ಕೇಳೋರು ಯಾರು ರಿಕ್ಷಾ ಚಾಲಕರ ಗೋಳು...
ಹೌದು..ಕಠಿಣ ಹಾಗೂ
ಜನಸ್ನೇಹಿ ದುಡಿಮೆಯ ಮೂಲಕ ಗುರುತಿಸಲ್ಪಡುವ ರಿಕ್ಷಾ ಚಾಲಕರ ಇಂದಿನ ಸ್ಥಿತಿಯ ಬಗ್ಗೆ ನಾವೆಲ್ಲ ಗಮನ ಹರಿಸಲೇಬೇಕಾಗಿದೆ.ಸದ್ಯದ ಲಾಕ್-ಡೌನ್ ಸ್ಥಿತಿಯಿಂದಾಗಿ ಇವರ ಬದುಕು ದುಸ್ತರವಾಗಿದೆ ಎನ್ನುವುದಂತೂ ತೀರಾ ವಾಸ್ತವ.
ವಿಶಾಲ ಮನಸ್ಸಿನ ರಿಕ್ಷಾ ಚಾಲಕರು ದಿನನಿತ್ಯದ ಜೀವನಕ್ಕಾಗಿ ಕಷ್ಟಪಟ್ಟು ದುಡಿಮೆ ಸಾಗಿಸುತ್ತಿದ್ದಾರೆ.ಲಾಕ್-ಡೌನ್ ನಿಂದಾಗಿ ಅವರ ಇಂದಿನ ಸ್ಥಿತಿ ತೀರಾ ಶೋಚನೀಯ.ವಿಶ್ವದ ನಾನಾ ಕಡೆಗಳಲ್ಲಿ ಹರಡಿಕೊಂಡಿರುವ ಮಹಾ ಮಾರಿ ಕೊರೊನ ವೈರಸ್ ನಿಂದ ದೇಶದ ಜನರೆಲ್ಲ ಜೀವನ ಸಾಗಿಸುವಲ್ಲಿ ಕಂಗಾಲಾಗಿದ್ದಾರೆ. ಮಾತ್ರವಲ್ಲ ತಮ್ಮ ದಿನನಿತ್ಯದ ಆಹಾರಕ್ಕೆ ಪರದಾಡುವಂತಹ ಸ್ಥಿತಿಯೂ ಅವರದ್ದಾಗಿದೆ.ನಮ್ಮ ಜಿಲ್ಲೆಯಲ್ಲಿ ಹೆಚ್ಚಿನವರು ತಮ್ಮ ಜೀವನೋಪಾಯಕ್ಕಾಗಿ
ರಿಕ್ಷಾದ ದುಡಿಮೆಯನ್ನೇ ಅವಲಂಬಿಸಿದ್ದು ಸದ್ಯ ಲಾಕ್-ಡೌನ್ ನಿಂದಾಗಿ ಇವರ ಸ್ಥಿತಿಯು ತೀರಾ ಕಳವಳಕಾರಿಯಾಗಿದೆ.
ಯಾವುದೇ ತುರ್ತು ಸಂದರ್ಭಗಳಲ್ಲಿ ತಮ್ಮ ದುಡಿಮೆಯ ಮೂಲಕ ಇತರರಿಗೆ ನಾನಾ ರೀತಿಯಲ್ಲಿ ಸಹಾಯ ಸಹಕಾರಗಳನ್ನು ಮಾಡುವ ಈ ನಮ್ಮರಿಕ್ಷಾ ಚಾಲಕರು ಕರ್ತವ್ಯ ನಿಷ್ಠರು ಮಾತ್ರವಲ್ಲದೆ ಸಾರ್ವಜನಿಕರಿಗೆ ಅಪಘಾತ ಅಥವಾ ಇನ್ನು ಯಾವುದೇ ಬಗೆಯ ತೊಂದರೆಗಳಾದಲ್ಲಿ ಜನಸೇವಕರಾಗಿಯೂ ಕೆಲಸ ನಿರ್ವಹಿಸುತ್ತಾರೆ.ನಾಡಿನಾದ್ಯಂತ ಪಸರಿಸಿರುವ ಮಹಾಮಾರಿ ಕೊರೊನ ವೈರಸ್ ನಿಂದ ಇಡೀ ದೇಶ ಲಾಕ್-ಡೌನ್ ಆಗಿರುವುದರಿಂದ ಬಡ ರಿಕ್ಷಾ ಚಾಲಕರು ದುಡಿಮೆಗೆಂದು ತಮ್ಮ ರಿಕ್ಷಾಗಳನ್ನು ರಸ್ತೆಗಿಳಿಸುವಂತೆಯೂ ಇಲ್ಲ.
ಇಂತಹ ಪರಿಸ್ಥಿತಿಯಲ್ಲಿ ಇವರು ಜೀವನ ಸಾಗಿಸುವುದಾದರೂ ಹೇಗೆ? ಇವರಿಗೆ ಉಪಯುಕ್ತವಾದ ಉತ್ತಮ ಸವಲತ್ತುಗಳನ್ನು (ಪ್ಯಾಕೇಜ್) ನೀಡಲು ಮಾನ್ಯಸರ್ಕಾರ ಕೂಡಲೇ ಮುಂದಾಗಬೇಕು.ಆದ್ದರಿಂದ,ದಯವಿಟ್ಟು ಸರ್ಕಾರ ಕೂಡಲೇ ರಿಕ್ಷಾ ಚಾಲಕರಿಗೆ ಸೂಕ್ತವಾದ ಪರಿಹಾರ ಒದಗಿಸಿಕೊಡಬೇಕೆಂದು ವಿನಮ್ರವಾಗಿ ವಿನಂತಿಸಿಕೊಳ್ಳುವೆನು.
#ಫೈರೋಝ್ _ಮಂಗಳೂರು