ಪ್ರತಿಷ್ಠಿತ ವಿದ್ಯಾ ಸಮುಚ್ಛಯ ಕಾಸರಗೋಡಿನ ಜಾಮಿಅಃ ಸಅದಿಯ್ಯಃ ಇದರ ಹಿಫ್ಝುಲ್ ಕುರಾನ್ ಕಾಲೇಜಿನಲ್ಲಿ ಕೇವಲ ಎಂಟು ತಿಂಗಳುಗಳಲ್ಲಿ ಸಂಪೂರ್ಣ ಕುರಾನ್ ಕಂಠಪಾಠ ಮಾಡಿ ಅದ್ಭುತ ಸಾಧನೆಗೈದ ದಾರುಲ್ ಅಶ್ಅರಿಯ್ಯಃ ಸಂಸ್ಥೆಯ ಹಳೆ ವಿದ್ಯಾರ್ಥಿ ಹಾಫಿಳ್ ಮುಹಮ್ಮದ್ ರಾಫಿ ಯವರನ್ನು ದಾರುಲ್ ಅಶ್ಅರಿಯ್ಯಃ ಇಂಗ್ಲಿಷ್ ಮೀಡಿಯಂ ಸ್ಕೂಲಿನ 2015-16 ನೇ ಸಾಲಿನ ಶಿಕ್ಷಕರ ವತಿಯಿಂದ ಸ್ಮರಣಿಕೆ ನೀಡಿ ಶಾಲುಹೊದಿಸಿ ಸನ್ಮಾನಿಸಲಾಯಿತು.
ಶಿಕ್ಷಕರಾದ ಮನಾಝಿರ್ ಮುಡಿಪು, ಮುಸ್ತಫ ಬೋಳಂತೂರು, ಉಮರ್ ಅಮ್ಜದಿ ಕುಕ್ಕಿಲ ಹಾಗು ರಫೀಕ್ ಮಂಚಿ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ವಿಶೇಷ ಸಾಧನೆಗೈದ ತಮ್ಮ ಶಿಷ್ಯನಿಗೆ ಶುಭಹಾರೈಸಿದರು.
Comments
Post a Comment