ಮದನಿಯ್ಯಃ ಸಾದಾತ್ ಫೌಂಡೇಶನ್ ಉಳ್ಳಾಲ ವತಿಯಿಂದ ಸಾದಾತುಗಳಿಗೆ ಈದ್ ಕಿಟ್ ವಿತರಣೆ
ಮದನಿಯ್ಯಃ ಸಾದಾತ್ ಫೌಂಡೇಶನ್ ಉಳ್ಳಾಲ ಕಳೆದ ಮೂರು ವರುಷಗಳಿಂದ ಹಲವು ಸಾಂತ್ವನ ಕಾರ್ಯ ಚಟುವಟಿಕೆಯನ್ನು ನಡೆಸಿದೆ. ಇದೀಗ ಲಾಕ್ ಡೌನ್ ಕಾಲಾವಧಿಯಲ್ಲಿ ಮೂರು ಹಂತಗಳಾಗಿ ರಿಲೀಫ್ ಚಟುವಟಿಕೆಯನ್ನು ನಡೆಸಿದ್ದು, ಮೂರನೇ ಹಂತವಾಗಿ ಅಲ್ತಾಫ್ ಹುಸೈನ್ ಸಾರಥ್ಯದ ಕಿಂಝ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ 60 ಸಾದಾತ್ ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಯಿತು.
ಎಸ್ ವೈ ಎಸ್ ಗೌರವಾಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಲ್ ದುವಾ ನೆರವೇರಿಸಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ನಾಯಕರಾದ ಸಯ್ಯಿದ್ ಖುಬೈಬ್ ತಂಗಲ್ ಸಾದಾತುಗಳ ಕುರಿತು ಮಾತನಾಡಿದರು. ಸಯ್ಯಿದ್ ಝಿಯಾದ್ ತಂಗಲ್ ಶುಭ ಹಾರೈಸಿ ಮಾತನಾಡಿದರು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ, ಉಳ್ಳಾಲ ಸೆಂಟರ್ ಜೊತೆ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಮದನಿಯ್ಯ ಸಾದಾತ್ ಫೌಂಡೇಶನ್ ಅಧ್ಯಕ್ಷರಾದ ಸಯ್ಯಿದ್ ಜವಾದ್ ತಂಗಲ್, ಮುಝಮ್ಮಿಲ್ ಮದನಿ ಕೋಟೆಪುರ, ಇಮ್ರಾನ್ ಸ್ವಲಾತ್ ನಗರ, ಹಂಝ ಸುಂದರಿಭಾಗ್, ರಮೀಝ್ ಮೇಲಂಗಡಿ, ಶಫೀಕ್ ಅಳೇಕಲ, ಜಾವಿದ್ ಅಳೇಕಲ ಉಪಸ್ಥಿತರಿದ್ದರು.
ವೀಡಿಯೋ ವೀಕ್ಷಿಸಲು ಎರಡು ಬಾರಿ ವೀಡಿಯೋದ ಮೇಲೆ ಕ್ಲಿಕ್ ಮಾಡಿ 👇








Comments
Post a Comment