👍✌👍✌👍✌👍✌👍✌👍
*ತಾಜುಲ್ ಉಲಮಾ ಸುನ್ನೀ ಕ್ರಿಯಾ ಸಮಿತಿ ಕಲ್ಲಾಪು ಇದರ ಆಶ್ರಯದಲ್ಲಿ ಬ್ರಹತ್ ಸುನ್ನೀ ಆದರ್ಶ ಸಮ್ಮೇಳನ ಹಾಗು ಪ್ರಶ್ನೋತ್ತರ ಕಾರ್ಯಕ್ರಮ*
ಮುಖ್ಯ ಭಾಷಣಗಾರರು : *ಬಹು ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದ್*
ಸ್ಥಳ : *ಆಝಾದ್ ಗ್ರೌಂಡ್ ಕಲ್ಲಾಪು*
ಸಮಯ : *2018 ಜನವರಿ - 29, ಸೋಮವಾರ ಸಂಜೆ - 5 - 00 ಗಂಟೆಗೆ*
🎙🎙🎙🎙🎙🎙🎙🎙🎙🎙🎙
ಹೌದು : ಕರ್ನಾಟಕ ಸುನ್ನಿಗಳ ಆಶಾಕಿರಣ, ನೂತನವಾದಿಗಳ ಸಿಂಹಸ್ವಪ್ನ, ಕರ್ನಾಟಕ ಸುನ್ನೀ ಜಂ ಇಯ್ಯತುಲ್ ಉಲಮಾ ಇದರ ಕಾರ್ಯದರ್ಶಿ, ದ.ಕ ಜಿಲ್ಲಾ ಸುನ್ನೀ ಜಂ ಇಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿ, ದಾರುಲ್ ಮುಸ್ತಫ ಮೋರಲ್ ಅಕಾಡೆಮಿ ಇದರ ಶಿಲ್ಪಿ, ಸುನ್ನೀ ವಾಣಿ ಮಾಸಿಕದ ಪ್ರಧಾನ ಸಂಪಾದಕರೂ ಆದ ಬಹು ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದ್ ಕಲ್ಲಾಪು ಆಝಾದ್ ಗ್ರೌಂಡಿನಲ್ಲಿ ನಡೆಯಲಿರುವ ಐತಿಹಾಸಿಕ ಬ್ರಹತ್ ಸುನ್ನೀ ಆದರ್ಶ ಸಮ್ಮೇಳನದಲ್ಲಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ.
*ತನ್ನ ಸರಾಗ ಸುಂದರ ವಾಕ್ಚಾತುರ್ಯದ ಮೂಲಕ ಕರ್ನಾಟಕ ಸುನ್ನಿಗಳ ಮನಃ ಪಟಲದಲ್ಲಿ ಪ್ರಶೋಭಿತ ತಾರೆಯಾಗಿ ಪ್ರಜ್ವಲಿಸುತ್ತಿರುವ ತೋಕೆ ಉಸ್ತಾದ್*
*ಹಲವಾರು ಸುನ್ನೀ ಆದರ್ಶ ಸಮ್ಮೇಳನಗಳ ಮೂಲಕ ತನ್ನ ತೀಕ್ಷ್ಣವಾದ ವಾಗ್ಝರಿಯಿಂದ ಜಮಾ ಮುಜಾ ಸಲಫಿಗಳ ನಿದ್ದೆಗೆಡಿಸಿರುವ ತೋಕೆ ಉಸ್ತಾದ್ ರವರ ಆಗಮನವನ್ನು ಕಲ್ಲಾಪು, ಪಟ್ಲ, ಸುತ್ತಮುತ್ತ ಪ್ರದೇಶದ ಸುನ್ನಿಗಳು ಆತುರಕಾತರದಿಂದ ಕಾಯುತ್ತಿರುವಾಗ ತಮಗಿದೋ ಪ್ರೀತಿಯ ಸವಿನಯ ಆಮಂತ್ರಣ*
_____________________________________
ಈ ಕಾರ್ಯಕ್ರಮಕ್ಕೆ ಶುಭ ಕೋರುವ
*ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ*
ಉಪಾಧ್ಯಕ್ಷರು : ಸುನ್ನೀ ಸಾಹಿತ್ಯ ಮಂಡಳಿ, ಸುಸಾಮ ಮಂಗಳೂರು
Comments
Post a Comment