Skip to main content

Posts

Showing posts from June, 2026

ಜೂನ್ 16, ಸ್ಮಾರ್ಟ್ ಸ್ಕಾಲರ್ಶಿಪ್ ಎಕ್ಸಾಂ ತರಬೇತಿ ಶಿಬಿರ

ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಮಾನ್ಯತೆ ಪಡೆದಿರುವ ಮದರಸಾಗಳ 3 ರಿಂದ 12 ನೇ ತರಗತಿವರೆಗಿನ ವಿದ್ಯಾರ್ಥಿಗಳಲ್ಲಿ ಹೆಚ್ಚುವರಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು, ಮದ್ರಸಾ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಿಸಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಬೋರ್ಡ್ ನಡೆಸುವ ಸ್ಮಾರ್ಟ್ ಸ್ಕಾಲರ್‌ಶಿಪ್ ಪರೀಕ್ಷೆಯ ಮೊದಲ ಹಂತದ ಪ್ರಿಲಿಮಿನರಿ ಪರೀಕ್ಷೆ ಸೆಪ್ಟೆಂಬರ್ 29 ರಂದು ಫೈನಲ್ ಪರೀಕ್ಷೆ ಅಕ್ಟೋಬರ್ 31 ರಂದು ಇಂಗ್ಲೀಷ್ ಮೀಡಿಯಂ ಮದ್ರಸಗಳಿಗೆ, ನವೆಂಬರ್ 1 ರಂದು ಜನರಲ್ ಮದ್ರಸಗಳಿಗೆ ನಡೆಯಲಿದೆ. ಈ ಪ್ರಯುಕ್ತ ತರಬೇತಿ ಶಿಬಿರ ಜೂನ್ 16 ಮಂಗಳವಾರ ಬೆಳಿಗ್ಗೆ 10 : 30 ಗಂಟೆಗೆ ಪಂಪ್ವೆಲ್ ಹಿರಾ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿದೆ. ವಿದ್ಯಾಭ್ಯಾಸ ಬೋರ್ಡ್ ಜನರಲ್ ಮ್ಯಾನೇಜರ್ ಸಿ ಪಿ ಸೈದಲವಿ ಮಾಸ್ಟರ್, ಪಡಿಕ್ಕಲ್ ಅಬೂಬಕರ್ ಮಾಸ್ಟರ್, ಎಕೆ ಅಬ್ದುಲ್ ಹಮೀದ್ ಸಾಹೇಬ್, ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ರವರ ನೇತ್ರತ್ವದಲ್ಲಿ ಪ್ರಸ್ತುತ ಸಭೆ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆ, ರೇಂಜ್, ಡಿವಿಷನುಗಳ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.