ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ನಚ್ಚಬೆಟ್ಟು ಉಳ್ಳಾಲ ಘಟಕ ಇದರ ಪ್ರಥಮ ಕಾರ್ಯಕಾರಿಣಿ ಸಭೆಯು ಉಳ್ಳಾಲ ಮೇಲಂಗಡಿ ತಾಜುಲ್ ಉಲಮಾ ಸುನ್ನೀ ಸೆಂಟರಿನಲ್ಲಿ ಯಶಸ್ವಿಯಾಗಿ ನಡೆಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಕಾರ್ಯಕ್ರಮ ಉಧ್ಘಾಟಿಸಿದರು. ದಾರುಲ್ ಮುಸ್ತಫಾ ಉಳ್ಳಾಲ ಘಟಕ ಇದರ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ಝೋನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಹಾಗೂ ಚಿಕ್ಕಮಗಳೂರು ಮಾಗುಂಡಿ ಖತೀಬರಾದ ಅಬೂ ಅನಸ್ ಉಸ್ತಾದ್ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾರುಲ್ ಮುಸ್ತಫಾ ಸಂಸ್ಥೆಯ ಸಂಸ್ಥಾಪಕರಾದ ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದ್ ಸಂಸ್ಥೆಯ ಮಾಹಿತಿ ವಿನಿಮಯ ಮಾಡಿದರು. ಸಭೆಯಲ್ಲಿ ಹಲವು ಮಹತ್ವವಾದ ಕಾರ್ಯಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಪ್ರಸ್ತುತ ಸಭೆಯಲ್ಲಿ ಉಳ್ಳಾಲ ಘಟಕದ ಕಾರ್ಯಾಧ್ಯಕ್ಷರಾದ ಇಸಾಕ್ ಪೇಟೆ, ಪ್ರಧಾನ ಕಾರ್ಯದರ್ಶಿ ಹೈದರ್ ಮುಕ್ಕಚ್ಚೇರಿ, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಅಕ್ಕರೆಕೆರೆ, ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಉಪಾಧ್ಯಕ್ಷರಾದ ಇಲ್ಯಾಸ್ ಕೈಕೋ, ಜೊತೆ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಮುಹಮ್ಮದ್ ಕೈಕೋ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು. ವರ್ಕಿಂಗ್ ಸೆಕ್ರೆಟರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.






Comments
Post a Comment