ಎಸ್ ವೈ ಎಸ್ ಉಳ್ಳಾಲ ಮಂಚಿಲ ಬ್ರಾಂಚ್ ವತಿಯಿಂದ ವಿದೇಶ ಯಾತ್ರೆ ಹೊರಡುತ್ತಿರುವ ಮಂಚಿಲ ಜುಮಾ ಮಸೀದಿ ಖತೀಬರೂ, ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ಅಧ್ಯಕ್ಷರೂ ಆಗಿರುವ ಹಾಫಿಝ್ ಹಸನ್ ಮುಬಾರಕ್ ಸಖಾಫಿಯವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಹಲವಾರು ವರ್ಷಗಳ ಕಾಲ ಕಲ್ಲಾಪು ಜುಮಾ ಮಸೀದಿಯ ಖತೀಬರಾಗಿ ಸೇವೆ ಸಲ್ಲಿಸಿ ಸುನ್ನತ್ ಜಮಾಅತಿನ ಆಶಯಾದರ್ಶವನ್ನು ಜನರೆಡೆ ಪಸರಿಸಿ ಎಲ್ಲರ ಪ್ರೀತಿ ಪಾತ್ರರಾಗಿ ಬಳಿಕ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ಸೇವೆಗೈದು ಇದೀಗ ಕೆಲವು ಸಮಯದಿಂದ ಉಳ್ಳಾಲ ಮಂಚಿಲ ಜುಮಾ ಮಸೀದಿಯಲ್ಲಿ ಖತೀಬರಾಗಿ ಸೇವೆಗೈಯ್ಯುತ್ತಿದ್ದು ಹ್ರಸ್ವ ಕಾಲಾವಧಿಯಲ್ಲಿಯೇ ಮಂಚಿಲ ಮೊಹಲ್ಲಾದವರ ಮಾತ್ರವಲ್ಲ ಉಳ್ಳಾಲದ ಸುನ್ನಿಗಳ ಅಭಿಮಾನವಾಗಿ ಮಾರ್ಪಟ್ಟಿದ್ದರು. ಉಳ್ಳಾಲದಲ್ಲಿ ಕಿತಾಬ್ ಗೊಂದಲ ಉಂಟಾದಾಗ ತಾಜುಲ್ ಉಲಮಾ ಖ.ಸಿ ರವರ ಕಾಲದಿಂದಲೇ ವಿದ್ಯಾರ್ಥಿಗಳಿಗೆ ಕಲಿಸಿಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾದ ಕಿತಾಬುಗಳನ್ನೇ ಉಳ್ಳಾಲದ ಮದ್ರಸಗಳಲ್ಲಿ ಮುಂದುವರಿಯಬೇಕು ಎಂಬ ನಿಟ್ಟಿನಲ್ಲಿ ಉಳ್ಳಾಲದಲ್ಲಿ ಸೇವೆಗೈಯ್ಯುತ್ತಿರುವ ಉಸ್ತಾದರುಗಳು ಒಟ್ಟು ಸೇರಿ ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜನ್ನು ರೂಪೀಕರಿಸಲಾಗಿತ್ತು. ಇದರ ಅಧ್ಯಕ್ಷರಾಗಿ ಬಹು ಹಾಫಿಝ್ ಹಸನ್ ಮುಬಾರಕ್ ಸಖಾಫಿ ಆಯ್ಕೆಯಾಗಿದ್ದರು. ಅವರ ನೇತ್ರತ್ವದಲ್ಲಿ ಉಳ್ಳಾಲದ ಮದ್ರಸಗಳಲ್ಲಿ ಸುನ್ನೀ ಬೋರ್ಡ್ ನ ಕಿತಾಬುಗಳನ್ನು ಮುಂದುವರಿಸಲಾಗಿತ್ತು.
ಬಹು ಹಾಫಿಝ್ ಹಸನ್ ಮುಬಾರಕ್ ಸಖಾಫಿ ಉಸ್ತಾದರು ಇದೀಗ ಮತ್ತೆ ವಿದೇಶ ಯಾತ್ರೆ ಹೊರಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಸ್ ವೈ ಎಸ್ ಮಂಚಿಲ ಬ್ರಾಂಚ್ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಸುನ್ನತ್ ಜಮಾಅತಿನ ಆಶಯಾದರ್ಶವನ್ನು ಪಸರಿಸಲು ಅಲ್ಲಾಹು ಅವರಿಗೆ ತೌಫೀಖ್ ನೀಡಲಿ. ಅಲ್ಲಾಹು ಅವರ ಯಾತ್ರೆ ಮತ್ತು ಕೆಲಸ ಕಾರ್ಯಗಳಲ್ಲಿ ಬರ್ಕತ್ ನೀಡಲಿ. ಆಮೀನ್
Comments
Post a Comment