ಈ ಶತಮಾನದ ಸಮುದ್ಧಾರಕ, ಕ್ರಾಂತಿ ಪುರುಷ, ವಿಶ್ವ ವಿಖ್ಯಾತ ವಿದ್ವಾಂಸ ಸುಲ್ತಾನುಲ್ ಉಲಮಾರ ಕ್ರಾಂತಿಕಾರಿ ಶಿಷ್ಯಂದಿರಾದ ಕರ್ನಾಟಕದ ಸಖಾಫಿ ವಿದ್ವಾಂಸರ ಅತ್ಯಪೂರ್ವ ಬ್ರಹತ್ ಸಖಾಫಿ ಸಂಗಮ ಹಾಗು ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ ಉಸ್ತಾದರ ಮಾರ್ಗದರ್ಶನದಲ್ಲಿ ವಿಶ್ವ ವಿಖ್ಯಾತ ವಿದ್ಯಾ ಕೇಂದ್ರ ಮರ್ಕಝುಸ್ಸಖಾಫತಿಸ್ಸುನ್ನಿಯ್ಯಃ ದಿಂದ ಸಖಾಫಿ ಪದವಿಯನ್ನು ಪಡೆದು ಪವಿತ್ರ ಅಹ್ಲುಸ್ಸುನ್ನತಿ ವಲ್ ಜಮಾಅತಿನ ಕಾರ್ಯಕ್ಷೇತ್ರದಲ್ಲಿ ಸಕ್ರಿಯರಾಗಿರುವ ನೂತನ ಸಖಾಫಿ ಮಿತ್ರರಿಗೆ ಅಭಿನಂದನಾ ಸಮಾರಂಭ ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಇದರ ಆಶ್ರಯದಲ್ಲಿ ಇದೇ ಬರುವ ದಿನಾಂಕ ಫೆಬ್ರವರಿ 21 - 2018 ಬುಧವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಇದರ ಅಧ್ಯಕ್ಷರಾದ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ನ ವಹಿಸಲಿರುವರು. ಕರ್ನಾಟಕ ಸಖಾಫಿ ಕೌನ್ಸಿಲ್ ಇದರ ಕೋಶಾಧಿಕಾರಿ ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಅಸ್ಸಖಾಫಿ ಕಿಲ್ಲೂರು ತಂಗಳ್ ದುವಾ ನೆರವೇರಿಸಲಿರುವರು. ಎಸ್. ಎಂ. ಎ ಕರ್ನಾಟಕ ರಾಜ್ಯ ಇದರ ಅಧ್ಯಕ್ಷರಾದ ಸಯ್ಯಿದ್ ಜಲಾಲುದ್ದೀನ್ ಅಲ್ ಹಾದೀ ಮಲ್ ಜಅ್ ತಂಗಳ್ ಕಾರ್ಯಕ್ರಮ ಉದ್ಘಾಟಿಸಲಿರುವರು. ಎಸ್ ವೈ ಎಸ್ ಕರ್ನಾಟಕ ರಾಜ್ಯ ಇದರ ಅಧ್ಯಕ್ಷರಾದ ಜಿ ಎಂ ಕಾಮಿಲ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಲಿರುವರು. ಸಖಾಫಿ ಕೌನ್ಸಿಲ್ ಕೇಂದ್ರ ಸಮಿತಿ ಇದರ ಉಪಾಧ್ಯಕ್ಷರಾದ ವೆಳ್ಳಿಯಾಡ್ ಮುಹಮ್ಮದ್ ಅಲಿ ಸಖಾಫಿ ಹಾಗು ಕರ್ನಾಟಕ ರಾಜ್ಯ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣಗೈಯ್ಯಲಿರುವರು.
ಈ ಕಾರ್ಯಕ್ರಮದಲ್ಲಿ ಎಸ್ ಪಿ ಹಂಝ ಸಖಾಫಿ, ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ, ಡಿ.ಕೆ ಉಮರ್ ಸಖಾಫಿ ಕಂಬಳಬೆಟ್ಟು, ಕಣಚೂರು ಮೋನು ಹಾಜಿ, ಮಮ್ತಾಝ್ ಅಲಿ ಕ್ರಷ್ಣಾಪುರ, ಎಸ್.ಎಂ ರಶೀದ್ ಹಾಜಿ ಮುಂತಾದ ಖ್ಯಾತ ಉಲಮಾ ಉಮರಾ ನೇತಾರರು ಭಾಗವಹಿಸಲಿರುವರು ಎಂದು ಕರ್ನಾಟಕ ಸಖಾಫಿ ಕೌನ್ಸಿಲ್ ಇದರ ಪ್ರಧಾನ ಕಾರ್ಯದರ್ಶಿ ಕೆ.ಕೆ.ಎಂ ಕಾಮಿಲ್ ಸಖಾಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Comments
Post a Comment