Skip to main content

ಮಸೀದಿ ರಕ್ಷಣೆಗೆ ಪ್ರಾಣವನ್ನು ಅರ್ಪಿಸಿದ ಕಾಮ್ರೆಡ್ ಕುಂಜಿರಾಮನ್

ಮಸೀದಿ ರಕ್ಷಣೆಗೆ ಪ್ರಾಣವನ್ನು ಅರ್ಪಿಸಿದ ಕಾಮ್ರೆಡ್ ಕುಂಜಿರಾಮನ್

ಭಾರತದಲ್ಲಿನ ಕೋಮುವಾದಿ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿಗೆ ದೀರ್ಘ ಇತಿಹಾಸವಿದೆ. ಸಂಘಪರಿವಾರದ ಕೋಮು ರಾಜಕಾರಣದ ವಿರುದ್ಧ ಸೈದ್ದಾಂತಿಕವಾಗಿ ಬಹಳಷ್ಟು ಸ್ಪಷ್ಟತೆಯೊಂದಿಗೆ ಹೋರಾಟ ನಡೆಸಿದ ಏಕೈಕ ಚಿಂತನೆ ಬಹುಷಃ ಕಮ್ಯುನಿಸ್ಟ್ ಚಿಂತನೆ. ಇದೇ ಕಾರಣಕ್ಕಾಗಿ ಸಂಘಪರಿವಾರಕ್ಕೆ ಕಮ್ಯುನಿಸ್ಟರನ್ನು ಕಂಡರೆ ಅಗಾಧವಾದ ಸಿಟ್ಟು. ಕೇರಳದಲ್ಲಿ ಇರಬಹುದು ಅಥವಾ ದೇಶದ ಇತರ ಯಾವುದೇ ಮೂಲೆಗಳಲ್ಲಿ ಸಂಘಪರಿವಾರದ ಮತೀಯ ರಾಜಕಾರಣದ ವಿರುದ್ಧ ಶಸಕ್ತವಾಗಿ ಎಡಪಂಥೀಯರು ಹಾಗೂ ಕಮ್ಯುನಿಸ್ಟರು ಹೋರಾಟ ನಡೆಸಿದ್ದಾರೆ. ದೇಶದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರನ್ನ ಸಂಘ ಪರಿವಾರ ತಮ್ಮ ದ್ವೇಷ ರಾಜಕಾರಣದ ಭಾಗವಾಗಿ ದಮನಿಸಲು ಆರಂಭಿಸಿದಾಗ ಅದರ ವಿರುದ್ಧ ಧ್ವನಿ ಎತ್ತಿದವರು ಕಮ್ಯೂನಿಸ್ಟರು ಎಂಬುವುದು ನಾವು ಅರಿತುಕೊಳ್ಳಬೇಕಾದ ಸಂಗತಿ. ಇಂದು ಮುಸ್ಲಿಂ ಮೂಲಭೂತವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಮ್ಯುನಿಸ್ಟರನ್ನು ಮುಸ್ಲಿಂ ವಿರೋಧಿಗಳೆಂದು ಕೇರಳದಲ್ಲಿ ಮುಸ್ಲಿಮರನ್ನು ಮುಸ್ಲಿಮ್ ಎಂಬ ಕಾರಣಕ್ಕಾಗಿ ಹತ್ಯೆ ಮಾಡಿದರೆಂದು ಹಸಿ ಸುಳ್ಳುಗಳನ್ನು ಹೇಳುವ ಮುಸ್ಸಂಘಿಗಳ ಹಿಂದಿನ ಉದ್ದೇಶ ಅರ್ಥವಾಗದ ವಿಚಾರ ಏನಲ್ಲ. ನಾನೊಬ್ಬ ಸಾಮಾನ್ಯ ಮುಸ್ಲಿಮನಾಗಿ ಹಾಗೂ ಎಡಪಂಥೀಯ ಹಾಗೂ ಕಮ್ಯುನಿಸ್ಟರನ್ನು ಗಮನಿಸುತ್ತಿರುವ ಓರ್ವ ವ್ಯಕ್ತಿಯಾಗಿ ಒಂದು ಸಂಗತಿಯನ್ನು ನಿಮ್ಮ ಮುಂದೆ ಇಡಬಯಸುತ್ತೇನೆ. ಅದು 1971 ನೇ ಇಸವಿ. ಕೇರಳದ ತಲಷೇರಿ ಎ೦ಬಲ್ಲಿ ಭೀಕರ‌  ಕೋಮು ಗಲಭೆ ನಡೆದಿತ್ತು. ಸ೦ಘಪರಿವಾರ ಹಾಗೂ ಮುಸ್ಲಿಮರ ನಡುವೆ ನಡೆದ ಈ ಕೋಮು ಹಿಂಸೆಗೆ ಅಮಾಯಕರು ಬಲಿಯಾಗುತ್ತಿದ್ದರು. ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಕೋಮು ದಳ್ಳುರಿಯನ್ನು ಶಮನ ಮಾಡಿ ಜಿಲ್ಲೆಯ ಎರಡು ಸಮುದಾಯಗಳ ನಡುವೆ ಶಾಂತಿ ಸ್ಥಾಪನೆ ಮಾಡುವ ನಿಟ್ಟಿನಲ್ಲಿ  ಪಿಣರಾಯಿ ವಿಜಯನ್ ( ಇಂದು ಇವರು ಕೇರಳದ ಸಿಎಂ ) ಹಾಗೂ ಸಂಗಾತಿಗಳು ಶ್ರಮಿಸುತ್ತಿದ್ದರು. ಇದೇ ವೇಳೆ RSS ಕಾರ್ಯಕರ್ತರು ತಲಷೇರಿಯ ಮಸೀದಿಯೊಂದಕ್ಕೆ  ದಾಳಿ ಮಾಡಲು ಬ೦ದಿದ್ದರು. ಆ ಸ೦ಧರ್ಭದಲ್ಲಿ ಪಕ್ಷದ ಸೂಚನೆಯ೦ತೆ ಮಸೀದಿಯ ರಕ್ಷಣೆ ಹೊಣೆ ಹೊತ್ತು ಸ೦ಘಪರಿವಾರದ ಗೂಂಡಗಳನ್ನು ಎದುರಿಸಿ ನಿಂತಿದ್ದು  ಪಿಣರಾಯಿ ವಿಜಯನ್ ಹಾಗೂ ಸ೦ಗಾತಿಗಳು. ಈ ವೇಳೆ ಆರ್.ಎಸ್.ಎಸ್ ಮತಾಂಧರ ದಾಳಿಯಿಂದ ಮಸೀದಿಯನ್ನ  ರಕ್ಷಿಸೋ ಸಂದರ್ಭದಲ್ಲಿ ಕಾಮ್ರೇಡ್ ಯು.ಕೆ. ಕು೦ಜಿರಾಮನ್ ವೀರ ಮರಣವನ್ನಪ್ಪಿದ್ದರು. ವಾಮಪಂಥೀಯರಾಗಿಯೂ ಒಂದು ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಕೇಂದ್ರವೊಂದರ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಕಾಮ್ರೆಡ್ ಕುಂಜುರಾಮನ್ ಬಲಿದಾನವನ್ನು ನಾವೆಲ್ಲಾ ಸ್ಮರಿಸಬೇಕಿದೆ. ಇಂತಹಾ ನೂರಾರು ಉದಾಹರಣೆಗಳು ಕಮ್ಯುನಿಸ್ಟರ ಚರಿತ್ರೆ ಅಧ್ಯಯನ ಮಾಡಿದ್ರೆ ಕಾಣಸಿಗುತ್ತದೆ. ಕಮ್ಯುನಿಸ್ಟರು ಎಡಪಂಥೀಯರ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು ಅದೇನೂ ತಪ್ಪಲ್ಲ. ಆದ್ರೆ ನಾಲಗೆಯ ತೆವಲು ತೀರಿಸಲು ಹಸಿ ಸುಳ್ಳುಗಳನ್ನ ಹರಿಯಬಿಡುವ ಮುಸ್ಲಿಂ ಮತಾಂಧರ ಶಕ್ತಿಗಳ ಒಳಹುನ್ನಾರವನ್ನು ನಮ್ಮಂತಹಾ ಸಾಮಾನ್ಯ ಮುಸ್ಲಿಮರು ಅರ್ಥೈಸಿಕೊಳ್ಳಬೇಕಾಗಿದೆ.

ಅಬೂಬಕ್ಕರ್ ಮಂಗಳೂರು

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.