ಅಕ್ಟೋಬರ್ ತಿಂಗಳಲ್ಲಿ ನಡೆಯುವ ಮರ್ಕಝ್ ನಾಲೇಜ್ ಸಿಟಿ ಉದ್ಘಾಟನೆ ನಿಮಿತ್ತ ಮರ್ಕಝ್ ಸರ್ಕಲ್ ಉಳ್ಳಾಲ ವತಿಯಿಂದ ಸಮಾವೇಶ ಹಾಗೂ ಉಳ್ಳಾಲ ಸರ್ಕಲ್ ಯೋಜನಾ ಸಮಿತಿ ಅಸ್ತಿತ್ವಕ್ಕೆ.
ಅಕ್ಟೋಬರ್ ತಿಂಗಳಲ್ಲಿ ನಡೆಯುವ ಮರ್ಕಝ್ ನಾಲೇಜ್ ಸಿಟಿ ಉದ್ಘಾಟನೆ ನಿಮಿತ್ತ ಮರ್ಕಝ್ ಸರ್ಕಲ್ ಉಳ್ಳಾಲ ವತಿಯಿಂದ ಸಮಾವೇಶ ಹಾಗೂ ಉಳ್ಳಾಲ ಸರ್ಕಲ್ ಯೋಜನಾ ಸಮಿತಿ ಅಸ್ತಿತ್ವಕ್ಕೆ.
ಮಂಗಳೂರು: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದ್ ನೇತೃತ್ವದಲ್ಲಿ ಕೋಝಿಕ್ಕೋಡ್ ಜಿಲ್ಲೆಯ ಕೈದಪ್ಪೊಯಿಲ್ ಎಂಬಲ್ಲಿ ಸುಮಾರು ನೂರೈವತ್ತು ಏಕರೆ ಭೂಮಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮರ್ಕಝ್ ನಾಲೇಜ್ ಸಿಟಿಯ ಮೊದಲ ಹಂತದ ಉದ್ಘಾಟನಾ ಸಮಾರಂಭವು ಇದೇ ಅಕ್ಟೋಬರ್ ಕೊನೆಯ ವಾರ ನಡೆಯಲಿದ್ದು ಆ ಬಗ್ಗೆ ಕರ್ನಾಟಕದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಕಾರಂದೂರು ಮರ್ಕಝ್ ನಲ್ಲಿ ನಡೆದ ರಾಜ್ಯದ ಸುನ್ನೀ ಸಂಘಟನಾ ನಾಯಕರ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಅದರಂತೆ ಬೆಂಗಳೂರು,ಮಂಗಳೂರು, ಕೊಡಗು ಮತ್ತು ಶಿವಮೊಗ್ಗಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ನಾಲೇಜ್ ಸಿಟಿಯ ಕಾರ್ಯ ಚಟುವಟಿಕೆಗಳನ್ನು ಸಾರ್ವಜನಿಕವಾಗಿ ವಿವರಿಸಿ ಕೊಡಲಾಗುವುದು.
ಸದರಿ ಸಮಾವೇಶಗಳಲ್ಲಿ ಮರ್ಕಝ್ ನಾಲೇಜ್ ಸಿಟಿ ಅಧ್ಯಕ್ಷ ಸುಲ್ತಾನುಲ್ ಉಲಮಾ ಎ. ಪಿ ಉಸ್ತಾದ್, ಸಯ್ಯಿದ್ ಅಲಿ ಬಾಫಖಿ ತಂಙಳ್, ಮಾನೇಜಿಂಗ್ ಡೈರೆಕ್ಟರ್ ಡಾ. ಅಬ್ದುಲ್ ಹಕೀಂ ಅಝ್ಹರಿ,ನಾಯಕರಾದ ಸಿ.ಮುಹಮ್ಮದ್ ಫೈಝಿ,ಸಯ್ಯಿದ್ ಮುಹಮ್ಮದ್ ತುರಾಬ್ ತಂಙಳ್, ಸಯ್ಯಿದ್ ಮುತ್ತನೂರ್ ತಂಙಳ್, ಡಾ.ಅಬ್ದುಲ್ ಸಲಾಂ, ಅಡ್ವಕೇಟ್ ತನ್ವೀರ್ ಮುಂತಾದವರು ಭಾಗವಹಿಸಲಿದ್ದಾರೆ.
ಇದರ ಪ್ರಚಾರಾರ್ಥ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆಯ ಮರ್ಕಝ್ ಸರ್ಕಲ್ ಉಳ್ಳಾಲ ಸಮಿತಿಯ ವತಿಯಿಂದ ಉಳ್ಳಾಲದ ತಾಜುಲ್ ಉಲಮಾ ಸುನ್ನಿ ಸೆಂಟರಿನಲ್ಲಿ ಉಳ್ಳಾಲ ಸರ್ಕಲ್ ಸಮಾವೇಶ ನಡೆಯಿತು. ಮರ್ಕಝ್ ಕೋ ಆರ್ಡಿನೇಟರ್ ಮರ್ಝೂಖ್ ಸ ಅದಿ ಪಾಪಿನಶ್ಶೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಯೋಜನಾ ಸಮಿತಿಯ ಅಧ್ಯಕ್ಷರಾದ ಇಸ್ಮಾಯಿಲ್ ತಂಗಲ್ ಉಜಿರೆ ಅಧ್ಯಕ್ಷತಾ ಭಾಷಣ ಮಾಡಿದರು. ಅಲಿಫ್ ಗ್ಲೋಬಲ್ ಇಂಟರ್ ನ್ಯಾಷನಲ್ ಸ್ಕೂಲ್ ಚೇರ್ಮಾನ್ ಅಲೀ ಕುಞ್ಞಿ ಉಸ್ತಾದ್, ಸಯ್ಯಿದ್ ಜಮಾಲುಲೈಲಿ ತಂಞಲ್ ವಾದಿ ಇರ್ಫಾನ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಜಲಾಲುದ್ದೀನ್ ತಂಗಲ್ ಉಳ್ಳಾಲ ದುಆ ನೆರವೇರಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರಿನ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ಸಂಘ ಕುಟುಂಬದ ನಾಯಕರ ಸಮ್ಮುಖದಲ್ಲಿ ನಡೆದ ಸಮಾವೇಶದಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಸದ್ರಿ ಸಮಾವೇಶ ದಲ್ಲಿ ಮರ್ಕಝ್ ನಾಲೆಡ್ಜ್ ಸಿಟಿ ಉದ್ಘಾಟನಾ ಸಮಾರಂಭ ಇದರ ಸ್ವಾಗತ ಸಮಿತಿ ಚೆಯರ್ ಮ್ಯಾನ್ ಸಯ್ಯಿದ್ ತುರಾಬ್ ತಂಙಲ್, ಜನರಲ್ ಕನ್ವೀನರ್ ಎಂ.ಪಿ.ಎಂ ಅಶ್ರಫ್ ಸಅದಿ ಮಲ್ಲೂರು, ಕನ್ವೀನರ್ ಇಸ್ಮಾಯಿಲ್ ಸಅದಿ ಕಿನ್ಯ, ಜಿಲ್ಲಾ ಚೇರ್ಮನ್ ಯಾಕೂಬ್ ಸಅದಿ ನಾವೂರು, ಜಿಲ್ಲಾ ಜನರಲ್ ಕನ್ವೀನರ್ ಅಶ್ರಫ್ ಕಿನಾರ ಹಾಗು ಉಲಮಾ ಉಮರಾಗಳು ಭಾಗವಹಿಸಿದ್ದರು.
ಮರ್ಕಝ್ ನಾಲೆಜ್ ಸಿಟಿ ಉಳ್ಳಾಲ ಸರ್ಕಲ್ ಸಮಿತಿ
ಚೇರ್ಮನ್ ಬಿ.ಜಿ ಹನೀಫ್ ಹಾಜಿ ಉಳ್ಳಾಲ, ಜನರಲ್ ಕನ್ವೀನರ್ ಖುಬೈಬ್ ತಂಗಲ್, ಕೋಶಾಧಿಕಾರಿ
ಬಶೀರ್ ಸಖಾಫಿ, ವೈಸ್ ಚೇರ್ಮನ್ ಗಳಾಗಿ ಜಲಾಲುದ್ದೀನ್ ತಂಗಲ್,
ಶಿಹಾಬುದ್ದಿನ್ ಸಖಾಫಿ, ಮೋರೋಕೊ ಮದನಿ,
ವೈಸ್ ಕನ್ವೀನರುಗಳಾಗಿ ಝಿಯಾದ್ ತಂಗಲ್, ಅಯ್ಯೂಬ್ ಮಹ್ಳರೀ,
ಇಸ್ಹಾಕ್ ಪೇಟೆ, ಮುಸ್ತಫ ಎಂ. ನಗರ,
ಸದಸ್ಯರುಗಳಾಗಿ, ಜಾಬಿರ್ ಫಾಲಿಲಿ, ಶಬೀರ್ ಪೇಟೆ, ಇಲ್ಯಾಸ್ ಕೈಕೊ,ಈ ಅಬ್ದುರ್ರಹ್ಮಾನ್ ಅಕ್ಕರೆಕ್ಕೆರೆ, ಅಮೀರ್ ತೊಕ್ಕೊಟ್ಟು, ಹೈದರ್ ಮುಕ್ಕಚ್ಚೇರಿ ಹಾಗೂ ಅಲ್ತಾಫ್ ಶಾಂತಿಬಾಗ್ ಇವರನ್ನು ಆರಿಸಲಾಯಿತು.
Comments
Post a Comment