Skip to main content

Posts

Showing posts from January, 2018

*ಗ್ರಹಣ ನಮಾಜಿನ ರೂಪ*

*ಗ್ರಹಣ ನಮಾಜಿನ ರೂಪ* *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ನಾಳೆ ಮಂಚಿಲದಲ್ಲಿ ಕೂರತ್ ತಂಙಳ್ ನೇತೃತ್ವದಲ್ಲಿ ಸ್ವಲಾತ್ ವಾರ್ಷಿಕ

ಆಧುನಿಕತೆ ಮನುಷ್ಯನನ್ನು ತನ್ನತ್ತ ಸೆಳೆಯುತ್ತಿದೆ. ಧಾರ್ಮಿಕತೆ ದೂರವಾಗುತ್ತಿದೆ. ಧರ್ಮ ನಿಷ್ಠೆ, ಸೃಷ್ಠಿಕರ್ತನ ಭಯ ಕಡಿಮೆಯಾಗುತ್ತಿದೆ. ಒಟ್ಟಿನಲ್ಲಿ ಮನುಷ್ಯನ ಪಾರತ್ರಿಕ ಜೀವನ ಕಂಟಕಕ್ಕೆ ಸಿಲುಕ...

*ತೋಕೆ ಉಸ್ತಾದ್ ತೊಕ್ಕೋಟು ಕಲ್ಲಾಪಿಗೆ*

👍✌👍✌👍✌👍✌👍✌👍 * ತಾಜುಲ್ ಉಲಮಾ ಸುನ್ನೀ ಕ್ರಿಯಾ ಸಮಿತಿ ಕಲ್ಲಾಪು ಇದರ ಆಶ್ರಯದಲ್ಲಿ ಬ್ರಹತ್ ಸುನ್ನೀ ಆದರ್ಶ ಸಮ್ಮೇಳನ ಹಾಗು ಪ್ರಶ್ನೋತ್ತರ ಕಾರ್ಯಕ್ರಮ * ಮುಖ್ಯ ಭಾಷಣಗಾರರು : * ಬಹು ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದ್ * ಸ್ಥಳ : * ಆಝಾದ್ ಗ್ರೌಂಡ್ ಕಲ್ಲಾಪು * ಸಮಯ :  * 2018 ಜನವರಿ - 29, ಸೋಮವಾರ ಸಂಜೆ - 5 - 00 ಗಂಟೆಗೆ * 🎙🎙🎙🎙🎙🎙🎙🎙🎙🎙🎙 ಹೌದು : ಕರ್ನಾಟಕ ಸುನ್ನಿಗಳ ಆಶಾಕಿರಣ, ನೂತನವಾದಿಗಳ ಸಿಂಹಸ್ವಪ್ನ, ಕರ್ನಾಟಕ ಸುನ್ನೀ ಜಂ ಇಯ್ಯತುಲ್ ಉಲಮಾ ಇದರ ಕಾರ್ಯದರ್ಶಿ, ದ.ಕ ಜಿಲ್ಲಾ ಸುನ್ನೀ ಜಂ ಇಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿ, ದಾರುಲ್ ಮುಸ್ತಫ ಮೋರಲ್ ಅಕಾಡೆಮಿ ಇದರ ಶಿಲ್ಪಿ, ಸುನ್ನೀ ವಾಣಿ ಮಾಸಿಕದ ಪ್ರಧಾನ ಸಂಪಾದಕರೂ ಆದ ಬಹು ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದ್ ಕಲ್ಲಾಪು ಆಝಾದ್ ಗ್ರೌಂಡಿನಲ್ಲಿ ನಡೆಯಲಿರುವ ಐತಿಹಾಸಿಕ ಬ್ರಹತ್ ಸುನ್ನೀ ಆದರ್ಶ ಸಮ್ಮೇಳನದಲ್ಲಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. * ತನ್ನ ಸರಾಗ ಸುಂದರ ವಾಕ್ಚಾತುರ್ಯದ ಮೂಲಕ ಕರ್ನಾಟಕ ಸುನ್ನಿಗಳ ಮನಃ ಪಟಲದಲ್ಲಿ ಪ್ರಶೋಭಿತ ತಾರೆಯಾಗಿ ಪ್ರಜ್ವಲಿಸುತ್ತಿರುವ ತೋಕೆ ಉಸ್ತಾದ್ * * ಹಲವಾರು ಸುನ್ನೀ ಆದರ್ಶ ಸಮ್ಮೇಳನಗಳ ಮೂಲಕ ತನ್ನ ತೀಕ್ಷ್ಣವಾದ ವಾಗ್ಝರಿಯಿಂದ ಜಮಾ ಮುಜಾ ಸಲಫಿಗಳ ನಿದ್ದೆಗೆಡಿಸಿರುವ ತೋಕೆ ಉಸ್ತಾದ್ ರವರ ಆಗಮನವನ್ನು ಕಲ್ಲಾಪು, ಪಟ್ಲ, ಸುತ್ತಮುತ್ತ ಪ್ರದೇಶದ ಸ...

ಸಂವಿಧಾನ ಮತ್ತು ಶರೀಅತ್ ಹಸ್ತಕ್ಷೇಪ ವಿರುದ್ಧ ಗುಡುಗಿದ ಶಾಫಿ ಸ ಅದಿ,ಝೈನಿ ‌ಕಾಮಿಲ್

*ಮಂಗಳೂರು.* ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಭವ್ಯ ಭಾರತ ದೇಶದ ಮಹೋನ್ನತ ಸಂವಿಧಾನ ಎಲ್ಲಾ ವರ್ಗದ ಜನತೆಯ  ಆಶಾಕಿರಣವಾಗಿದೆ ಎಂದು ಎಸ್ ಎಸ್ ಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ.ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ಹೇಳಿದ್ದಾರೆ. ರಾಜ್ಯ ಎಸ್ ವೈ ಎಸ್ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಹಮ್ಮಿಕೊಂಡ ಪ್ರಜಾಪ್ರಭುತ್ವ ಜಾಗೃತಿ ಸಮಾವೇಶ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ದೂರ ದೃಷ್ಟಿಯ ಪಲವಾಗಿ 1950 ಜನವರಿ 26 ರಂದು ರಚನೆಗೊಂಡ ಸಂವಿಧಾನ ಎಲ್ಲಾ ಧರ್ಮ, ಜಾತಿ,ಪಂಥ ಗಳ ಆಶಯಗಳಿಗೆ ಪೂರಕವಾಗಿದ್ದು ಇದನ್ನು ದುರ್ವ್ಯಾಖ್ಯಾನ ಮಾಡುವ ಮೂಲಕ ಇಡೀ ನ್ಯಾಯಾಂಗ ವ್ಯವಸ್ಥೆಗೆ ಅಪಚಾರ ಮಾಡಲಾಗುತ್ತಿದೆ. ಸರ್ವ ಜನಾಂಗದವರ ತವರೂರಾಗಿದ್ದು ಭಾರತದಲ್ಲಿ ಯಾವ ರೀತಿಯ ವಿಭಜನಾವಾದಗಳೂ ಯಶಸ್ವಿ ಯಾಗದೆಂದು ಅವರು ಹೇಳಿದರು. ಮುಖ್ಯ ಭಾಷಣ ಮಾಡಿದ ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಎಂ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಯವರು "ವೈವಿಧ್ಯಮಯ ಸಂಸ್ಕೃತಿಗಳ ತವರೂರಾದ ಭಾರತವನ್ನು‌ ಮಹಾತ್ ಗಾಂಧೀಜಿ, ಜವಹರಲಾಲ್ ನೆಹರು, ವಲ್ಲಭಭಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ರಂಥ ಸರ್ವಧರ್ಮ ಸಹಿಷ್ಣುತಾ ವಾಧಿಗಳು ಒಗ್ಗಟ್ಟಿನಿಂದ ಮುನ್ನಡೆಸಿ ಸೌಹಾರ್ದ ಪರಂಪರೆಯ ಭದ್ರ ಬುನಾದಿಯನ್ನು ಹಾಕಿ ಕೊಟ್ಟಿದ್ದ...

ಬಾಯಾರ್ ಸ್ವಲಾತ್ ಮಜ್ಲಿಸ್ ಜನವರಿ 19ಕ್ಕೆ

ಬಾಯಾರ್ – ಸಹಸ್ರಾರು ಮಂದಿ ಪಾಲ್ಗೊಳ್ಳುವ ಮಾಸಿಕ ಸ್ವಲಾತ್ತ್ ಹಾಗೂ ತಾಜುಲ್ ಉಲಮಾ , ನೂರುಲ್ ಉಲಮಾ ಅನುಸ್ಮರಣೆ *2018 ಜನವರಿ 19ಕ್ಕೆ ಬಾಯಾರ್ ಮುಜಮ್ಮಹ್ ಕ್ಯಾಂಪಸ್‍ನಲ್ಲಿನಡೆಯಲಿದೆ.* ಮಗ್ರಿಬ್ ನಮಾಝಿನ ನಂತ...

ವಿದೇಶ ಯಾತ್ರೆ ಹೊರಡುತ್ತಿರುವ ಹಾಫಿಝ್ ಹಸನ್ ಮುಬಾರಕ್ ಸಖಾಫಿಗೆ  ಬೀಳ್ಕೊಡುಗೆ 🌷🌷🌷🌷🌷🌷🌷🌷🌷🌷

ಎಸ್ ವೈ ಎಸ್ ಉಳ್ಳಾಲ ಮಂಚಿಲ ಬ್ರಾಂಚ್ ವತಿಯಿಂದ ವಿದೇಶ ಯಾತ್ರೆ ಹೊರಡುತ್ತಿರುವ ಮಂಚಿಲ ಜುಮಾ ಮಸೀದಿ ಖತೀಬರೂ, ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್  ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ಅಧ್ಯಕ್ಷರೂ ಆಗಿರುವ ಹಾಫಿಝ್ ಹಸನ್ ಮುಬಾರಕ್ ಸಖಾಫಿಯವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಹಲವಾರು ವರ್ಷಗಳ ಕಾಲ ಕಲ್ಲಾಪು ಜುಮಾ ಮಸೀದಿಯ ಖತೀಬರಾಗಿ ಸೇವೆ ಸಲ್ಲಿಸಿ ಸುನ್ನತ್ ಜಮಾಅತಿನ ಆಶಯಾದರ್ಶವನ್ನು ಜನರೆಡೆ ಪಸರಿಸಿ ಎಲ್ಲರ ಪ್ರೀತಿ ಪಾತ್ರರಾಗಿ ಬಳಿಕ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ಸೇವೆಗೈದು ಇದೀಗ ಕೆಲವು ಸಮಯದಿಂದ ಉಳ್ಳಾಲ ಮಂಚಿಲ ಜುಮಾ ಮಸೀದಿಯಲ್ಲಿ ಖತೀಬರಾಗಿ ಸೇವೆಗೈಯ್ಯುತ್ತಿದ್ದು ಹ್ರಸ್ವ ಕಾಲಾವಧಿಯಲ್ಲಿಯೇ ಮಂಚಿಲ ಮೊಹಲ್ಲಾದವರ ಮಾತ್ರವಲ್ಲ ಉಳ್ಳಾಲದ ಸುನ್ನಿಗಳ ಅಭಿಮಾನವಾಗಿ ಮಾರ್ಪಟ್ಟಿದ್ದರು. ಉಳ್ಳಾಲದಲ್ಲಿ ಕಿತಾಬ್ ಗೊಂದಲ ಉಂಟಾದಾಗ ತಾಜುಲ್ ಉಲಮಾ ಖ.ಸಿ ರವರ ಕಾಲದಿಂದಲೇ ವಿದ್ಯಾರ್ಥಿಗಳಿಗೆ ಕಲಿಸಿಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾದ ಕಿತಾಬುಗಳನ್ನೇ ಉಳ್ಳಾಲದ ಮದ್ರಸಗಳಲ್ಲಿ ಮುಂದುವರಿಯಬೇಕು ಎಂಬ ನಿಟ್ಟಿನಲ್ಲಿ ಉಳ್ಳಾಲದಲ್ಲಿ ಸೇವೆಗೈಯ್ಯುತ್ತಿರುವ ಉಸ್ತಾದರುಗಳು ಒಟ್ಟು ಸೇರಿ ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜನ್ನು ರೂಪೀಕರಿಸಲಾಗಿತ್ತು. ಇದರ ಅಧ್ಯಕ್ಷರಾಗಿ ಬಹು ಹಾಫಿಝ್ ಹಸನ್ ಮುಬಾರಕ್ ಸಖಾಫಿ ಆಯ್ಕೆಯಾಗಿದ್ದರು. ಅವರ ನೇತ್ರತ್ವದಲ್ಲಿ ಉಳ್ಳಾಲದ ಮದ...

MARKAZ RUBY JUBILEE, PHOTO ALBUM