ಬರಿಮಾತಿಗಷ್ಟೆ SSF ಆದರೆ ಸಾಲದು, ಸಂಘಟನೆಯಲ್ಲಿ ಸೇರಿ ಕಾರ್ಯಾಚರಣೆಗಿಳಿಯಬೇಕು.
ಇದು SSF ADYAR ಕಾರ್ಯಕ್ರಮದಲ್ಲಿ ಖುರ್ರತುಸ್ಸಾದಾತ್ ಕೂರತ್ ತಂಙಳ್ ಹೇಳಿದ ಮಾತು
ಮಂಗಳೂರಿನಲ್ಲಿ ನಡೆದ ಎನ್'ಹಾನ್ಸ್ ಇಂಡಿಯಾ ಕಾನ್ಫರೆನ್ಸ್ ನಲ್ಲಿ ತಾಜುಲ್ ಉಲಮ ಉಳ್ಳಾಲ ತಂಙಳ್ ರವರ ಸುಪುತ್ರರೂ ಈಗಿನ ಉಳ್ಳಾಲ ಹಾಗೂ ಕರ್ನಾಟಕದ ಹಲವಾರು ಮೊಹಲ್ಲಾಗಳ ಖಾಝಿಯೂ ಆಗಿರುವ ಖುರ್ರತುಸ್ಸಾದಾತ್ ಕೂರತ್ ತಂಙಳ್ ರವರು ಎಲ್ಲಾ ಸುನ್ನಿ ಜನರಿಗೂ ಒಂದು ಉತ್ತಮ ಸಂದೇಶವನ್ನು ಹೇಳಿದರು, ಅದೇನೆಂದರೆ ನಾವು ಬರಿಮಾತಿಗಷ್ಟೇ SSF SYS ನವರಾದರೆ ಸಾಲದು, ಸಂಘಟನೆಯಲ್ಲಿ ಸೇರಿ ಸಂಘಟನಾ ಕಾರ್ಯ ಚಟುವಟಿಕೆಗಳಲ್ಲಿ ತೊಡಗಬೇಕು. ಹಾಗಾದರೆ ಮಾತ್ರ ನಾವು ನಿಜವಾದ ಸುನ್ನಿ ಆಗಲು ಸಾಧ್ಯ ಅಂತ.
ನಿಜವಾಗಿಯೂ ಹೌದು, ಇತ್ತೀಚಿನ ದಿನಗಳಲ್ಲಿ ನಾವು SSF ನವರು, ನಾವು SYS ನವರು, ನಾವು ಮುಸ್ಲಿಂ ಜಮಾಅತ್ ನವರು ಅಂತ ಹೇಳುವವರು ಕೂಡ ಸಂಘಟನಾ ಕಾರ್ಯಾಚರಣೆಗಳಿಂದ ದೂರ ಇದ್ದು, ಸಂಘಟನೆಯ ಯಾವುದೇ ಮೀಟಿಂಗ್, ಕ್ಯಾಂಪ್ ಗಳಲ್ಲಿ ಸರಿಯಾಗಿ ಭಾಗವಹಿಸದೆ, ಬರಿಮಾತಿಗಷ್ಟೇ ನಾವು ಸುನ್ನಿಗಳು ಅಂತ ಹೇಳುವವರಾಗಿದ್ದೇವೆ. ಕೆಲವರ ಸಂಘಟನಾ ಕಾರ್ಯಾಚರಣೆ ಅಂದರೆ ಕೇವಲ ವಾಟ್ಸಪ್ ಮೆಸೇಜ್ ಮತ್ತು ವಾಟ್ಸಪ್ ಸ್ಟೇಟಸ್ ಗಳಿಗೆ ಸೀಮಿತ ಆಗಿರುತ್ತದೆ. ಅವರ ವಾಟ್ಸಪ್ ಸ್ಟೇಟಸ್ ಗಳು ಮತ್ತು ಸೋಷಿಯಲ್ ಮೀಡಿಯಾದ ಅವರ ಇನ್ನಿತರ ಪೋಸ್ಟ್ ಗಳು SSF SYS ನದ್ದು ಆಗಿರುತ್ತದೆ. ಆದರೆ ಸಂಘಟನೆಯ ಒಂದು ಮೀಟಿಂಗ್ ಕರೆದರೆ ಅಲ್ಲಿಗೆ ಬಂದು ಸಂಘಟನೆಯ ಅಭಿವೃದ್ಧಿಯ ಬಗ್ಗೆ ಚಿಂತಿಸಲು ಮತ್ತು ಚರ್ಚೆ ನಡೆಸಲು ಅವರಿಂದ ಆಗುವುದಿಲ್ಲ. ಅದೇ ರೀತಿ ಸಂಘಟನೆಯ ಏನಾದರೂ ಕ್ಯಾಂಪ್ ಅಥವಾ ತರಗತಿಗಳಿಗೆ ಅವರನ್ನು ಕರೆದರೆ ಅಲ್ಲಿ ಅವರನ್ನು ಕಾಣುವುದಿಲ್ಲ. ಕೇವಲ ಸಂಘಟನೆಯ ಯಾವುದಾದರೂ ಸಮ್ಮೇಳನಗಳು ಬರುವಾಗ ಮಾತ್ರ ಅವರ ಆವೇಶ ಜೋರಾಗಿರುತ್ತದೆ. ಇದರಿಂದ ಮಾತ್ರ ಯಾವುದೇ ಪ್ರಯೋಜನ ಇಲ್ಲ. ನಾವು ಸಂಘಟನೆಯಲ್ಲಿ ಸೇರಿ ಸಂಘಟನೆಯ ಎಲ್ಲಾ ವಿಷಯಗಳಲ್ಲಿ ಕೂಡ ಆವೇಶದಿಂದ ಕಾರ್ಯಾಚರಿಸಬೇಕು ಎಂಬ ಉತ್ತಮವಾದ ಸಂದೇಶವನ್ನು ತಂಙಳ್ ರವರು ಮಂಗಳೂರಿನಲ್ಲಿ ನಡೆದ ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದರು.
✍️ ಎಂ.ಎಂ.ಎ ಹಿಮಮಿ ಕಬಕ
Comments
Post a Comment