ತಾಜುಲ್ ಉಲಮಾ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪ್ರಚಾರ ಸಭೆ. ಪೋಸ್ಟರ್ ಸ್ಟಿಕ್ಕರುಗಳ ಪ್ರದರ್ಶನ.
ಮಂಗಳೂರು : ಕೇರಳದ ಪಯ್ಯನ್ನೂರ್ ಎಟ್ಟಿಕ್ಕುಳಂನಲ್ಲಿ ಅಂತ್ಯವಿಶ್ರಮಿಸುತ್ತಿರುವ ವಿದ್ವಾಂಸರ ಕಿರೀಟ ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ 9 ನೇ ಉರೂಸ್ ಸಮಾರಂಭವು ಅಕ್ಟೋಬರ್ 27, 28, 29 ರಂದು ಎಟ್ಟಿಕುಳಂ ನಲ್ಲಿ ನಡೆಯಲಿದ್ದು, ಉಳ್ಳಾಲ ಕೇಂದ್ರವಾಗಿಸಿ ಕೇರಳ, ಕರ್ನಾಟಕದಾದ್ಯಂತ ತನ್ನ ಪುರುಷಾಯುಷ್ಯವಿಡೀ ದೀನೀ ವಿಜ್ಞಾನ ಹರಡಿದ ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ ಉರೂಸ್ ಸಮಾರಂಭದ ಪ್ರಚಾರ ಕಾರ್ಯವು ಬಿರುಸಿನಿಂದ ನಡೆಯುತ್ತಿದ್ದು, ಇದರ ಭಾಗವಾಗಿ ಮುಡಿಪು ಸುನ್ನೀ ಸಂಯುಕ್ತ ಜಮಾಅತ್ ವತಿಯಿಂದ ಉರೂಸ್ ಪ್ರಚಾರ ಸಭೆ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ, ಉಳ್ಳಾಲ ತಂಙಲ್ ಸುಪುತ್ರ ಗೌರವಾನ್ವಿತ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಲ್ ರವರ ನೇತ್ರತ್ವದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಮರ್ ಸಖಾಫಿ ತಲಕ್ಕಿ ಉದ್ಘಾಟಿಸಿದರು. ಜಬ್ಬಾರ್ ಸಖಾಫಿ ಪಾತೂರು ಹಾಗೂ ಉವೈಸ್ ಹಿಶಾಮಿ ಮುಡಿಫು ಮುದರ್ರಿಸ್ ಆಶಂಶಾ ಭಾಷಣ ಮಾಡಿದರು. ಎಂ.ಬಿ ಸಖಾಫಿ ಬಾಳೆಪುಣಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಉರೂಸ್ ಸಮಾರಂಭದ ಪೋಸ್ಟರ್ ಹಾಗು ಸ್ಟಿಕ್ಕರುಗಳನ್ನು ಪ್ರದರ್ಶಿಸಿ ಬಿಡುಗಡೆಗೊಳಿಸಲಾಯಿತು.
Comments
Post a Comment