Skip to main content

ಯುವತಿಯೊಬ್ಬಳ ಫೇಸ್ ಬುಕ್ ಪೋಸ್ಟ್ ವೈರಲಾಗುತ್ತಿದೆ!. ನಮಗೊಂದು ಮೆಡಿಕಲ್ ಕಾಲೇಜ್ ಬೇಕಾಗಿದೆ. ಕಾಂತಪುರಂ ಉಸ್ತಾದರಿಗೊಂದು ಬಹಿರಂಗ ಪತ್ರ.



ಯುವತಿಯೊಬ್ಬಳ ಫೇಸ್ ಬುಕ್ ಪೋಸ್ಟ್ ವೈರಲಾಗುತ್ತಿದೆ!.

ನಮಗೊಂದು ಮೆಡಿಕಲ್ ಕಾಲೇಜ್ ಬೇಕಾಗಿದೆ.
ಕಾಂತಪುರಂ ಉಸ್ತಾದರಿಗೊಂದು ಬಹಿರಂಗ ಪತ್ರ.

ಅನುವಾದ : ಸ್ನೇಹಜೀವಿ ಅಡ್ಕ
ಸಹಕಾರ : ಇಮ್ತಿ ಬೈರಿಕಟ್ಟೆ, ಹಾರಿಸ್ ಕೋನಿಮಾರ್

ಪ್ರೀತಿಯ ಉಸ್ತಾದರೇ..
ನಿಮ್ಮನ್ನು ನಾನು ಇದುವರೆಗೂ ಮುಖತಃವಾಗಿ ನೋಡಿಲ್ಲ. ಆದರೂ ನನಗೆ ನಿಮ್ಮನ್ನು ಚೆನ್ನಾಗಿ ಗೊತ್ತು. ಅದು ನಿಮ್ಮ ಮುಖಾಂತರನೋ, ನಿಮ್ಮ ಶಿಷ್ಯ ವೃಂದದ ಮುಖಾಂತರವಾಗಿಯೋ ಅಲ್ಲ.  ತಮಗೆ ಯಾರೊಡನೆಯೂ ವೈರತ್ವ ಇಲ್ಲದಿದ್ದರೂ, ನಿಮ್ಮ ಯಶಸ್ಸುಗಳನ್ನು ನೋಡಿ ವೈರತ್ವ ಬೆಳೆಸಿಕೊಂಡವರ ಮೂಲಕವಾಗಿತ್ತು ನಾನು ಮೊದಲನೆಯದಾಗಿ ನಿಮ್ಮನ್ನು ಪರಿಚಯಿಸಿಕೊಂಡದ್ದು. ಮೊದಲನೆಯದಾಗಿ ಕೇಳಿಸಿಕೊಂಡದ್ದು  ಪಂಡಿತರ ಪ್ರೊಫೆಶನಲ್ ಎಂದು ಒಮ್ಮೆ ಮನೋರಮಾ ಪತ್ರಿಕೆಯು ಬರೆದದ್ದನ್ನು ಓದಿದ ನಂತರವಾಗಿತ್ತು ನಾನು ನಿಮ್ಮನ್ನು ಗಮನಿಸತೊಡಗಿದ್ದು.
ಯಾರೊಡನೆಯೂ ವೈರತ್ವವಿಲ್ಲದೆ , ಮುಗುಳ್ನಗೆಯೊಂದಿಗೆ ಅನಾಥರ ಪಾಲಿನ ಆಸರೆಯಾಗಿ, ಆಸರೆಯಿಲ್ಲದವರ ಪಾಲಿನ ರಕ್ಷಕರಾಗಿ, ಪಂಡಿತರ ಉಸ್ತಾದರಾಗಿ, ಜಗತ್ತು ಗುರುತಿಸುವ, ಗೌರವಿಸುವ ಭಾರತದ ಮುಸ್ಲಿಂ ನಾಯಕನಾಗಿ, ಈ ಪಟ್ಟಿ ಎಣಿಸಿ ಮುಗಿಸಲು ಸಾಧ್ಯವಿಲ್ಲ.
ಮುಟ್ಟಿದೆಲ್ಲವೂ ಚಿನ್ನವಾಗಿ ಮಾರ್ಪಡಿಸುವ ತಮ್ಮೊಂದಿಗೆ ಮಾತನ್ನು‌ ದೀರ್ಗಗೊಳಿಸದೆ ವಿಷಯವನ್ನು ಹಂಚಿಕೊಳ್ಳುತ್ತೇನೆ. ಸಾಂಸ್ಕೃತಿಕ ಕೇರಳಕ್ಕೆ ಒಂದು‌ ಮೆಡಿಕಲ್ ಕಾಲೇಜಿನ ಅಗತ್ಯತೆಯಿದೆ. ಅದು ಕೇರಳದಲ್ಲೇ ಆಗಬೇಕೆಂಬ ನಿರ್ಬಂಧವಿಲ್ಲ.  ತಾವೊಮ್ಮೆ ಬೆರಳು ತೋರಿಸಿದರೆ ಜೀವ ಬೇಕಾದರೂ ನೀಡಲು ತಯಾರಿರುವ ಜನಲಕ್ಷಗಳನ್ನೊಳಗೊಂಡ ಒಂದು ಜನಸಮೂಹ ಎಲ್ಲದಕ್ಕೂ ರೆಡಿಯಾಗಿ ತಮ್ಮೊಂದಿಗಿರುವರು ಅನ್ನುವುದು ತಮ್ಮ ಕೆಲವೊಂದು ತೀರ್ಮಾನಗಳು ಸಾಕ್ಷಿಯಾಗಿಸಿದೆ.
ಅದಲ್ಲದೆ ನೂರಾರು ಮೆಡಿಕಲ್ ಕಾಲೇಜ್ ಗಳಲ್ಲಿ ತಮ್ಮ ನೇತೃತ್ವದಲ್ಲಿ ಸಾಂತ್ವನ ಸೇವೆಯ ಮೂಲಕ ಕೋಟಿಗಳನ್ನು ವ್ಯಯಿಸಿ ಕೇರಳ ಮಾತ್ರವಲ್ಲದೆ ಭಾರತದ ಇತರ ಪ್ರದೇಶಗಳಲ್ಲೂ ಜಾತಿ, ಧರ್ಮವನ್ನು  ನೋಡದೆ ನಡೆಸಲಾಗುತ್ತಿದೆ.
ಒಬ್ಬಳು ಮಲಯಾಳಿ ಅನ್ನುವ ಕಾರಣಕ್ಕಾಗಿ ನಾನು ಅಭಿಮಾನ ಪಡುತ್ತಿದ್ದೇನೆ.
ಒಂದು ಕೆಲಸವನ್ನು ಮಾಡಬೇಕೆಂದು ತೀರ್ಮಾನಿಸಿದರೆ ಬೆಟ್ಟದಷ್ಟು ಸಮಸ್ಯೆಗಳು ಎದುರಾದರೂ, ಮುಗುಳ್ನಗೆಯೊಂದಿಗೆ ಎದುರಿಸುವ ದೊಡ್ಡ ಧೈರ್ಯವನ್ನು ನಾನು ಕಂಡದ್ದು‌ ನಿಮ್ಮಲ್ಲಿ ಮಾತ್ರವಾಗಿದೆ.
ಈ ಭೂಮಿಯಲ್ಲಿ ಐದು ಸೆಂಟ್ಸ್ ಜಾಗ ಇಲ್ಲ ಅಂತ ಹೇಳಲ್ಪಟ್ಟ ನೋಲೆಡ್ಜ್ ಸಿಟಿ , ಎಲ್ಲಾ ಸಂಕಷ್ಟ, ಸಮಸ್ಯೆಗಳನ್ನು ಬದಿಗೊತ್ತಿ ಉದ್ಘಾಟನೆಗೆ ಸಜ್ಜುಗೊಂಡಿರುವುದು ಕೇವಲ ಉದಾಹರಣೆ ಮಾತ್ರ!
ಕೆಲವು ವಿಷಯಗಳನ್ನು ಹಂಚಲು ಹಲವರಿದ್ದಾರೆ, ಆದರೆ ನಿಮಗೆ ನೀವೇ ಸರಿಸಾಟಿ. ಇಷ್ಟೊಂದು ವೈರತ್ವವನ್ನು ಎದುರಿಸಿಯೂ ಎಲ್ಲರೊಂದಿಗೂ ಸೌಹಾರ್ದತೆಯೊಂದಿಗೆ ಮುನ್ನಡೆಯುವುದು ಹೇಗೆ ಎಂದು ಹಲವಾರು ಬಾರಿ ನನ್ನಲ್ಲಿ ಆಶ್ಚರ್ಯವನ್ನು ಮೂಡಿಸಿದೆ.
ಕಮಾಲಿಯಾ ಮೆಡಿಕಲ್ ಕಾಲೇಜ್ ಅನ್ನುವ ಕನಸಿನ ಪದ್ಧತಿಯು ರಾಜಕೀಯ ಅಂಧತ್ವನ್ನು ಬೆಳೆಸಿದ ಕೆಲವರಿಂದಾಗಿ ಇಲ್ಲವಾಗಿಸಿದ್ದು ಮರೆತಿಲ್ಲ. ಸಮುದಾಯದ ಹೆಸರೇಳಿಕೊಂಡು ಕೆಲವರು ಹಿಂದಿನಿಂದ ತೋರಿದ ದ್ವೇಷಕ್ಕೆ ಬಲಿಪಶುಗಳಾದದ್ದು ಇದೇ ಸಮುದಾಯವಾಗಿದೆ.
ಈ ಸಮುದಾಯಕ್ಕೆ ನ್ಯಾಯ, ಭಯಮುಕ್ತ ಕ್ಯಾಂಪಸ್ ಗಳು ಬೇಕು ಅನ್ನುವುದು ನಿಜ.
ತಮ್ಮಂತೆಯೇ ಜಗತ್ತು ಗುರುತಿಸಲ್ಪಡುವ ಇನ್ನೊಬ್ಬ ಮುಸ್ಲಿಂ ನಾಯಕ ಭಾರತದಲ್ಲಿಲ್ಲ.
ಮುಸ್ಲಿಂ ಭಾರತವಕ್ಕೆ ಐಟೆಕ್ ಕನಸುಗಳನ್ನು ಕಾಣಲು ಕಲಿಸಿದ್ದೂ, ಸಮುದಾಯದ ಪಂಡಿತರನ್ನು ಐಕಾನ್ ಗಳಂತೆ ಕಾಣಲು ಪ್ರೇರೇಪಿಸಿದ್ದೂ ನೀವು.
ಬಾಂಬ್ ಸ್ಪೋಟಗಳ ಸದ್ದುಗಳೊಂದಿಗೆ ಜೀವಿಸುತ್ತಿದ್ದ ಕಾಶ್ಮೀರದ ಮಕ್ಕಳನ್ನು‌ ಮರ್ಕಝ್ ಗೆ ಕರೆತಂದು, ಅಲ್ಲಿ ಅವರನ್ನು ಈ ದೇಶಕ್ಕಾಗಿ ಹೋರಾಡುವಂತಹ ಮನೋಸ್ಥಿತಿಯನ್ನು ಬೆಳೆಸಲು ಪ್ರೇರಣೆ ನೀವಾಗಿರುವಿರಿ.
ಉತ್ತರ ಪ್ರದೇಶ, ಬಿಹಾರ, ಕಾಶ್ಮೀರ ಸೇರಿದಂತೆ ನೀವು ನಿಮ್ಮ ಸೇವೆ ಲಭಿಸದ ರಾಜ್ಯಗಳು ಇಲ್ಲ ಅಂತಲೇ ಹೇಳಬಹುದು.
ಭಾರತದ ವಿವಿಧ ಭಾಗಗಳಲ್ಲಿ‌ ಸಮುದಾಯ, ಸಂಘಟನೆಗಳ ಸಮಯದಾಯದ ಅಭ್ಯುದಯಕ್ಕಾಗಿ ಓಡಾಡಿದ ಚರಿತ್ರೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ರಿಂದಾಗಿದೆ ದೇಶ ಕೇಳಿದ್ದು.
ಮರೆಯಲು ಸಾಧ್ಯವಿಲ್ಲ ನಮ್ಮ ರಾಜ್ಯದಲ್ಲಿ ಯಾವುದೇ ಮಕ್ಕಳೂ ಆಹಾರ ಸಿಗದೆ ಅಳೆಯಬಾರದು ಎಂದು  ಹೇಳಲು SYS ಹಾಗೂ SSF ನ ಕರ್ಮಧೀರ ಕಾರ್ಯಕರ್ತರಿಗೆ ಕಲಿಸಿಕೊಟ್ಟದ್ದು ತಾವು.
ತಾವು ಮನಸ್ಸು ಮಾಡಿದ್ದೇ ಆದಲ್ಲಿ ನಾನು ವಿನಂತಿಸಿದ್ದು ಖಂಡಿತವಾಗಿಯೂ ನಡೆಯಬಹುದು. ನನ್ನ ವಿನಂತಿ ತಮ್ಮ ಗಮನದಲ್ಲಿರಬಹುದೆಂಬ ನಿರೀಕ್ಷೆಯೊಂದಿಗೆ,
ಕೆಲವೊಂದು ಕಾರಣಗಳಿಂದ ನಿಮ್ಮ‌ ಗಮನಕ್ಕೆ ಬಂದಿಲ್ಲದಿದ್ದಲ್ಲಿ ಮತ್ತೊಮ್ಮೆ ಕಾಣುವೆ ಅನ್ನುವ ಆತ್ಮವಿಶ್ವಾಸದೊಂದಿಗೆ.
ಗೌರವಾದರಗಳೊಂದಿಗೆ...
ಫಾತಿಮಾ ರಶೀದ್.

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.