ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ಆಶ್ರಯದಲ್ಲಿ ರೇಂಜಿಗೊಳಪಟ್ಟ ಮದ್ರಸಗಳ ಪಬ್ಲಿಕ್ ಪರೀಕ್ಷಾ ಪೂರ್ವಭಾವಿ ಸಭೆ
ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದ ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ಆಶ್ರಯದಲ್ಲಿ ರೇಂಜಿಗೊಳಪಟ್ಟ ಮದ್ರಸಗಳ ಪಬ್ಲಿಕ್ ಪರೀಕ್ಷಾ ಪೂರ್ವಭಾವಿ ಸಭೆ ಉಳ್ಳಾಲ ಮಂಚಿಲ ಮದ್ರಸ ಹಾಲಿನಲ್ಲಿ ಇತ್ತೀಚೆಗೆ ನಡೆಯಿತು.
ರೇಂಜ್ ಕೋಶಾಧಿಕಾರಿ ಅಯ್ಯೂಬ್ ಮಹ್ಲರಿ ದುವಾ ನೆರವೇರಿಸಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ಯೂನುಸ್ ಇಮ್ದಾದಿ ವಿಷಯ ಮಂಡಿಸಿದರು. ಬಳಿಕ ನಡೆದ ಚರ್ಚಾ ಸಭೆಯಲ್ಲಿ ಪರೀಕ್ಷೆ ಹಾಗು ಮಕ್ಕಳ ಕಲಿಕಾಭಿವ್ರದ್ಧಿಯ ಕುರಿತು ಹಲವು ಮಹತ್ವಪೂರ್ಣ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ಅಧೀನ ಮದ್ರಸಗಳ ಮುಖ್ಯೋಪಾಧ್ಯಾಯರುಗಳು ಉಪಸ್ಥಿತರಿದ್ದರು. ನವಾಝ್ ಸಖಾಫಿ ಉಳ್ಳಾಲ ಧನ್ಯವಾದಗೈದರು.
Comments
Post a Comment