ಮದನಿ ನಗರದ ಅಲ್ ಮದರಸತುಲ್ ಸಯ್ಯಿದ್ ಮದನಿ ಇದರ ವತಿಯಿಂದ "SBS ಗ್ರಾಂಡ್ ಫಿನಾಲೇ ಅಲ್ ಇಂಜಾಝ್ 21" ಎಂಬ ಮದರಸ ವಿಧ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ಇತ್ತೀಚೆಗೆ ಮದ್ರಸ ಸಭಾಂಗಣದಲ್ಲಿ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಇಸ್ಮಾಯಿಲ್ SA ವಹಿಸಿದರು. ಬಹು. ಅಸ್ಸಯ್ಯಿದ್ ಯು ಎಸ್ ಶಿಹಾಬುದ್ದೀನ್ ತಂಗಲ್ ಮದಕ ದುಅ ಮತ್ತು ಮುಖ್ಯಭಾಷಣಗೈದರು. ವಿವಿದ ಸ್ಪರ್ಧೆಗಳನ್ನೊಳಗೊಂಡ ಈ ಪ್ರತಿಭಾ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ನೀಡಲಾಯಿತು. ವಿದ್ಯಾರ್ಥಿಗಳ ನಡೆ ನುಡಿ, ಕಲಿಕೆ, ಪ್ರತಿಭೆಯನ್ನು ಗುರುತಿಸಿ ಉತ್ತಮ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಎರಡು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮದನಿ ನಗರದ ಮುನ್ನೂರು ಪಂಚಾಯತಿನ 5ನೇ ವಾರ್ಡಿನ ನೂತನ ವಾಗಿ ಚುನಾಯಿತ ಸದಸ್ಯರಾದ ಅಬ್ದುಲ್ ಅಝೀಝ್ ಹಾಗೂ ಮಹಮ್ಮದ್ ಆರಿಫ್ ಇರುವರಿಗೆ ಮದರಸ ಸಮಿತಿ ಹಾಗೂ SYS, SSF ಮದನಿ ನಗರ ವತಿಯಿಂದ ಸನ್ಮಾನಿಸಲಾಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ SYS ಮದನಿ ನಗರ ಬ್ರಾಂಚ್, SSF ಮದನಿ ನಗರ ಶಾಖೆಯ ಪದಾಧಿಕಾರಿಗಳು, ಊರಿನ ಹಿರಿಯರು ಉಪಸ್ಥಿತರಿದ್ದರು. ಮದರಸದ ಮುಖ್ಯಶಿಕ್ಷಕರಾದ ಅಯ್ಯೂಬ್ ಮಹ್ಲರಿ ಸ್ವಾಗತಿಸಿದರು. SSF ಮದನಿ ನಗರ ಶಾಖಾ ಪ್ರಧಾನ ಕಾರ್ಯದರ್ಶಿ ಹಂಝತುಲ್ ಖರ್ರಾರ್ ವಂದಿಸಿದರು. ...