ಅಪರೂಪದ ಲೇಖಕ ಬಿಕೆ ಯೂನುಸ್ ಇಮ್ದಾದಿ ಮಂಗಳಪದವು
✍ ಹಝುಮ
ಯೂನುಸ್ ಇಮ್ದಾದಿ! ಈ ಹೆಸರು ಕೇಳದವರು ಇರಲಾರರು. ಬರಹ ರಂಗಕ್ಕೆ ಹೊಸ ರೂಪ ಕೊಟ್ಟ ಅಪರೂಪದ ಬರಹಗಾರ ಇವರು. ಸುನ್ನೀವಾಣಿ, ಸುನ್ನತ್ ಏಕ ಕಾಲಕ್ಕೆ ಹೊರತರುವ ಮೂಲಕ ಬರಹ ರಂಗದಲ್ಲಿ ಕ್ರಾಂತಿ ಸೃಷ್ಟಿಸಿದ ಪ್ರಬುದ್ಧ ಲೇಖಕ. ಸುನ್ನೀವಾಣಿ ಮೂಲಕ ಬೆಳಕಿಗೆ ಬಂದು ಸುನ್ನತ್ ಮೂಲಕ ಮನೆಮಾತಾದ ಯೂನುಸ್ ಇಮ್ದಾದಿ ಯವರ ಕುರಿತು ಒಂದು ಕಿರು ಬರಹವಷ್ಟೇ ಇದು.
ಅದು ಐದು ವರ್ಷಗಳ ಹಿಂದಿನ ಮಾತು. ನಾನು ಮತ್ತು ಯೂನುಸ್ ಇಮ್ದಾದಿ ಒಟ್ಟಿಗೆ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಸಮಯ. ಕರ್ನಾಟಕದ ಮುಸ್ಲಿಂ ಪತ್ರಿಕಾ ರಂಗ ದಲ್ಲಿ ಅತೀ ಹೆಚ್ಚು ಪ್ರಚಾರ ಮೂಲಕ ಮನೆಮಾತಾದ ಸುನ್ನತ್ ಎಂಬ ಮಾಸಿಕಕ್ಕೆ ಯೂನುಸ್ ಇಮ್ದಾದಿಯವರನ್ನು ಸಂಪಾದಕರಾಗಿ ನೇಮಕ ಮಾಡಲಾಯಿತು. ಇವರ ನೇಮಕದ ಬಗ್ಗೆ ಹಿರಿಯ ಬರಹಗಾರರೊಬ್ಬರು ನನ್ನಲ್ಲಿ ಅಸಹನೆ ವ್ಯಕ್ತಪಡಿಸಿದ್ದರು. "ಪೆನ್ನು ಹಿಡಿದ ಕೂಡಲೇ ಸಂಪಾದಕ ಮಾಡಿದ್ದು ಸರಿಯಲ್ಲ" ಎಂಬ ವಾದವಾಗಿತ್ತು ಅವರದ್ದು. ನಂತರ ಅವರೇ ಯೂನುಸ್ ಇಮ್ದಾದಿ ಯವರ ಬರಹವನ್ನು ಬಾಯಿ ತುಂಬಾ ಹೊಗಳಿದ್ದರು.
ಕರ್ನಾಟಕ ದಲ್ಲಿ ವಿಶೇಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಬರಹ ರಂಗದಲ್ಲಿ ನೂರಕ್ಕೂ ಮಿಕ್ಕ ಬರಹಗಾರರಿದ್ದಾರೆ. ಆದರೆ, ಯೂನುಸ್ ಇಮ್ದಾದಿ ಯವರಂತ ಬರಹ ಗಾರರು ಅಪರೂಪ. ಓದುಗರನ್ನು ಆಕರ್ಷಿಸುವ ಬರಹ ಶೈಲಿ, ಪ್ರತೀ ತಿಂಗಳು ಆಕರ್ಷಣೀಯ ಬರಹ ಮೂಲಕ ಪತ್ರಿಕೆ ಓದುಗರಿಗೆ ಬೋರ್ ಆಗದಂತೆ ಮುನ್ನಡೆ ಸುವ ಇಮ್ದಾದಿ ಯವರ ಸಾಮರ್ಥ್ಯ ನಿಜಕ್ಕೂ ಮೆಚ್ಚಲೇ ಬೇಕು.
ತಿಂಗಳಿಗೊಂದು ಲೇಖನ ಬರೆಯಲು ಕಷ್ಟ ಪಡುವ ಲೇಖರ ಮುಂದೆ ಸುನ್ನತ್ ಮತ್ತು ಸುನ್ನೀವಾಣಿ ಪತ್ರಿಕೆಯನ್ನು ಪ್ರತೀ ತಿಂಗಳು ತುಂಬಿಸಿ ಓದುಗರಿಗೆ ಬಡಿಸುವ ಅವರ ಪ್ರಯತ್ನಕ್ಕೆ ಬೇಷ್ ಎನ್ನಲೇ ಬೇಕು.
ನಮ್ಮ ನಡುವೆ ಹಲವು ಪತ್ರಿಕೆ ಗಳಿವೆ. ಅವುಗಳಲ್ಲಿ ಹಲವು ಲೇಖಕರು ದುಡಿಯುತ್ತಿದ್ದಾರೆ. ಆದರೆ , ಸುನ್ನತ್ ಪತ್ರಿಕೆ ಯಲ್ಲಿ ತೊಂಬತ್ತು ಶೇಖಡ ಲೇಖನಗಳು ,ಅದೂ ಜನಾಕರ್ಷಣೀಯ ಬರಹಗಳನ್ನೊಳಗೊಂಡ ಬರಹ ಗೊಂಚಲೇ ಓದುಗರಿಗೆ ಉಣಿಸುತ್ತಿರುವವರು ಇಮ್ದಾದಿ ಉಸ್ತಾದರು.
ಮುಸ್ಲಿಂ ಪತ್ರಿಕೋದ್ಯಮದಲ್ಲಿ ಸುನ್ನತ್ ಮುಂಚೂಣಿ ಯಲ್ಲಿದೆ. ಅದಕ್ಕೆ ಕಾರಣ ಇಮ್ದಾದಿ ಉಸ್ತಾದ್ ರವರ ಲೇಖನ. ಯಾವ ತಿಂಗಳ ಸುನ್ನತ್ ಮಾಸಿಕವೂ ಓದುಗರಿಗೆ ಬೋರ್ ಆದದ್ದಿಲ್ಲ. ಪ್ರತೀ ದಿನ ಅರ್ಧರಾತ್ರಿ ತನಕ ಕುಳಿತು ಓದುಗರಿಗೆ ಯಾವ ಲೇಖನ ಸೂಕ್ತ ಎಂದು ಚಿಂತಿಸಿ ಸುನ್ನತ್ ಮಾಸಿಕವನ್ನು ತಯಾರು ಮಾಡಿ ಪ್ರತೀ ತಿಂಗಳು ಓದುಗರಿಗೆ ನೀಡುತ್ತಾರೆ.ಅವರ ಪ್ರಯತ್ನದ ಫಲ ವಾಗಿ ಸುನ್ನತ್ ಮಾಸಿಕವು ಓದುಗರ ಮನ ಗೆದ್ದಿದೆ.
ಸುನ್ನತ್, ಸುನ್ನೀವಾಣಿ ಜನಮಾನಸದಲ್ಲಿ ಭದ್ರವಾಗಿ ಬೇರೂರಲು ಇಮ್ದಾದಿ ಯವರ ಬರಹವೂ ಕಾರಣ ಎಂಬುದಕ್ಕೆ ಎರಡು ಮಾತಿಲ್ಲ. ಅತ್ಯಂತ ಸರಳ ಗುಣ, ಸೌಮ್ಯ ನಡತೆಯನ್ನು ಮೈಗೂಡಿಸಿ ಕೊಂಡಿರುವ ಇಮ್ದಾದಿ ಉಸ್ತಾದ್ ರವರು ತಾನೊಬ್ಬ ಜನಪ್ರಿಯ ಬರಹಗಾರ ಎಂಬ ಅಹಂ ಗೊಳಗಾದವರಲ್ಲ. ಯಾರು ಬಂದರೂ ಪ್ರೀತಿಯಿಂದ ಮಾತಿಗಿಳಿಯುವ ಅವರು ಯಾರ ಮುಂದೆಯೂ ತಾನೊಬ್ಬ ಬರಹಗಾರನೆಂದು ತೋರ್ಪಡಿಸಿದ್ದಿಲ್ಲ.
ಸನ್ಮಾನ,ಪ್ರಶಸ್ತಿ ಗಳ ಹಿಂದೆ ಓಡಾಡುವ ,ಹೆಸರು ,ಕೀರ್ತಿ ಗಾಗಿ ಪರದಾಡುವ ಯುವ ಬರಹಗಾರರ ನಡುವೆ, ಹೇಗಾದರೂ ಸರಿ ಲೇಖನ ಬರೆದರೆ ಸಾಕೆಂದು ಭಾವಿಸುವ ಲೇಖಕರ ಮಧ್ಯೆ ಅಪರೂಪದ ಬರಹಗಾರರಾಗಿ ಮೂಡಿ ಬರುತ್ತಾರೆ ಇಮ್ದಾದಿ ಉಸ್ತಾದ್ ರವರು.
ಅಲ್ಲಾಹನು, ಇಮ್ದಾದಿ ಯವರಿಗೆ ದೀರ್ಘಾಯುಷ್ಯ ನೀಡಲಿ. ಬರಹದಲ್ಲಿ ಸಮೃದ್ಧಿ ಮತ್ತು ಐಶ್ವರ್ಯ ನೀಡಲಿ.
ಪ್ರತಿಭೆಗಳನ್ನು ಗುರುತಿಸಿ ಗೌರವಿಸಬೇಕಾದದ್ದು ನಮ್ಮೆಲ್ಲರ ಬಾಧ್ಯತೆ ಯಾದ ಕಾರಣ ಯೂನುಸ್ ಇಮ್ದಾದಿ ಯವರಿಗೆ ಬರಹ ಮೂಲಕ ಗೌರವ ನೀಡುತ್ತಿದ್ದೇನೆ.
🌹🌹🌹🌹🌹🌹🌹🌹🌹🌹