ಎಸ್. ವೈ. ಎಸ್ ಉಪ್ಪಿನಂಗಡಿ ಝೋನ್ ವತಿಯಿಂದ ಜಮಾಅತ್ ಪ್ರತಿನಿಧಿ ಸಂಗಮ.ಮದುವೆಯ ದುಂದುವೆಚ್ಚದಿಂದ ದೂರವಿರಿ - ಯಾಕೂಬ್ ಸಅದಿ ನಾವೂರು.
ರಾಜ್ಯದ ಅತೀ ದೊಡ್ಡ ಸುನ್ನೀ ಯುವಜನ ಸಂಘಟನೆಯಾದ ಎಸ್ ವೈ ಎಸ್ ಇದರ ಉಪ್ಪಿನಂಗಡಿ ಝೋನ್ ಸಮಿತಿ ವತಿಯಿಂದ ಖುತುಬಾ ಹಾಗೂ ಜಮಾಅತ್ ಪ್ರತಿನಿಧಿ ಸಂಗಮವು ಎಸ್ ವೈ ಎಸ್ ಝೋನ್ ಸಮಿತಿ ಅಧ್ಯಕ್ಷರಾದ ಅಬ್ದುರ್ರಝಾಖ್ ಲತೀಫಿ ಕುಂತೂರು ಇವರ ಅಧ್ಯಕ್ಷತೆಯಲ್ಲಿ ಉಪ್ಪಿನಂಗಡಿ ನೆಕ್ಕಿಲಾಡಿಯ ಎಸ್ ಜೆ ಎಂ ಜಿಲ್ಲಾ ಮುಅಲ್ಲಿಂ ಸೆಂಟರ್ ಸಭಾಂಗಣದಲ್ಲಿ ಜರುಗಿತು.
ಹಾಫಿಳ್ ಯಾಕೂಬ್ ಸಅದಿ ಅಲ್ ಅಫ್ಳಲಿ ನಾವೂರು ರವರು ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದಲ್ಲಿಂದು ಮದುವೆಯ ಹೆಸರಲ್ಲಿ ಅನಗತ್ಯವಾಗಿ ನಡೆಯುತ್ತಿರುವ ದುಂದು ವೆಚ್ಚ ಹಾಗೂ ಅನಾಚಾರದಿಂದ ದೂರವಿರುವಂತೆ ನಮ್ಮ ಯುವಕ ಯುವತಿಯರಿಗೆ ಜಮಾಅತ್ ನಾಯಕರು ಸ್ಪಷ್ಟ ಸಂದೇಶ ನೀಡಿ, ಸರಳ ಮಾದರಿ ಮದುವೆಗೆ ಪ್ರೇರಣೆ ನೀಡಬೇಕೆಂದು ಕರೆ ನೀಡಿದರು.
ಕೆ.ಎಂ.ಜೆ ಜಿಲ್ಲಾಧ್ಯಕ್ಷರಾದ ಜಿ ಮುಹಮ್ಮದ್ ಕಾಮಿಲ್ ಸಖಾಫಿ ಯವರು ಕಾರ್ಯಕ್ರಮ ಉದ್ಘಾಟಿಸಿದರು. ಜಂ-ಇಯ್ಯತುಲ್ ಉಲಮಾ ಕೇಂದ್ರ ಸಮಿತಿ ನಾಯಕರಾದ ಆದಂ ಅಹ್ಸನಿ ಉಸ್ತಾದರು ದುಆ ನೆರವೇರಿಸಿದರು.
ಪ್ರಸ್ತುತ ಸಭೆಯಲ್ಲಿ ಉಮರುಲ್ ಫಾರೂಕ್ ಸಖಾಫಿ ನೆಕ್ಕಿಲು, ಅತಾವುಲ್ಲ ಹಿಮಮಿ ಸಖಾಫಿ, ಹಮೀದ್ ಸಅದಿ ಕಳಂಜಿಬೈಲು, ಕಾಸಿಂ ಪದ್ಮುಂಜ, ಅಬ್ಬಾಸ್ ಬಟ್ಲಡ್ಕ, ಉಸ್ಮಾನ್ ಸೋಕಿಲ, ಅಬ್ದುಲ್ ಮಜೀದ್ ಸಖಾಫಿ, ಡಿ ಹೆಚ್ ಇಬ್ರಾಹಿಂ ಸಅದಿ, ಮುಹಮ್ಮದ್ ಅಲೀ ತುರ್ಕಳಿಕೆ, ಇಸ್ಹಾಕ್ ಹಾಜಿ ಮೇದರಬೆಟ್ಟು, ಅಬ್ದುಲ್ ಶುಕೂರ್ ಮೇದರಬೆಟ್ಟು, ಮುಹಮ್ಮದ್ ಫಾಳಿಲಿ, ಜಿ ಎಂ ಕುಂಞಿ ಜೋಗಿಬೆಟ್ಟು, ರಫೀಕ್ ಬಾಜಾರ, ನಿಸಾರ್ ಸೋಕಿಲ, ಕಲಂದರ್ ಪದ್ಮುಂಜ ಸೇರಿದಂತೆ ಝೋನ್ ವ್ಯಾಪ್ತಿಯ 40 ಕ್ಕೂ ಅಧಿಕ ಜಮಾಅತಿನ ಖತೀಬರು, ಆಡಳಿತ ಸಮಿತಿ ನಾಯಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಎಸ್ ವೈ ಎಸ್ ಉಪ್ಪಿನಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ಎನ್.ಎಂ. ಶರೀಫ್ ಸಖಾಫಿ ನೆಕ್ಕಿಲು ಸ್ವಾಗತಿಸಿ, ಎಸ್ ವೈ ಎಸ್ ಝೋನ್ ಕೋಶಾಧಿಕಾರಿ ಡಾ ಫಾರೂಕ್ ನೆಕ್ಕಿಲಾಡಿ ಧನ್ಯವಾದ ಸಲ್ಲಿಸಿದರು.
Comments
Post a Comment