ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ ಎಸ್ ವೈ ಎಸ್ ಮಂಗಳೂರು ಝೋನ್ ಇದರ ಅಸೆಂಬ್ಲೇಜ್ ಕಾರ್ಯಕ್ರಮ ನಗರದ ಪುರಭವನದಲ್ಲಿ ಜರುಗಿತು.
ಸಯ್ಯಿದ್ ಅಲವಿ ತಂಗಲ್ ಕಿನ್ಯ ದುಆ ನೆರವೇರಿಸಿದರು. ಎಸ್ ವೈ ಎಸ್ ದ.ಕ ಜಿಲ್ಲಾಧ್ಯಕ್ಷರಾದ ಉಸ್ಮಾನ್ ಸಅಧಿ ಪಟ್ಟೋರಿ ಕಂಬಳಬೆಟ್ಟು ಝೋನ್ ಅಸೆಂಬ್ಲೇಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಗಳೂರು ಝೋನ್ ಅಧ್ಯಕ್ಷರಾದ ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್ ಅಧ್ಯಕ್ಷತಾ ಭಾಷಣ ಮಾಡಿದರು. ರಾಷ್ಟ್ರೀಯ ಕೆ ಸಿ ಎಫ್ ನಾಯಕರಾದ ಎಸ್ ಪಿ ಹಂಝ ಸಖಾಫಿ ಸಂಘಟನಾ ಮಹತ್ವ ಎಂಬ ವಿಷಯದ ಕುರಿತು ಮಾತನಾಡಿ ಎಸ್ ವೈ ಎಸ್ ಎಂಬುದು ನೀರಿನ ಹರಿವನ್ನು ತಡೆಯುವ ಭದ್ರವಾದ ಅಣೆಕಟ್ಟಿನ ತರಹವಾಗಿದೆ. ಮನುಷ್ಯನನ್ನು ಕೆಟ್ಟ ಕಾರ್ಯಗಳಿಂದ ತಡೆದು ಉತ್ತಮರನ್ನಾಗಿ ಮಾಡಿಸುವ ಭದ್ರವಾದ ಸಂಘಟನೆಯಾಗಿದೆ ಎಸ್ ವೈ ಎಸ್ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ, ಕೋಶಾಧಿಕಾರಿ ಹನೀಫ್ ಹಾಜಿ , SYS ನಾಯಕರುಗಳಾದ ಜಲಾಲ್ ತಂಙಲ್. ಎಸ್ ಎಂ ತಂಙಲ್. ಉರುಮಣೆ ಸಅದಿ ಬಶೀರ್ ಮದನಿ ಕಂಡಿಗ, ಮುಹಮ್ಮದ್ ಹಾಜಿ, ಏಷ್ಯನ್ ಬಾವ ಹಾಜಿ. ಉಮರ್ ಮಾಸ್ಟರ್. ಅಬ್ದುಲ್ಲ ಮುಸ್ಲಿಯಾರ್. ಹಮೀದ್ ಬಜ್ಪೆ. ಲುಕ್ಮಾನ್ ಮುಸ್ಲಿಯಾರ್. ಮುನೀರ್ ಸಖಾಫಿ. ಮುತ್ತಲಿಬ್ ಹಾಜಿ ನಾರ್ಶ. ಸಲೀಂ ಅಡ್ಯಾರ್.ಹಮೀದ್ ಮೂಡಬಿದ್ರೆ.ಇಸ್ಮಾಯಿಲ್ ಎನ್.ಕೆ.ಎಂ ಹಾಜರಿದ್ದು.ಝೋನ್ ಪ್ರಧಾನ ಕಾರ್ಯದರ್ಶಿ ಬಾವ ಫಕ್ರುದ್ದೀನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Comments
Post a Comment