ಎಸ್ ವೈ ಎಸ್ ಫರೀದ್ ನಗರ ಬ್ರಾಂಚ್ ದ್ವಿ ವಾರ್ಷಿಕ ಮಹಾಸಭೆ ಫರೀದ್ ನಗರದ ಎಸ್ ವೈ ಎಸ್, ಎಸ್ಲೆಸ್ಲೆಫ್ ಕಛೇರಿಯಲ್ಲಿ ನಡೆಯಿತು.
ಶಾಹುಲ್ ಹಮೀದ್ ಫರೀದ್ ನಗರ ಅಧ್ಯಕ್ಷತೆ ವಹಿಸಿದರು. ಅಸ್ಸಯ್ಸಿದ್ ಶರಫುದ್ದೀನ್ ತಂಗಲ್ ಫರೀದ್ ನಗರ ದುವಾ ನೆರವೇರಿಸಿ, ಸಭೆಯನ್ನು ಉದ್ಘಾಟಿಸಿದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಫರೀದ್ ನಗರ ಸ್ವಾಗತಿಸಿದರು. ಬಳಿಕ ವರದಿ ಮಂಡಿಸಿದರು. ಬ್ರಾಂಚ್ ಕೋಶಾಧಿಕಾರಿ ಉಸ್ಮಾನ್ ಬಿ ಲೆಕ್ಕಪತ್ರ ಮಂಡಿಸಿದರು. ಎರಡು ವರ್ಷಗಳ ಅವಧಿಯಲ್ಲಿ ಬ್ರಾಂಚ್ ಮಾಡಿದ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯ ಚಟುವಟಿಕೆಯ ಮಾಹಿತಿಯನ್ನು ಶಾಹುಲ್ ಹಮೀದ್ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಚುನಾವಣಾ ವೀಕ್ಷಕರಾಗಿ ಹರೇಕಳ ಸೆಂಟರ್ ಅಧ್ಯಕ್ಷರಾದ ಹೈದರಾಲಿ ಸಖಾಫಿ ಇನೋಳಿ, ಸೆಂಟರ್ ಕೋಶಾಧಿಕಾರಿ ಅಬ್ದುಲ್ ರಝ್ಝಾಖ್ ಹಾಜಿ ಮಲಾರ್ ಹಾಗು ಸೆಂಟರ್ ಟ್ಪೈನಿಂಗ್ ಕಾರ್ಯದರ್ಶಿ ಉಸ್ಮಾನ್ ಎ.ಎಚ್ ಆಗಮಿಸಿದರು. ಸೆಂಟರ್ ಅಧ್ಯಕ್ಷರಾದ ಹೈದರಾಲಿ ಸಖಾಫಿ ಇನೋಳಿ ಎಸ್ ವೈ ಎಸ್ ಸಂಘಟನೆಯ ಅನಿವಾರ್ಯತೆಯ ಕುರಿತು ಮಾತನಾಡಿದರು. ಬಳಿಕ ಹಾಲಿ ಸಮಿತಿಯನ್ನು ವಿಸರ್ಜಿಸಿ, 2021-2023 ನೇ ಸಾಲಿನ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಎಸ್ ವೈ ಎಸ್ ಫರೀದ್ ನಗರ ಬ್ರಾಂಚ್ ಸಮಿತಿಯ ನೂತನಾಧ್ಯಕ್ಷರಾಗಿ ಆಸಿಫ್ ಬಿ.ಎಚ್, ಪ್ರಧಾನ ಕಾರ್ಯದರ್ಶಿಯಾಗಿ ಫೈಝಲ್, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಕೆ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್, ದಅವಾ ಕಾರ್ಯದರ್ಶಿಯಾಗಿ ಶರೀಫ್ ಎಂ, ಇಸಾಬಃ ಕಾರ್ಯದರ್ಶಿಯಾಗಿ ಮುಹಮ್ಮದ್ ನಿಸಾರ್ ಆಯ್ಕೆಯಾದರು.
ಸೆಂಟರ್ ಕೌನ್ಸಿಲರುಗಳಾಗಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಸಹಿತ ಶಾಹುಲ್ ಹಮೀದ್, ಅಬೂಬಕರ್ ಎಚ್, ಉಸ್ಮಾನ್ ಬಿ, ಅಬ್ದುಲ್ ಮಜೀದ್ ಎಚ್, ಅಬ್ದುಲ್ ಹಮೀದ್ ಆಯ್ಕೆಯಾದರು.
ಬಳಿಕ ನೂತನಾಧ್ಯಕ್ಷರಾದ ಆಸಿಫ್ ಬಿ ಎಚ್ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಬ್ರಾಂಚಿನ ಸದಸ್ಯರುಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಫೈಝಲ್ ಧನ್ಯವಾದಗೈದರು.










Comments
Post a Comment