ಎಸ್ ಎಸ್ ಎಫ್ ಕೆ ಸಿ ನಗರ ಶಾಖೆ ತಲಪಾಡಿ ಸೆಕ್ಟರ್ ಇದರ ವತಿಯಿಂದ ''ಮರ್ ಹಬಾ ಯಾ ರಮಳಾನ್'' ರಮಳಾನ್ ಪೂರ್ವ ಸಿದ್ದತಾ ಕಾರ್ಯಕ್ರಮ ಹಾಗೂ ರಮಾಳಾನ್ ಕಿಟ್ ವಿತರಣೆ
ಎಸ್ ಎಸ್ ಎಫ್ ಕೆ ಸಿ ನಗರ ಶಾಖೆ ತಲಪಾಡಿ ಸೆಕ್ಟರ್ ಇದರ ವತಿಯಿಂದ ''ಮರ್ ಹಬಾ ಯಾ ರಮಳಾನ್''
ರಮಳಾನ್ ಪೂರ್ವ ಸಿದ್ದತಾ ಕಾರ್ಯಕ್ರಮ ಹಾಗೂ ರಮಾಳಾನ್ ಕಿಟ್ ವಿತರಣೆ ಕಾರ್ಯಕ್ರಮವು 21-5-2017 ರಂದು ರಾತ್ರಿ 7:00ಕ್ಕೆ ಸರಿಯಾಗಿ ಎಸ್ ಎಸ್ ಎಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ಬಾರಿ ಸಅದಿಯವರ ದುಆ ದೊಂದಿಗೆ ಎಸ್ ಎಸ್ ಎಫ್ ಕೆ ಸಿ ನಗರ ಕಛೇರಿಯಲ್ಲಿ ನಡೆಯಿತು. ಎಸ್ ಎಸ್ ಎಫ್ ಉಳ್ಳಾಲ ಡಿವಿಶನ್ ಉಪಾಧ್ಯಕ್ಷರಾದ ಮುಹಮ್ಮದ್ ಮುಸ್ತಫ ಝುಹ್ರಿ ಅಧ್ಯಕ್ಷತೆ ವಹಿಸಿದ್ದರು. ಶಾಖೆಯ
ಪ್ರ ಕಾರ್ಯದರ್ಶಿಯಾದ ಮುಹಮ್ಮದ್ ಮುಸ್ತಫ ಸ್ವಾಗತಿಸಿದರು . ಅಲ್ ಹುದಾ ಜುಮಾ ಮಸೀದಿ ಕೆ ಸಿ ನಗರ ಖತೀಬರಾದ ಮುಹಮ್ಮದ್ ಹನೀಫ್ ಸಖಾಫಿಯವರು ಕಾರ್ಯಕ್ರವನ್ನು ಉದ್ಘಾಟಿಸಿದರು.
ಎಸ್ ಎಫ್ ಉಳ್ಳಾಲ ಡಿವಿಶನ್ ಉಪಾಧ್ಯಕ್ಷರಾದ ಮುಹಮ್ಮದ್ ಮುಸ್ತಫ ಝಹುರಿ ಅಧ್ಯಕ್ಷತಾ ಭಾಷಣ ಮಾಡಿದರು. ನಂತರ ಎಸ್ ಎಸ್ ಎಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ಬಾರಿ ಸಅದಿಯವರು ರಮಾಳಾನ್ ಸಿದ್ದತಾ ವಿಷಯಲ್ಲಿ ತರಗತಿ ನಡೆಸಿದರು. ಬಳಿಕ ಅಭಿನಂದನಾ ಕಾರ್ಯಕ್ರಮ ನಡೆಯಿತು ದ್ವಿತೀಯ ಪಿ ಯು ಸಿ Science ವಿಭಾಗದ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಶಾಖೆಯ ಜೊತೆ ಕಾರ್ಯದರ್ಶಿಯಾದ ಅಬ್ದುರ್ರಶೀದ್ ಮುಹ್ಸಿನ್ [526] ಹಾಗೂ ಶಾಖೆಯ ಕಾರ್ಯಕರ್ತನಾದ ಮುಹಮ್ಮದ್ ರಫೀಕ್ [528] ಅವರಿಗೆ ಕ್ಯಾಶ್ ನೀಡಿ ಅಭಿನಂದಿಸಲಾಯಿತು. ನಂತರ ಶಾಖೆಯ ವತಿಯಿಂದ ಬಡ ಹಾಗೂ ನಿರ್ಗತಿಕ 12 ಕುಟುಂಬಗಳಿಗೆ ರಮಳಾನ್ ಕಿಟ್ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಎಫ್ ಉಳ್ಳಾಲ ಡಿವಿಶನ್ ಉಪಾಧ್ಯಕ್ಷರಾದ ಮುಹಮ್ಮದ್ ಮುಸ್ತಫ ಝಹುರಿ, ಎಸ್ ಎಸ್ ಎಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ಬಾರಿ ಸಅದಿ, ಎಸ್ ಎಸ್ ಎಫ್ ತಲಪಾಡಿ ಸೆಕ್ಟರ್ ಇದರ Inspire blood donor's Cell chairman ಹಕೀಂ ಪೂಮಣ್, ಶಾಖೆಯ ಉಸ್ತುವಾರಿಯಾದ ಶರೀಫ್ ಪೂಮಣ್, ಅಲ್ ಹುದಾ ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ, ಮಾಜಿ ಅಧ್ಯಕ್ಷರಾದ ಮುಸಾ ಕುಂಞಿ. ಅಲ್ ಹುದಾ ಜುಮಾ ಮಸೀದಿ ಪ್ರ. ಕಾರ್ಯದರ್ಶಿಯಾದ ಇಕ್ಬಾಲ್, ಎಸ್ ವೈ ಎಸ್ ಕೆ ಸಿ ನಗರ ಬ್ರಾಂಚ್ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ, ಪ್ರ ಕಾರ್ಯದರ್ಶಿಯಾದ ಅಬ್ಬಾಸ್, ಶಾಖೆಯ ಅಧ್ಯಕ್ಷರಾದ ನಝೀರ್ ಯು. ಪಿ, ಉಪಾಧ್ಯಕ್ಷರಾದ ಅಬ್ದುಲ್ ನಾಸಿರ್ ಕೆ. ಸಿ, ಶಾಖೆಯ ಜೊತೆ ಕಾರ್ಯದರ್ಶಿಯಾದ ಮುಹ್ಸಿನ್ ಹಾಗೂ ಶಂಶುದ್ದೀನ್, ಕೋಶಾದಿಕಾರಿಯಾದ ರಿಝ್ವನ್ ಹಾಜರಿದ್ದರು. ಕೊನೆಗೆ ಮುಸ್ತಫ ಅವರ ಧನ್ಯವಾದಗಳೂಂದಿಗೆ ಕಾರ್ಯಕ್ರಮವು ಕೊನೆಗೊಂಡಿತು..
ವರದಿ - ಮುಹಮ್ಮದ್ ಮುಸ್ತಫ
ಕೆ ಸಿ ನಗರ
Comments
Post a Comment