SSF ರಾಜ್ಯ ಸಮಿತಿಯು SSLC ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಹಾಗೂ ಆತ್ಮ ವಿಶ್ವಾಸ ಮೂಡಿಸಲು ನಡೆಸಿಕೊಂಡು ಬರುವಂತಹ ''CONFIDENCE TEST - 2018'' ತಲಪಾಡಿ ಸೆಕ್ಟರ್, ಕೋಟೆಕಾರ್ ಸೆಕ್ಟರ್, ಕಿನ್ಯ ಸೆಕ್ಟರ್ ಆಶ್ರಯದಲ್ಲಿ
18-2-2018 ರಂದು ಬೆಳಿಗ್ಗೆ 9:30 ಯಿಂದ ಸಂಜೆ 4:30 ರ ವರೆಗೆ ಗಣಿತ ಹಾಗು ವಿಜ್ಞಾನ ವಿಷಯದಲ್ಲಿ ಪರೀಕ್ಷೆ ಫಲಾಹ್ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ SSF ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಸಖಾಫಿ ದುಅ ಗೈದು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಳ್ಳಾಲ ಡಿವಿಷನ್ ಪ್ರ. ಕಾರ್ಯದರ್ಶಿಯಾದ ಹಮೀದ್ ತಲಪಾಡಿ, ಜೊತೆ ಕಾರ್ಯದರ್ಶಿ ಯಾದ ಶಿಹಾಬುದ್ದೀನ್ ತಲಪಾಡಿ. ಸೆಕ್ಟರ್ ಅಧ್ಯಕ್ಷರಾದ ಇಸ್ಮಾಯಿಲ್ , ಅಶ್ರಫ್ ಹಾಜಿ ಉಳ್ಳಾಲ, ಡಿವಿಷನ್ ಹೈಸ್ಕೂಲ್ ಕನ್ವೀನರಾದ ಇಬ್ರಾಹಿಂ ಜಿ ಎ ಉಪಸ್ಥಿತಿರಿದ್ದರು. ಈ ಸಂದರ್ಭದಲ್ಲಿ ಕಳೆದ ವರ್ಷ ನಡೆದ CONFIDENCE TEST ಪರೀಕ್ಷೆಯಲ್ಲಿ ಡಿವಿಷನ್ ವ್ಯಾಪ್ತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಮಶ್ರೂಕ್ ಹಾಗೂ ಪೂಜಾ ಅವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಪರೀಕ್ಷಾ ಅಧಿಕಾರಿಗಳಾಗಿ SSF ಉಳ್ಲಾಲ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿಯಾದ ಇಲ್ಯಾಸ್ ಪೊಟ್ಟೊಲಿಕೆ ಆಗಮಿಸಿದರು. ಉಳ್ಳಾಲ ಡಿವಿಜನ್ ನಾಯಕರಾದ ಬಹು ಮುಸ್ತಫ ಝಹುರಿ, ಜಾಫರ್ ಅಳೇಕಲ, ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ್ ಅಳ್ವ ಭೇಟಿ ನೀಡಿ ಶುಭ ಹಾರೈಸಿದರು
SSF ತಲಪಾಡಿ ಸೆಕ್ಟರ್ ಪ್ರ. ಕಾರ್ಯದರ್ಶಿಯಾದ
ಅನ್ ವೀಝ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು
ಮುಸ್ತಫ ಕೆ ಸಿ ನಗರ
ಮೀಡಿಯಾ ಕನ್ವೀನರ್
SSF ತಲಪಾಡಿ ಸೆಕ್ಟರ್
Comments
Post a Comment