವರ ಸಮುದಾಯ ಸೇವೆ ಶ್ಲಾಘನೀಯ

ಕಿಂಝ್ ಫೌಂಡೇಶನ್ ಇದರ ಚೇರ್ಮಾನ್ ಅಲ್ತಾಫ್ ಹುಸೈನ್ ರವರ ಸಮುದಾಯ ಸೇವೆ ಶ್ಲಾಘನೀಯ ಅಕ್ಕರೆಕೆರೆ ಜಮಾಅತಿನ ಬಡ ಮತ್ತು ಮಧ್ಯಮ ವರ್ಗದ ಪ್ರತೀ ಮನೆಗಳಿಗೆ ರೇಷನ್ ಸಾಮಾಗ್ರಿಗಳನ್ನು ತಲುಪಿಸಿದ ಕಿಂಝ್ ಫೌಂಡೇಶನ್ ಇದರ ಚೇರ್ಮೆನ್ ಅಲ್ತಾಫ್ ಹುಸೈನ್ ರವರಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದೇವೆ. ಈ ಸೇವೆ ಸರ್ವರಿಗೂ ಮಾದರಿಯಾಗಲಿ. ಅಭಿನಂದನೆ ಮತ್ತು ಶುಭ ಹಾರೈಕೆಗಳೊಂದಿಗೆ.. SYS, SSF ಅಕ್ಕರೆಕೆರೆ ಶಾಖೆ