Skip to main content

*ಗ್ರಹಣ ನಮಾಜಿನ ರೂಪ*

*ಗ್ರಹಣ ನಮಾಜಿನ ರೂಪ*

*ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವುದು.

ಬಳಿಕ ವಜ್ಜಹ್ತು, ಅಊದ್ಸು, ಫಾತಿಹಃ, ಅಲ್ ಬಖರ ಅಥವಾ ಅಲ್ ಬಖರ ಸೂರತಿನಷ್ಟು ಬೇರೆ ಸೂರತುಗಳಿಂದ ಓದುವುದು..

ನಂತರ ಒಂದನೇ ರುಕೂಹ್, ರುಕೂಹಿನಲ್ಲಿ ನೂರು ಆಯತ್ ಓದುವಷ್ಟು ಸಮಯ ತಸ್ಬೀಹ್ ಹೇಳಬೇಕು.
ಬಳಿಕ ಈತಿದಾಲ್ ನಲ್ಲಿ *ಸಮಿಅಲ್ಲಾಹು ಲಿಮನ್ ಹಮಿದಃ* ಹೇಳಿ ರುಕೂಇನಿಂದ ಏಳುತ್ತಾ ಈತಿದಾಲ್ ನಲ್ಲಿ ಹೇಳುವ ದ್ಸಿಕ್ರ್ ಹೇಳಬೇಕು. ಬಳಿಕ ಅಊದ್ಸು, ಫಾತಿಹಃ, ಅಲ್ ಬಖರದ ಇನ್ನೂರು ಆಯತ್ ಓದುವಷ್ಟು ಕುರಾನಿನಿಂದ ಓದಬೇಕು.
ಮತ್ತೆ ಎರಡನೇ ರುಕೂಹ್. ಇದರಲ್ಲಿ 80 ಆಯತ್ ಓದುವಷ್ಟು ತಸ್ಬೀಹ್ ಹೇಳುವುದು. ಬಳಿಕ ಸಮಿಅಲ್ಲಾಹು ಲಿಮನ್ ಹಮಿದಃ ಹೇಳಿ ರುಕೂಇನಿಂದ ಎದ್ದು ಈತಿದಾಲ್ ನಲ್ಲಿ ಹೇಳುವ ದ್ಸಿಕ್ರ್ ಹೇಳುವುದು.

ಮತ್ತೆ ಒಂದನೇ ಸುಜೂದ್ ಇದರಲ್ಲಿ ನೂರು ಆಯತ್ ಓದುವಷ್ಟು ಸಮಯ ತಸ್ಬೀಹ್ ಹೇಳುವುದು. ಎರಡು ಸುಜೂದ್ ಗಳ ಮಧ್ಯೆ ಇರುವ ಕೂರುವಿಕೆಯಲ್ಲಿ ಅದರದ್ದೇ ಆದ ದ್ಸಿಕ್ರ್ ಹೇಳುವುದು. ಬಳಿಕ ಎರಡನೇ ಸುಜೂದ್. ಇದರಲ್ಲಿ 80 ಆಯತ್ ಓದುವಷ್ಟು ಸಮಯ ತಸ್ಬೀಹ್ ಹೇಳುವುದು.

ನಂತರ ಎರಡನೇ ರಕಅತ್. ಅಊದ್ಸು, ಫಾತಿಹಾದ ಬಳಿಕ 150 ಆಯತಿನಷ್ಟು ಓದುವುದು. ಬಳಿಕ ಮೂರನೇ ರುಕೂಹ್, ಇದರಲ್ಲಿ 70 ಆಯತ್ ನಷ್ಟು ತಸ್ಬೀಹ್ ಹೇಳುವುದು. ಬಳಿಕ ಸಮಿಅಲ್ಲಾಹು ಲಿಮನ್ ಹಮಿದಃ ಹೇಳಿ ರುಕೂಇನಿಂದ ಎದ್ದು ಈತಿದಾಲ್ ನಲ್ಲಿ ಹೇಳುವ ದ್ಸಿಕ್ರ್ ಹೇಳುವುದು.

ನಂತರ ಅಊದ್ಸು, ಫಾತಿಹಾದ ಬಳಿಕ 100 ಆಯತಿನಷ್ಟು ಓದುವುದು, ಬಳಿಕ ನಾಲ್ಕನೇ ರುಕೂಹ್, ಇದರಲ್ಲಿ 50 ಆಯತ್ ನಷ್ಟು ತಸ್ಬೀಹ್ ಹೇಳುವುದು. ಬಳಿಕ ಸಮಿಅಲ್ಲಾಹು ಲಿಮನ್ ಹಮಿದಃ ಹೇಳಿ ರುಕೂಇನಿಂದ ಎದ್ದು ಈತಿದಾಲ್ ನಲ್ಲಿ ಹೇಳುವ ದ್ಸಿಕ್ರ್ ಹೇಳುವುದು.

ನಂತರ ಮತ್ತೆ ಮೂರನೇ ಸುಜೂದ್ ಇದರಲ್ಲಿ 70 ಆಯತ್ ಓದುವಷ್ಟು ಸಮಯ ತಸ್ಬೀಹ್ ಹೇಳುವುದು. ಎರಡು ಸುಜೂದ್ ಗಳ ಮಧ್ಯೆ ಇರುವ ಕೂರುವಿಕೆಯಲ್ಲಿ ಅದರದ್ದೇ ಆದ ದ್ಸಿಕ್ರ್ ಹೇಳುವುದು. ಬಳಿಕ ನಾಲ್ಕನೇ ಸುಜೂದ್. ಇದರಲ್ಲಿ 50 ಆಯತ್ ಓದುವಷ್ಟು ಸಮಯ ತಸ್ಬೀಹ್ ಹೇಳುವುದು.

ಸುಜೂದಿನಿಂದ ಎದ್ದು ಅತ್ತಹಿಯ್ಯಾತ್, ಸ್ವಲಾತ್ ದುಆಗಳ ಬಳಿಕ ಸಲಾಮ್ ಹೇಳಿ ನಮಾಜಿನಿಂದ ವಿರಮಿಸುವುದು.

*ಸಾಮಾನ್ಯ ನಮಾಜಿಗಿಂತ ಗ್ರಹಣ ನಮಾಜು ಭಿನ್ನ*

ಪ್ರತೀ ಎರಡು ರಕಅತ್ ನಲ್ಲೂ ಎರಡು ನಿಲ್ಲುವಿಕೆ ( ಖಿಯಾಮ್ ), ಎರಡು ರುಕೂಹ್ ಇರುವುದು.

*ನಮಾಜಿನ ಬಳಿಕ ಎರಡು ಖುತುಬಾ ಓದುವುದು ಸುನ್ನತ್ತಿದೆ. ತೌಬಾ, ಸ್ವದಖಃ ಮುಂತಾದ ಸತ್ಕರ್ಮಗಳು ನಿರ್ವಹಿಸಲು ಹಾಗು ಕೆಡುಕುಗಳಿಂದ ಮುಕ್ತರಾಗಿ ಜೀವಿಸಲು ಇಮಾಮ್ ಜನರನ್ನು ಪ್ರೇರೇಪಿಸಬೇಕು, ಜಮಾಅತ್ತಾಗಿ ನಿರ್ವಹಿಸುವುದು ಮತ್ತು ಮಸೀದಿಯಲ್ಲಿ ನಮಾಜು ಮಾಡುವಿಕೆ ಪ್ರತ್ಯೇಕ ಸುನ್ನತಾಗಿದೆ.

ಜಮಾಅತಾಗಿ ನಿರ್ವಹಿಸುವಾಗ
*ಅಸ್ಸಲಾತು ಜಾಮಿಅಃ* ಎಂದು ಮೊದಲು ಕರೆಯಲು ಸುನ್ನತ್ತಿದೆ. ಒಬ್ಬಂಟಿಗನಾಗಿಯೂ ಈ ನಮಾಜು ನಿರ್ವಹಿಸಬಹುದು. ಗ್ರಹಣ ನಮಾಜು ಪ್ರಬಲ ಸುನ್ನತ್ತಾದ ನಮಾಜಾಗಿದೆ. *ಅಪೂರ್ವವಾಗಿ ಸಿಗುವ ಸುನ್ನತ್*

_________________________________________

31-1-2018 ಬುಧವಾರ ಸಂಜೆ 5-18 ಕ್ಕೆ ಚಂದ್ರಗ್ರಹಣ ಪ್ರಾರಂಭವಾಗುತ್ತದೆ. 7-19 Pm ಕ್ಕೆ ಸಂಪೂರ್ಣ ಚಂದ್ರಗ್ರಹಣ ಉಂಟಾಗಲಿದ್ದು, 8-30 Pm ಕ್ಕೆ ಕೊನೆಗೊಳ್ಳಲಿದೆ.

*ಗ್ರಹಣ ಪ್ರಾರಂಭವಾಗಿ ಕೊನೆಗೊಳ್ಳುವುದರ ಒಳಗಾಗಿದೆ ಪ್ರಸ್ತುತ ನಮಾಜಿನ ಸಮಯ*

By -

*ಪಿ ಎಸ್ ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ*

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.