ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ವಾರ್ಷಿಕ ಮಹಾಸಭೆ
ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಜಿದ್ದಾ ಝೋನಲ್ ಇದರ ಅಧೀನದಲ್ಲಿರುವ ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 24/3/2017 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ 12:15ಕ್ಕೆ ಮಾಸಿಕ ಸ್ವಲಾತ್ ಮಜ್ಲಿಸ್ ನೊಂದಿಗೆ ಕುದೈ ಏಷ್ಯನ್ ಪಾಲಿ ಕ್ಲಿನಿಕ್ ಹಾಲ್ ನಲ್ಲಿ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ವಹಿಸಿದ್ದರು.
ಈ ಸಂದರ್ಭ ಸುಲೈಮಾನ್ ಪಾದೆಕಲ್ಲುರವರ ವತಿಯಿಂದ ಉಮ್ರಾ ಮತ್ತು ಹಜ್ಜಾಜ್ಗಳ ಸೇವೆಗೆ ಬೇಕಾಗಿ ಸೆಕ್ಟರ್ ಸಮಿತಿಗೆ ಗಾಲಿಕುರ್ಚಿಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು
ಅಲ್ ಮದೀನತುಲ್ ಮುನವ್ವರ ಮೂಡಡ್ಕ ಇದರ ಮ್ಯಾನೇಜರ್ ಬಹು/ ಅಶ್ರಫ್ ಸಖಾಫಿ ಮಾಡಾವು ಸಭೆಯನ್ನು ಉಧ್ಘಾಟಿಸುತ್ತಾ ಕೆ.ಸಿ.ಎಫ್ ಸಂಘಟನೆ ಹಲವಾರು ದೀನೀ ಬೋಧನೆ ನೀಡುತ್ತಾ ,ಸಾಂತ್ವನ ಚಟುವಟಿಕೆಗಳಲ್ಲಿ ನಿರತರಾಗಿ, ಸಾಮಾಜಿಕ,ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಮುನ್ನೇರುತ್ತಾ ಅರಬ್ ರಾಷ್ಟ್ರಗಳಲ್ಲೆಡೆ ಪಸರಿಸಿಕೊಂಡು ಮಲೇಶ್ಯಾ,ಲಂಡನ್ ಗಳಲ್ಲೂ ಬೇರು ಹಬ್ಬಿಕೊಂಡು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಸಂಘಟನಾತ್ಮಕ ವಿಚಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಪ್ರವಾದಿ ಮಹಮ್ಮದ್ ರವರ ಆದರ್ಶ ವ್ಯಕ್ತಿತ್ವ, ಮಾನವೀಯ ಮೌಲ್ಯಗಳು ಇಡೀ ಮಾನವ ಕುಲಕ್ಕೆ ಮಾದರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ KCF ದುಬಾಯಿ ಝೋನ್ ಶಿಕ್ಷಣ ವಿಭಾಗ ಕನ್ವೀನರ್ ಶರೀಫ್ ಹೊಸ್ಮಾರ್ ದೀನಿ ಬೋಧನೆ ಹಾಗೂ ದೀನಿ ಪ್ರಚಾರಕ್ಕೆ ಮೊದಲ ಆದ್ಯತೆ ನೀಡುವ ಕೆಸಿಎಫ್ ಅಸ್ಸುಫ ಎಂಬ ದೀನಿ ತರಗತಿಯ ಪದ್ಧತಿಯನ್ನು ಜಾರಿಗೆ ತಂದು
ಆ ಮೂಲಕ ಅನಿವಾಸಿ ಕನ್ನಡಿಗರನ್ನು ದೀನಿ ಬೋಧಕರನ್ನಾಗಿಸಲು ಹವಣಿಸುತ್ತಿರುವುದು ಬಹುಶಃ ಕೆಸಿಎಫ್ ಬಿಟ್ಟು ಬೇರೆ ಯಾವ ಸಂಘಟನೆಯಲ್ಲೂ ಇಂತಹ ಒಂದು ಪದ್ದತಿ ಜಿಸಿಸಿ ರಾಜ್ಯಗಳಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಶುಭ ಹಾರೈಸಿ ಮಾತಾನಾಡಿದರು
ಸೌದಿ ಅರೇಬಿಯಾ DKSC ನೇತಾರ, ಕೆಸಿಎಫ್ ಸದಸ್ಯರು, ಹಿರಿಯರಾದ ಅಬ್ಬಾಸ್ ಹಾಜಿ ಎಲಿಮಲೆ ಮಾತಾಡಿ ಕೆಸಿಎಫ್ ಉತ್ತಮ ಕೆಲಸಗಳನ್ನು ಮಾಡುತ್ತಿದೆ, ಎಲ್ಲಾ ಸುನ್ನತ್ ಜಮಾಅತಿನ ಸಂಘಟನೆಗಳು ಹೊಂದಣಿಕೆಯೊಂದಿಗೆ ಕೆಲಸ ಮಾಡಬೇಕು, ಕೆಸಿಎಫ್ ಗೆ ನನ್ನ ಎಲ್ಲಾ ವಿಧ ಬೆಂಬಲ ವಿದೆ ಎಂದು ಹೇಳಿ ಶುಭ ಹಾರೈಸಿದರು.
ಜೀವನ ನಾಡಿಗಾಗಿ, ನಾಳೆಗಾಗಿ ಎಂಬ ಪ್ರಮೇಯದಲ್ಲಿ SSF ರಾಷ್ಟ್ರೀಯ ನೇತಾರ ಇಸ್ಮಾಯಿಲ್ ಸಖಾಫಿ ಕಿನ್ಯ ರವರು ಮಾತಾಡಿ
ಭೌತಿಕ ಜೀವನ ಶಾಶ್ವತವಲ್ಲ, ಶಾಶ್ವತವಾದ ಜೀವನ ನಾಳೆಗಾಗಿ ಇರುವ ಪರಲೋಕವಾಗಿದೆ.
ಜೀವನ ಎಂಬುದು ಒಂದು ಕಲಿಕೆಯಾಗಿದ್ದು ನಾವೆಲ್ಲ ಸಮರ್ಪಕವಾಗಿ ಪ್ರವಾದಿ ಮಹಮ್ಮದ್ ರವರು ಬುನಾದಿ ಹಾಕಿಕೊಟ್ಟ ಸರಿ ದಾರಿಯಲ್ಲಿ ನಡೆಯಬೇಕು. ನಾಳೆಗಾಗಿ ಇಂದು ದುಡಿಯುವ ನಾವು ಮರಣ ನಂತರದ ಜೀವನವನ್ನು ಮನಗಂಡು, ಜೀವನ ಕೇವಲ ನಾಡಿಗಾಗಿ ಮಾತ್ರ ವಾಗಿರದೇ ಆಧ್ಯಾತ್ಮಿಕ ಚಿಂತನೆಯ ಮೂಲಕ ನಾಳೆಗಾಗಿ ಮೀಸಲಿಟ್ಟರೆ ಲೌಕಿಕ ಜೀವನದಲ್ಲೂ ಯಶಸ್ಸು ಕಾಣಲು ಸಾಧ್ಯವೆಂದು ಅಭಿಪ್ರಾಯ ಪಟ್ಟರು.
2015/16 ನೇ ಸಾಲಿನ ವರದಿ ಪ್ರ.ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ಹಾಗೂ ಲೆಕ್ಕಪತ್ರ ಕೋಶಾಧಿಕಾರಿ ಸುಲೈಮಾನ್ ಪಾದೆಕಲ್ಲು ಮಂಡಿಸಿದರು, ಯಾವುದೇ ತಿದ್ದುಪಡಿಗಳಿಲ್ಲದೆ ಸಭೆಯಲ್ಲಿ ಅಂಗೀಕರಿಸಲಾಯಿತು. ನಂತರ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಝೋನಲ್ ನೇತಾರರಾದ ಸಯ್ಯಿದ್ ಅಬೂಬಕ್ಕರ್ ಸಿದ್ದೀಖ್ ತಂಙಲ್ ಕೋಲ್ಪೆ ಹಾಗೂ ಸಿದ್ದೀಖ್ ಬಾಳೆಹೊನ್ನೂರು ಹಳೆಯ ಕಮಿಟಿ ಬರ್ಕಸ್ತುಗೊಳಿಸಿ ಹೊಸ ಕಮಿಟಿಗೆ ಚಾಲನೆ ನೀಡಿದರು.
2017- 2018 ರ ಸಾಲಿನ ಪದಾಧಿಕಾರಿಗಳು
*ಅಧ್ಯಕ್ಷರು* ಹನೀಫ್ ಸಖಾಫಿ ಬೊಳ್ಮಾರ್.
*ಪ್ರ.ಕಾರ್ಯದರ್ಶಿ* ಇಕ್ಬಾಲ್ ಕಕ್ಕಿಂಜೆ.
*ಕೋಶಾಧಿಕಾರಿ* ಇರ್ಷಾದ್ ಉಚ್ಚಿಲ್.
*ಶಿಕ್ಷಣ ವಿಭಾಗ ಅಧ್ಯಕ್ಷ*
ಸುಲೈಮಾನ್ ಪಾದೆಕಲ್ಲು,
*ಶಿಕ್ಷಣ ವಿಭಾಗ ಕಾರ್ಯದರ್ಶಿ*
ನಿಸಾರ್ ಕಾಟಿಪಲ್ಲ.
*ಸಂಘಟನೆ ವಿಭಾಗ ಅಧ್ಯಕ್ಷ*
ಅಬ್ದುಲ್ ಹಮೀದ್ ಉಳ್ಳಾಲ,
*ಸಂಘಟನೆ ವಿಭಾಗ ಕಾರ್ಯದರ್ಶಿ*
ಕಬೀರ್ ಬಾಜಾರ್.
*ಸಾಂತ್ವನ ವಿಭಾಗ ಅಧ್ಯಕ್ಷ*
ಮೂಸಾ ಹಾಜಿ ಕಿನ್ಯ,
*ಸಾಂತ್ವನ ವಿಭಾಗ ಕಾರ್ಯದರ್ಶಿ*
ಮುಹಮ್ಮದ್ ಕುಟ್ಟಿ ಬಾಜಾರ್.
*ಪಬ್ಲಿಷಿಂಗ್ ವಿಭಾಗ ಅಧ್ಯಕ್ಷ*
ಇಸ್ಮಾಯಿಲ್ ಝುಹ್ರಿ ಕನ್ಯಾಡಿ,
*ಪಬ್ಲಿಷಿಂಗ್ ವಿಭಾಗ ಕಾರ್ಯದರ್ಶಿ*
ಇಕ್ಬಾಲ್ ನಾವೂರು.
*ಕಛೇರಿ ವಿಭಾಗ ಅಧ್ಯಕ್ಷ*
ಕಲಂದರ್ ಶಾಫಿ ಅಸೈಗೋಳಿ,
*ಕಛೇರಿ ವಿಭಾಗ ಕಾರ್ಯದರ್ಶಿ*
ಮುಸ್ತಾಖ್ ಅಹ್ಮದ್ ಸಾಗರ್.
*ಕಾರ್ಯಕಾರಿ ಸಮಿತಿ ಸದಸ್ಯರು*
ಉಸ್ಮಾನ್ ಸಅದಿ ನೆಲ್ಯಾಡಿ,
ಅಬ್ಬಾಸ್ ಹಾಜಿ ಎಲಿಮಲೆ
ಮುಹಮ್ಮದ್ ಸಅದಿ ಪರಪ್ಪು
ಅಕ್ಬರ್ ಅಲಿ ಮಾಚಾರ್
ಸಿದ್ದೀಖ್ ಸಅದಿ ಪೊಯ್ಯತ್ತಬೈಲ್
ಇಬ್ರಾಹೀಮ್ ಉಜಿರೆಬೆಟ್ಟು
ಅಬ್ಬಾಸ್ ಸಾಲ್ಮರ
ಅಶ್ರಫ್ ಮಂಜನಾಡಿ
ಮಜೀಬ್ ಹರೇಕಳ
ಅಬ್ದುಲ್ ಹಮೀದ್ ಮಂಜನಾಡಿ
ಅಶ್ರಫ್ ಮಂಗಿಲಪದವು
ಶರೀಫ್ ಪಲ್ಲಮಜಲ್
ರಫೀಖ್ ಕೊಳಕೇರಿ
ರವೂಫ್ ಪೆರ್ನೆ
ಅಬ್ದುಲ್ ಹಮೀದ್ ಆನೆಕಲ್ಲು
ಮುಹಮ್ಮದ್ ತೆಕ್ಕಾರ್.
ಒಟ್ಟು 29 ಕಾರ್ಯಕಾರಿ ಸಮಿತಿ ಸದಸ್ಯರಾಗಿ ಘೋಷಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಜೊತೆ ಕಾರ್ಯದರ್ಶಿ ಕಲಂದರ್ ಶಾಫಿ ಅಸೈಗೋಳಿ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ಧನ್ಯವಾದಗೈದರು
Comments
Post a Comment