ಕರ್ನಾಟಕದಲ್ಲಿ ಧಾರ್ಮಿಕ ವಿಷಯಗಳಲ್ಲಿ ಅಧಿಕೃತ ಫತ್ವಾ ನೀಡಲು ಅರ್ಹರಾಗಿರುವ ಕರ್ನಾಟಕ ಉಲಮಾ ಒಕ್ಕೂಟದ ನಾಯಕ ಬೇಕಲ ಉಸ್ತಾದ್, ಮಾಣಿ ಉಸ್ತಾದ್, ಮಂಜನಾಡಿ ಅಬ್ಬಾಸ್ ಉಸ್ತಾದರಂತಹ ಪ್ರಮುಖ ವಿದ್ವಾಂಸರ ನಂತರ ಕೇಳಿ ಬರುವ ಹೆಸರಾಗಿದೆ ತೋಕೆ ಉಸ್ತಾದ್!
ಯುವಕ ಆದರೆ ಅಗಾಧ ಪಾಂಡಿತ್ಯ. ಮೃದು ಸ್ವಭಾವಿ, ಆದರೆ ಅಸುನ್ನಿ ಕಂಡರೆ ಕೆಂಡವಾಗುತ್ತಾರೆ.
ಸಾಕ್ಷಾತ್ ಇಕೆ ಹಸನ್ ಉಸ್ತಾದರ ಸ್ವಭಾವದಂತೆ.
ಇಡೀ ಕರ್ನಾಟಕದಲ್ಲಿ ಕಳ್ಳ ತ್ವರೀಖತ್ ಸಹಿತ ಸುನ್ನಿಯೇತರರಿಗೆ ತೋಕೆ ಉಸ್ತಾದರ ಹೆಸರು ಕೇಳುವಾಗಲೇ ಚಳಿ ಹಿಡಿಯುತ್ತದೆ. ಅವರು ಎಂದಿಗೂ ಸುನ್ನೀ ವಿರುದ್ಧ ನಿಲುವುಗಳಲ್ಲಿ ರಾಜಿ ಮಾಡುವುದೇ ಇಲ್ಲ.
ಇಡೀ ಕರ್ನಾಟಕ ಉಲಮಾ ಒಕ್ಕೂಟದ ಕಾರ್ಯದರ್ಶಿಯಾಗಿ 40ರ ಆಸುಪಾಸಿನ ಯುವಕ ಆಯ್ಕೆಯಾಗುವುದೆಂದರೆ ಆ ಯುವ ವಿದ್ವಾಂಸರ ಇಲ್ಮ್ ಎಷ್ಟಿರಬಹುದು?
ಅವರ ಸಾರಥ್ಯದ ಸುನ್ನೀವಾಣಿ ಮಾಸಿಕದಲ್ಲಿ ಫಿಕ್ಹ್ ಕೋರ್ಟ್ ಎಂಬ ಕಾಲಂನಲ್ಲಿ ಸಮಕಾಲೀನ ಸಮಸ್ಯೆಗಳ ಪರಿಹಾರವಾಗಿ ಅವರು ಬರೆಯುತ್ತಿರುವ ಫಿಕ್ಹ್ (ಕರ್ಮಶಾಸ್ತ್ರ) ನಿಯಮಗಳು ಅವರ ಮಹಾ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಅದೆಂತಹ ಕ್ಲಿಷ್ಟಕರ ವಿಷಯಗಳಿಗೂ ಸಹ ಸಲೀಸಾಗಿ ಗ್ರಂಥಗಳ ಆಧಾರದಿಂದ ಪರಿಹಾರ ಕೊಡುವ ಅವರ ಶೈಲಿ ಅದ್ಭುತವೇ ಸರಿ.
ಉಸ್ತಾದರ ನೇತೃತ್ವದಲ್ಲಿ ನಡೆಯುತ್ತಿರುವ *ಮುಲ್ತಖಲ್ ಅಸಾತಿದ್ಸಃ* ಎಂಬ ವಾಟ್ಸಪ್ ಗ್ರೂಪಲ್ಲಿ ಹಿರಿಯ ಮುದರ್ರಿಸರು, ಉಸ್ತಾದರುಗಳು ಇದ್ದಾರೆ. ಅಲ್ಲಿ ನಡೆಯುವ ಫಿಕ್ಹ್ ಚರ್ಚೆಗಳ ಕೊನೆಯ ಮಾತು ತೋಕೆ ಉಸ್ತಾದರದ್ದಾಗಿದೆ.
ಆ ಗ್ರೂಪಲ್ಲಿ ಯಾವುದೇ ಪ್ರಶ್ನೆಗಳು ಬಂದರೂ ಬ್ಯುಝಿಯ ನಡುವೆ ಬಿಡುವು ಮಾಡಿ ಬಂದು ಉತ್ತರ ಹೇಳಿ ಸಮಸ್ಯೆ ಬಗೆಹರಿಸುತ್ತಾರೆ.
ಇನ್ನು ಅಖೀದ ವಿಷಯ ಬಂದರೆ ಅಲ್ಲೂ ಉಸ್ತಾದರದ್ದೇ ಮೇಲುಗೈ. ಸುನ್ನೀ ವಿರುದ್ಧರು ತಮ್ಮ ಮೊಂಡುವಾದಗಳನ್ನು ಬಡಬಡಿಸುತ್ತಾ ಜನಸಾಮಾನ್ಯರನ್ನು ಗೊಂದಲಗಳಲ್ಲಿ ಸಿಲುಕಿಸಲು ಪ್ರಯತ್ನಪಡುವಾಗ ಅಲ್ಲೆಲ್ಲಾ ಸುನ್ನತ್ ಜಮಾಅತ್ ಹೇಳಲು ತೋಕೆ ಉಸ್ತಾದ್ ರೆಡಿ!
ನೂತನ ಆಶಯಗಳತ್ತ ವಾಲುತ್ತಿದ್ದ ಅದೆಷ್ಟೋ ಯುವಕರು ಉಸ್ತಾದರ ಸುನ್ನತ್ ಜಮಾಅತ್ ಕ್ಲಾಸ್ ಆಲಿಸಿ ಸುನ್ನಿಸಂನಲ್ಲಿ ಭದ್ರವಾಗಿದ್ದಾರೆ.
ಕುಟುಂಬ ಕಲಹಗಳಿಂದ ಛಿದ್ರವಾಗುತ್ತಿರುವ
ಕಾಲಘಟ್ಟದ ಆನಿವಾರ್ಯತೆಗಳಲ್ಲೊಂದಾದ ಕೌಟುಂಬಿಕ ವಿಷಯಗಳ ಕುರಿತು ಧಾರಾಳ ಪ್ರಭಾಷಣಗಳು ಬೇಕು. ಆದರೆ ಅದು ಮಾತ್ರ ದೀನ್ ಎಂಬಂತೆ ಅದನ್ನೇ ತಮ್ಮ ಮ್ಯಾಟರಾಗಿ ಉಪಯೋಗಿಸುವ ಇಂದಿನ ಯುವ ಪ್ರಭಾಷಣಗಾರರಿಗಿಂತ ತೋಕೆ ಉಸ್ತಾದ್ ಭಿನ್ನ. ತನ್ನ ಅಧಿಕ ಪ್ರಭಾಷಣಗಳಲ್ಲಿಯೂ ಸುನ್ನತ್ ಜಮಾಅತ್'ಗೆ ಪ್ರಾಮುಖ್ಯತೆ ನೀಡಿ ಜನರ ವಿಶ್ವಾಸ (ಅಖೀದ) ಭದ್ರಪಡಿಸುವಲ್ಲಿ ವಿಶೇಷ ಮುತುವರ್ಜಿ ವಹಿಸುವುದನ್ನು ಕಾಣಬಹುದು. ಉಸ್ತಾದರಿಗೆ ಸಾಥ್ ನೀಡುವ ನಿಟ್ಟಿನಲ್ಲಿ ಇತರ ಯುವ ಪ್ರಭಾಷಣಗಾರರೂ ತಮ್ಮ ಪ್ರಭಾಷಣಗಳಲ್ಲಿ ಸುನ್ನಿಸಂಗೆ ಕೂಡಾ ಕೆಲವೊಂದು ನಿಮಿಷಗಳನ್ನು ಹಿಕ್ಮತ್ ನೊಂದಿಗೆ ವಿನಿಯೋಗಿಸಿದ್ದಲ್ಲಿ ಸಮೂಹದಲ್ಲಿ, ವಿಶೇಷವಾಗಿ ಯುವಕರಲ್ಲಿ ಅದು ಪರಿಣಾಮ ಉಂಟುಮಾಡಬಹುದೆಂಬ ವಿಷಯದಲ್ಲಿ ಸಂಶಯವಿಲ್ಲ.
ಇನ್ಶಾಅಲ್ಲಾಹ್...
ನಾಡಿದ್ದು ಎಪ್ರಿಲ್ 04 ರಂದು ಗಡಿಯಾರು ಸಮೀಪದ ನಚ್ಚಬೆಟ್ಟು ಎಂಬಲ್ಲಿ ತೋಕೆ ಉಸ್ತಾದರು ಮುನ್ನಡೆಸುವ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಇದರ 4ನೇ ವಾರ್ಷಿಕ ಸಮ್ಮೇಳನ ಬಹಳ ವಿಜ್ರಂಭಣೆಯಿಂದ ನಡೆಯಲಿದೆ.
ಬೆಳಿಗ್ಗೆಯಿಂದ ರಾತ್ರಿ ತನಕ ವಿವಿಧ ಸೆಷನ್ ಗಳಲ್ಲಾಗಿ ಸೆಮಿನಾರುಗಳು ಹಾಗೂ ಮಜ್ಲಿಸುಗಳು ನಡೆಯಲಿದ್ದು, ಸಯ್ಯಿದ್ ಬಾಯಾರ್ ತಂಙಳ್ ರಾತ್ರಿ ಸಮಾರೋಪ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದಾರೆ.
ಹಂಝ ಮಿಸ್ಬಾಹಿ ಓಟಪ್ಪದವು ಉಸ್ತಾದರ ಮುಖ್ಯಪ್ರಭಾಷಣ ನಡೆಯಲಿದೆ.
ಸುನ್ನೀ ಕಾರ್ಯಕರ್ತರಾದ ಎಲ್ಲರೂ ಆ ಮಹಾ ಸಂಗಮದ ವಿಜಯಕ್ಕೆ ಬೇಕಾಗಿ ಸಹಕರಿಸಬೇಕು.
ಅಲ್ಲಾಹು ತೌಫೀಕ್ ನೀಡಲಿ ಆಮೀನ್.
*-ಅಬೂಶಝ*
