ಅಂತಾರಾಷ್ಟೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡ ಉಳ್ಳಾಲ ದಾರಂದಬಾಗಿಲಿನ ಎಸ್ಸೆಸ್ಸೆಫ್ ಸದಸ್ಯ ಬುಶೈರ್ ರಹ್ಮಾನ್
ಅಂತಾರಾಷ್ಟೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ
ತನ್ನದಾಗಿಸಿಕೊಂಡ ಉಳ್ಳಾಲ ದಾರಂದಬಾಗಿಲಿನ ಎಸ್ಸೆಸ್ಸೆಫ್ ಸದಸ್ಯ ಬುಶೈರ್ ರಹ್ಮಾನ್
ಇತ್ತೀಚೆಗೆ (ಮೇ -24 - 2019) ನೇಪಾಳದ ಕಾಠ್ಮಂಡುವಿನ ಕೆ.ಟಿ.ಎಂ ಸಿಟಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಂಗಳೂರು ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ಉಳ್ಳಾಲ ದಾರಂದಬಾಗಿಲಿನ ಮುಹಮ್ಮದ್ ಬುಶೈರ್ ರಹ್ಮಾನ್ ಒಂದು ಚಿನ್ನದ ಪದಕ ಹಾಗು ಒಂದು ಕಂಚಿನ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾನೆ. ಅಂತಾರಾಷ್ಟ್ರ ತರಬೇತುದಾರರು ಹಾಗು ತೀರ್ಪುಗಾರರಾದ ದರ್ಣಪ್ಪ.ಕೆ ಇವರಿಂದ ತರಬೇತಿ ಪಡೆದ ಬುಶೈರ್ ರಹ್ಮಾನ್ ಯು.ಎಂ ಬಶೀರ್ ಹಾಗು ಹಲೀಮ ದಂಪತಿಯ ಸುಪುತ್ರನೂ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವ್ಯಾಪ್ತಿಯ ತೊಕ್ಕೋಟು ಸೆಕ್ಟರ್ ಅಧೀನದ ಎಸ್ಸೆಸ್ಸೆಫ್ ದಾರಂದಬಾಗಿಲು ಶಾಖಾ ಸದಸ್ಯನಾಗಿದ್ದಾನೆ.

