ಕ್ಯಾಬ್ , ಆಟೋ ಚಾಲಕರಿಗೆ 5000 ರೂ. ಹೇಗೆ ಅರ್ಜಿ ಸಲ್ಲಿಸುವುದು ? ಯಾವ ತಾಣದಲ್ಲಿ ಅರ್ಜಿ ಸಲ್ಲಿಸಬೇಕು ?
ರಾಜ್ಯ ಸರ್ಕಾರ ಘೋಷಿಸಿರುವ 1,610 ಕೋಟಿ ರೂ ಗಳ ವಿಶೇಷ ಪ್ಯಾಕೇಜ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಟ್ಯಾಕ್ಸಿ , ಕ್ಯಾಬ್ ಮತ್ತು ಆಟೋ ಚಾಲಕರಿಗೆ 5,000 ರೂ . ಸಹಾಯ ಧನ ಘೋಷಿಸಿದೆ . ಅರ್ಹ ಫಲಾನುಭವಿಗಳು ಸಾರಿಗೆ ಇಲಾಖೆಯ ಸೇವಾ ಸಿಂಧು ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬೇಕಿದೆ . ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಿದ್ದು , ಅದನ್ನು ಹೊರತು ಬೇರೆ ಯಾವುದೇ ರೂಪದಲ್ಲಿ ಸಲ್ಲಿಸಲಾಗುವ ಅರ್ಜಿ ಸ್ವೀಕೃತವಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ .
ಹೆಚ್ಚಿನ ಮಾಹಿತಿಗಾಗಿ : 7760329039 (ವಾಟ್ಸಪ್)

Comments
Post a Comment