KCF ಕುವೈಟ್ : ಪುನರ್ಜೀವನ ; ಸಂಘಟನಾ ತರಬೇತಿ ಶಿಬಿರ
ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ಸಂಘಟನಾ ವಿಭಾಗದಿಂದ ದಿನಾಂಕ 24/05/2017 ಶುಕ್ರವಾರ ಜುಮಾ ನಮಾಝ್ ನ ನಂತರ ಫಾಹಿಲ್ ಕೆಸಿಎಫ್ ಕಛೇರಿಯಲ್ಲಿ ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ನಝೀರ್ ನಇಮಿ ಉಸ್ತಾದರ ದುವಾದೊಂದಿಗೆ ಆರಂಭವಾಯಿತು.
ಕೆಸಿಎಫ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಕನ್ವೀನರ್ ಬಹುಮಾನ್ಯ ಉಮರ್ ಝುಹ್ರಿ ಉಸ್ತಾದರು ಉದ್ಘಾಟನೆಯನ್ನು ನೆರವೇರಿಸಿದರು.
ದೀನಿ ದಅ-ವಾ (ಪ್ರಬೋದನೆ)ಕೆಡುಕನ್ನು ವಿರೋದಿಸಿ ಒಳಿತಿನ ಕಡೆ ಮುನ್ನಡೆಸು
ಎಂಬ ಸುಂದರವಾದ ಧ್ಯೇಯ ವಾಕ್ಯವು ವಿಶ್ವದೆಲ್ಲೆಡೆ ಕೇಳುತ್ತಳೇ ಇದೆ, ಆದರೆ ಅದರ ಪರಿಪೂರ್ಣ ಅರ್ಥ ಮನದಟ್ಟು ಮಾಡಿಕೊಟ್ಟದು ನಿನ್ನೆ ನೆಡೆದ ಕೆಸಿಎಫ್ ರಾಷ್ಟ್ರೀಯ ಸಮಿತಿ ನಡೆಸಿದಂತಹ *ಜೀವನ ನಾಡಿಗಾಗಿ ನಾಳೆಗಾಗಿ ಎಂಬ ಸಂಘಟನಾ ತರಬೇತಿ ಶಿಬಿರ* ಇದರ ನೇತ್ರತ್ವ ವಹಿಸಿ ಉತ್ತಮ ರೀತಿಯಲ್ಲಿ ತರಗತಿ ನಡೆಸಿಕೊಟ್ಟಂತಹ *ICF ರಾಷ್ಟ್ರೀಯ ನಾಯಕರಾದ ಮುಹಮ್ಮದ್ ಅಲೀ ಸಖಾಫಿ ಉಸ್ತಾದ್* ಯವರ ಅರ್ಥಘರ್ಬಿತವಾದ ಮಾತುಗಳ ಮೂಲಕ ತಿಳಿಯಲು ಸಾದ್ಯವಾಯ್ತು.
ಸ್ವತಃ ನಾವು ಒಳಿತಿನೊಂದಿಗೆ ದರ್ಮನಿಷ್ಠನಾಗಿ ದಿನ ನಿತ್ಯಯದ ಕಡ್ಡಾಯ ಕರ್ಮ ಝಿಕ್ರ್ ಸ್ವಲಾತ್ ಮಜ್ಲಿಸ್ ನಿಂದ ಪರಲೋಕ ವಿಜಯಿಗಳಾಗಲು ಸಾದ್ಯವೆ,?
ಏನೂ ಅರಿಯದ ಈ ಲೋಕವೇ ಸ್ವರ್ಗಎಂದು ಕೆಡುಕಿನೊಂದಿಗೆ ಜೀವಿಸುವಂತಹ ಈಗಿನ ಯುವ ಸಮೂಹಕ್ಕೆ ಹೇಗೆ ಒಳಿತನ್ನು (ದೀನಿ ದಅ-ವಾ) ಬೋದಿಸಬೇಕು.
ಅದರ ಬಗ್ಗೆ *ಪುಣ್ಯ ಪ್ರವಾದಿ ಸ್ವಲ್ಲಲಾಹು ಅಲೈಹಿವಸಲ್ಲಮರ ನುಡಿ ಮುತ್ತು ಏನು, ?*
ಅದರಿಂದ ಸಿಗುವಂತಹ ಅನುಗ್ರಹ ಏನು,?
*"ಯಾರಾದರೂ ಆ ಕಾರಣದಿಂದ ನಿನ್ನ ಪ್ರಬೋದನೆಯಿಂದ*
*ಯಾವನೆ ಒಬ್ಬ ದರ್ಮನಿಷ್ಠನಾಗಿ(ಸನ್ಮಾರ್ಗದೊಂದಿಗೆ) ಜೀವಿಸುದಾದರೆ ಈ ಭೂಮಿ, ಭೂಮಿಯಲ್ಲಿ ಸಿಗುವಂತಹ ಸಕಲ ವಸ್ತುಗಳು ಸಿಗುವುದಕ್ಕಿಂತಲೂ, ಅತೀ ದೊಡ್ಡ ಅನುಗ್ರಹ ಬೇರೊಂದಿಲ್ಲ."* ಎಂದು ತಿಳಿಸಿದರು.
ಹಾಗೂ ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ನಝೀರ್ ನಇಮಿ ಉಸ್ತಾದರರು ಅಧ್ಯಕ್ಷ ಭಾಷಣದಲ್ಲಿ ಸಂಘಟನೆಯಲ್ಲಿ ಹಾಗೂ ಪ್ರಭೋದನೆ ಸಮಯಲ್ಲಿ ನೆನಪಿಡಬೇಕಾದ ಕೆಲವು ಕಾರ್ಯಗಳು.ಗುರಿ, ಸೃಜನಶೀಲತೆ, ಸೌಮ್ಯ ಸ್ವಭಾವ, ತಾಳ್ಮೆ ಅದು ಹೇಗೆ,
ತಾಳ್ಮೆ ಇರುವವರಿಗೆ ಅತ್ಯುತ್ತಮ ದಿನಗಳು ಎದುರಾಗುವುದು ಖಚಿತ. ಕಾಯುವವರಿಗೆ ಒಳ್ಳೆಯ ಸಂಗತಿಗಳು ಬಂದೇ ಬರುತ್ತವೆ. ಹೀಗಾಗಿ ಜೀವನದಲ್ಲಿ ಕಾಯುವಿಕೆ ಮತ್ತು ತಾಳ್ಮೆ ಇರಲೇಬೇಕು.
ಗುರಿ.ಅನ್ನೂದು ನಾವು ಯಾವುದೇ ಕೆಲಸ ಮಾಡುವಾಗ ಅಥವಾ ಯಾವುದೇ ಕಾರ್ಯಕ್ಕೆ ಗುರಿಇಡುವಾಗ ಎರಡು. ಭಾವನೆ ನಮ್ಮ ಮನದಿಂದ ಹೊರ ಬರುತ್ತವೆ. ತಪ್ಪುಕಲ್ಪಿತ ಭಾವನೆ. ಒಳಿತು ಕಲ್ಪಿತ ಭಾವನೆ. ಈ ಎರಡು ಭಾವನೆ ಮದ್ಯ ಸಮರಮಾಡಿ ಗುರಿಯೊಂದಿಗೆ ಒಳಿತನ್ನು ಜಯಿಸುದಾಗಿದೆ ನಮ್ಮದಾರಿ. ಇದಾಗಿದೆ ಜೀವನದಲ್ಲಿ ಒಳಿತಿಗೆ ಅಹ್ವಾನಿಸುವ. ಅದುವೆ ನಿಜವಾದ ಗುರಿ ಎಂದು ಹೇಳಿದರು.
ನಿನ್ನೆಯ ಕಾರ್ಯಕ್ರಮ (ತರಬೇತಿಯೂ) ಜೀವನದಲ್ಲಿ ಅಲವಡಿಸುಂತಹ ಕಾರ್ಯಕ್ರಮವಾಗಿತ್ತು. ಕೆಸಲದ ನಡುವೆಯೂ ತನ್ನ ಸಮುದಾಯಕೊಸ್ಕರ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಸಂಕ್ಷಿಪ್ತವಾದ ಮನಮುಟ್ಟುವ ರೀತಿಯಲ್ಲಿ ಕಳಿಸಿಕೊಡುವ
ಉಸ್ತಾದ್ ರವರಿಗೂ ಹಾಗೂ ಸಂಘಟನೆಗೆ ಬೆನ್ನೆಲುಬಾಗಿ ದುಡಿಯುವ ನಾಯಕರಿಗು ತುಂಬು ಸಂತೋಷದ ಕೃತಜ್ಞತೆಗಳೊಂದಿಗೆ ಶುಭಹಾರೈಸಿದರು ಮುಂದೆಯು ಕೆಸಿಎಫ್ ನ ಮೂಲಕ ಇಂತಹಾ ಹಲವಾರು ಕಾರ್ಯಕ್ರಮಗಳು ಮೂಡಿಬರಲಿ ಎಂದು ಕೆಸಿಎಫ್ ಅಂತರರಾಷ್ಟ್ರೀಯ ಕೋಶಾಧಿಕಾರಿ ಜನಾಬ್ ಹಬೀಬ್ ಕೋಯ ತಿಳಿಸಿದರು.
ಕೆಸಿಎಫ್ ರಾಷ್ಟ್ರೀಯ ಸಂಘಟನಾ ಕನ್ವೀನರ್ ಜನಾಬ್ ಝಕರಿಯ್ಯಾ ಆನೆಕಲ್ ಸ್ವಾಗತಿಸಿದರು.
ಜನಾಬ್ ತೌಫೀಕ್ ಅಡ್ಡೂರ್ ವಂದಿಸಿದರು.
Comments
Post a Comment