ಬೆಂಗಳೂರು:ಕಾಶ್ಮೀರದ ಪುಲ್ವಾಮದಲ್ಲಿ 42 ಸೈನಿಕರ ಕಗ್ಗೊಲೆಗೈದ ರಾಕ್ಷಸರನ್ನು ಶೀಘ್ರದಲ್ಲಿ ಪತ್ತೆಹಚ್ಚಿ ನೇಣುಗಂಬಕ್ಕೇರಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು. ಇಡೀ ಭಾರತೀಯರನ್ನು ಆತಂಕ ಮತ್ತು ದುಖಃಕ್ಕೀಡು ಮಾಡಿದ ಪುಲ್ವಾಮ ಘಟನೆಯು ಜಾಗತಿಕ ರಾಕ್ಷಸಿತನದ ಪರಮಾವಧಿಯಾಗಿದೆ. ೪೨ ಸೈನಿಕರ ಕುಟುಂಬಕ್ಕೆ ಸಾಂತ್ವನ ಮಾತ್ರವಲ್ಲ ಅವರ ಎಲ್ಲಾ ಖರ್ಚುವೆಚ್ಚಗಳನ್ನು ಭರಿಸಿ ಸೈನಿಕರಿಗೆ ಸ್ಪೂರ್ತಿಯಾಗುವ ಕೆಲಸ ಅಧಿಕೃತರಿಂದ ನಡೆಯಬೇಕು. ಜಾಗತಿಕ ಮಟ್ಟದಲ್ಲಿ ಮನುಷ್ಯ ರಾಶಿಯನ್ನು ಕೊಂದು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುವ ಮತ್ತು ಗಟ್ಟಿಗೊಳಿಸುವ ರಾಜಕೀಯ ಪ್ರೇರಿತ ಉಗ್ರವಾದಿಗಳಿಗೆ ಸರಿಯಾದ ಪಾಠವಾಗಬೇಕಾದರೆ ಪುಲ್ವಾಮ ಘಟನೆಯ ಸರಿಯಾದ ತನಿಖೆ ಪ್ರಾಮಾಣಿಕತೆಯಿಂದಿರಬೇಕು. ಸೈನಿಕರ ಕಗ್ಗೊಲೆಯ ಹಿಂದೆ ಯಾವ ಕರಾಳ ಹಸ್ತವಿದ್ದರೂ ಅವರನ್ನು ಬಹಿರಂಗವಾಗಿ ಶಿಕ್ಷಿಸುವ ಆಸೆಯನ್ನು 130 ಕೋಟಿ ಭಾರತೀಯರು ಇಟ್ಟುಕೊಂಡಿದ್ದಾರೆ. ಅಕ್ರಮಿಗಳು ಎಷ್ಟೇ ಪ್ರಭಾವಿಗಳು ಅಥವಾ ಪ್ರಬಲ ರಾಷ್ಟ್ರದವರಾಗಿದ್ದರೂ ಅವರ ವಿರುದ್ಧ ಗರಿಷ್ಟ ಶಿಕ್ಷೆಯಾಗಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನ ಶಾಫಿ ಸಅದಿ ತಿಳಿಸಿದ್ದಾರೆ.