ಎಸ್ಕೆಎಸ್ಸೆಸ್ಸೆಫ್ ನಾಯಕ ಲತೀಫ್ ನೆಲ್ಲಿಚ್ಚೋಡ್ ಬರೆಯುತ್ತಾರೆ..
ಮೋದಿ ಹಾಗೂ ಕಾಂತಪುರಂ ವೇದಿಕೆ ಹಂಚುವಾಗ
ಜೋರ್ಡಾನ್ ರಾಜ ಎರಡನೆಯ ಕಿಂಗ್ ಅಬ್ದುಲ್ಲಾರ ಭಾರತ ಸಂದರ್ಶನದ ಭಾಗವಾಗಿ ಆಥಿತ್ಯ ಸಮಾರಂಭದಲ್ಲಿ ಸರಕಾರದ ಆಹ್ವಾನಿತರಾಗಿಯಾಗಿದೆ ಕಾಂತಪುರಂ ಉಸ್ತಾದ್ ದೆಹಲಿಗೆ ತಲುಪಿದ್ದು.
ಭಯಾನಕವಾದ ಸನ್ನಿವೇಶವೊಂದು ಅಲ್ಲಿ ಸಂಭವಿಸಿದೆ ಎಂಬ ರೀತಿಯಲ್ಲಾಗಿತ್ತು ಈ ಒಂದು ಸಮ್ಮಿಲವನ್ನು ಹಲವಾರು ಜನರು ಸಾಮಾಜಿಕ ತಾಣಗಳಲ್ಲಿ ಇಲ್ಲ ಸಲ್ಲದ ಅಪವಾದದೊಂದಿಗೆ ಪ್ರಚಾರಪಡಿಸುತ್ತಿದ್ದರು.
ಅಲ್ಲದಿದ್ದರೂ ಯಾವುದೇ ಒಂದು ವಿಷಯವನ್ನು ಸ್ಪಷ್ಟವಾಗಿ ಕಲಿಯದೆ, ತಿಳಿದುಕೊಳ್ಳದೆ ಬಾಯಿಗೆ ಬಂದಂತೆ ಬರೆಯುವ ಅಥವಾ ಹೇಳುವ ಒಂದು ಪ್ರಹಸನವಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ಹೆಚ್ಚಾಗಿ ಕಂಡುಬರುವಂತದ್ದು..
ಇಲ್ಲಿನ ವಿಷಯಕ್ಕೆ ಬರುವ ಮೊದಲಾಗಿ ಚರಿತ್ರೆಯ ಕಡೆ ಒಮ್ಮೆ ಹಿಂತಿರುಗಿ ಹೋಗಿ ಅವಲೋಕನ ನಡೆಸೋಣ.
ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ ಪವಿತ್ರ ಹಜ್ ಕರ್ಮ ನಿರ್ವಹಿಸುವ ಸಂಧರ್ಭ ಜಂರದಲ್ಲಿ ಕಲ್ಲೆಸೆಯುವ ವೇಳೆಯಲ್ಲಿ ಪ್ರವಾದಿಯ ಬಳಿ ಒಬ್ಬರು ಬಂದು ಕೇಳುತ್ತಾರೆ.
ಓ ಹಬೀಬರೇ, ಅತ್ಯಂತ ಶ್ರೇಷ್ಠವಾದ ಜಿಹಾದ್ ಯಾವುದು? ಅದಕ್ಕೆ ಹಬೀಬರು ಯಾವುದೇ ಉತ್ತರ ನೀಡಲಿಲ್ಲ.
ಆ ವ್ಯಕ್ತಿಯು ಅದೇ ಪ್ರಶ್ನೆಯನ್ನು ನಾಲ್ಕು ಬಾರಿ ಆವರ್ತಿಸಿ ಕೇಳಿದರೂ ಮೌನವಾಗಿತ್ತು ಹಬೀಬರ ಉತ್ತರ.
ಹಜ್ಜ್ ಕರ್ಮವು ಪೂರ್ತಿಗೊಳಿಸಿ ಒಂಟೆಯ ಮೇಲೇರಿ ಮರಳುವ ಸಂಧರ್ಭದಲ್ಲಿ ಹಬೀಬರು ಸ್ವಹಾಬಿವರ್ಯರಲ್ಲಿ ಅನ್ವೇಷಿಸುತ್ತಾರೆ. " ಎಲ್ಲಿ, ನನ್ನಲ್ಲಿ ಪ್ರಶ್ನಿಸಿದ ವ್ಯಕ್ತಿ ಎಲ್ಲಿ?
ಅತ್ಯಂತ ಶ್ರೇಷ್ಠವಾದ ಜಿಹಾದ್ ಯಾವುದು ಎಂಬುವುದು ತಾನೇ ತಮ್ಮ ಸಂಶಯ. *ಕ್ರೂರನಾದ ಆಡಳಿತಗಾರನ ಮುಂದೆ ಧೈರ್ಯದಿಂದ ಸತ್ಯವನ್ನು ತೆರೆದು ಹೇಳುವುದಾಗಿದೆ ಅತ್ಯಂತ ಶ್ರೇಷ್ಟವಾದ ಧರ್ಮ ಸಮರ.* ಎಂದಾಗಿತ್ತು ಹಬೀಬರ ಉತ್ತರ.
ಈ ಒಂದು ಕಾರ್ಯವೇ ಮೋದಿ ಜೊತೆ ವೇದಿಕೆ ಹಂಚಿದಾಗ ಕಾಂತಪುರಂ ಉಸ್ತಾದ್ ನಿರ್ವಹಿಸಿದ್ದು!? ಅಥವಾ ಇಲ್ಲಿನ ಮುಸ್ಲಿಮರನ್ನು ವಂಚಿಸುವ ಕಾರ್ಯವಾಗಿತ್ತೇ ಅಲ್ಲಿ ನಡೆದದ್ದು?
ಚರಿತ್ರೆಪರವಾದ ಕಾರ್ಯವಾಗಿತ್ತು ಅಲ್ಲಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ನಿರ್ವಹಿಸಿದ್ದು ಎಂದು ಅನ್ವೇಷಿಸುವಾಗ ಅರ್ಥವ್ಯತ್ಯಾಸವಿಲ್ಲದೆ ಯಾರಿಗೂ ಕೂಡಾ ಮನವರಿಕೆಯಾಗಬಹುದು.
*ಸಿರಿಯಾ ವಿಷಯದಲ್ಲಿ ವಿಶ್ವಸಂಸ್ಥೆಯ ಮೌನ, ಹಸುವಿನ ಹೆಸರಿನಲ್ಲಿ ಉತ್ತರ ಭಾರತದಲ್ಲಿ ತಾಂಡವವಾಡುತ್ತಿರುವ ಹಲ್ಲೆ-ಕೊಲೆಗಳು, ಒಂದು ಹೊತ್ತಿನ ಊಟಕ್ಕಾಗಿ ಒಂದಷ್ಟು ಧಾನ್ಯಗಳು ಕದ್ದಿದ್ದಕ್ಕಾಗಿ ಕೊಲ್ಲಲ್ಪಟ್ಟ ಅಟ್ಟಪಾಡಿಯ ಮಧು, ಬಾಬರೀ ಮಸೀದಿಯ ಜಾಗ ವಿಂಗಡಿಸುವ ತರ್ಕಗಳು, ನ್ಯಾಯಾಲಯದ ಹೊರಗಿನ ಚರ್ಚೆಗಳು, ಯುವ ತಲೆಮಾರಿಗೆ ಉನ್ನತ ವಿದ್ಯಾಭ್ಯಾಸ ನೀಡುವ ಸಲುವಾಗಿ ಕೇಂದ್ರ ಸರಕಾರವು ನೀಡಬೇಕಾದ ಅನಿವಾರ್ಯ ಸವಲತ್ತುಗಳ ಪದ್ದತಿ, ಇನ್ನಿತರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ವಿಷಯಗಳ ಕುರಿತಾಗಿಯೂ, ಶರೀಅತ್ ಸಂರಕ್ಷಣೆಯ ಪರವಾಗಿಯೂ ಅಧಿಕಾರಿಗಳ ಅರಮನೆಯಲ್ಲಿ ಹೋಗಿ ಧೈರ್ಯದಿಂದ ಹೇಳಿ ಬರುವವರಾಗಿದ್ದಾರೆ ಎಪಿ ಅಬೂಬಕ್ಕರ್ ಮುಸ್ಲಿಯಾರ್.*
ಕಾಂತಪುರಂ ಉಸ್ತಾದ್ ನೇತೃತ್ವ ನೀಡುವ ಸಂಘಟನೆಯ ಜೊತೆ ಸಂಘಟನಾತ್ಮಕ ಭಿನ್ನಾಭಿಪ್ರಾಯವನ್ನು ಪ್ರಕಟಿಸುತ್ತಲೇ ನನ್ನ ಮನದಾಳದಿಂದ ನಾನು ಹೇಳಲು ಬಯಸುವುದೇನೆಂದರೆ,
ಸತ್ಯದ ಹಾಗೂ ಒಳಿತಿನ ಪ್ರಕಾಶವನ್ನು ಬಿತ್ತರಿಸುವವರು ನಮ್ಮ ವಿರುದ್ದ ಪಕ್ಷದಲ್ಲಿದ್ದರೂ ಕೂಡಾ ಅದನ್ನು ಅಂಗೀಕರಿಸಸುವುದರ ಜೊತೆಗೆ ಪ್ರಶಂಸಿಸಲು ನನಗಿಷ್ಟ.
ಮೂಲ: ಮಲಯಾಳಂ.
ಕನ್ನಡಕ್ಕೆ: ಇಮ್ತಿ ಬೈರಿಕಟ್ಟೆ.
