🎓🎓 ಮಾಸ್ಟರ್ ಮೈಂಡ್ 🎓🎓
ಕೆಂಪು ಕ್ರಾಂತಿಯಲ್ಲೊಂದು ಆತ್ಮ ವಿಶ್ವಾಸದ ಪಾಠ
ಜಗತ್ತಿನಲ್ಲಿ ಹಲವಾರು ಕ್ರಾಂತಿಗಳು ನಡೆದಿವೆ, ಅವುಗಳಲ್ಲಿ ಹಸಿರು ಕ್ರಾಂತಿ,ಬಿಳಿ ಕ್ರಾಂತಿ,ಹಳದಿ ಕ್ರಾಂತಿ,ನೀಲಿ ಕ್ರಾಂತಿ ...... ಇವುಗಳೆಲ್ಲವೂ ನಿರ್ಧಿಷ್ಟ ವಸ್ತುಗಳ ಅಭಿವೃದ್ದಿಗೆ ಮಾಡಿದ ಕ್ರಾಂತಿಗಳಾಗಿವೆ.
ಅವುಗಳಲ್ಲೂ ಕೆಂಪು ಕ್ರಾಂತಿ ಇವೆಯಾದರೂ SSF ದ.ಕ ಜಿಲ್ಲಾ ಸಮಿತಿ ನಡೆಸುತ್ತಿರುವ ಬ್ಲಡ್ ಸೈಬೇೂ ಎಂಬ ರಕ್ತ ದಾನ ಶಿಬಿರಗಳು ಅದಕ್ಕೊಂದು ನ್ಯೂ ಅಪ್ಡೇಟ್ ನೀಡಿದೆ ಎಂಬುವುದು ಮಾತ್ರ ಸತ್ಯ.
ಹೌದು SSF ನ ಬ್ಲಡ್ ಸೈಬೇೂ 99 ಬ್ಲಡ್ ಕ್ಯಾಂಪ್ ನಲ್ಲಿ ಈ ತನಕ 7000 ಕ್ಕಿಂತಲೂ ಅಧಿಕ ಯೂನಿಟ್ ರಕ್ತ ದಾನ ಮಾಡಿದ್ದು, ನಾಳೆ (ಆ.18) ಮಂಗಳೂರಿನ ಟೌನ್ ಹಾಲ್ ನಲ್ಲಿ ತನ್ನ 100 ನೇ ರಕ್ತದಾನ ಶಿಬಿರವನ್ನು ಸಂಘಟಿಸುತ್ತಿದೆ.
ಅಂದಹಾಗೆ,
SSF ದೇರಳಕಟ್ಟೆ ಸೆಕ್ಟರ್ ಇಲ್ಲಿ ಒಂದು ವಿಶೇಷ ಘಟಕ.
ಕಾರಣ, ಈ ಎಲ್ಲಾ ಕ್ಯಾಂಪ್ ಗಳಲ್ಲಿ ಅತ್ಯಂತ ಕಡಿಮೆ ರಕ್ತ ಸಂಗ್ರಹಿಸಿದ ಘಟಕ ಯಾವುದೆಂದರೆ ಅದು ದೇರಳಕಟ್ಟೆ ಸೆಕ್ಟರ್ !
ಇನ್ನು ಅತ್ಯಂತ ಹೆಚ್ಚು ರಕ್ತ ಸಂಗ್ರಹಿಸಿದ ಘಟಕ ಅದೂ ದೇರಳಕಟ್ಟೆ ಸೆಕ್ಟರ್ !
ಇದೇನಂದರೆ, ಆ ಘಟಕ ಈ ಮೊದಲು ನಡೆಸಿದ್ದ ಕ್ಯಾಂಪ್ ನಲ್ಲಿ ಕೇವಲ 18 ಯುನಿಟ್ ಮಾತ್ರ ಸಂಗ್ರಹಿಸಿ ತುಂಬಾ ನೊಂದು ಕೊಂಡಿತ್ತು ಮಾತ್ರವಲ್ಲ ಹಲವು ಕಿರಿಕಿರಿಯನ್ನೂ ಕೇಳಿಸಬೇಕಾಯಿತು
ಇದನ್ನು ಸಹಿಸಿಯೂ ಕುಗ್ಗದೆ ತನ್ನ ಆತ್ಮ ವಿಶ್ವಾಸವನ್ನು ವೃದ್ಧಿಸಿ ಮೊನ್ನೆ ಅಗಷ್ಟ್ 15 ರಂದು ಹಲವು ಸಿದ್ಧತೆಯೊಂದಿಗೆ ಇನ್ನೂಂದು ಕ್ಯಾಂಪ್ ದೇರಳಕಟ್ಟೆ ಜಂಕ್ಷನ್ ನಲ್ಲಿ ಸಂಘಟಿಸಿತು.
ಅದ್ಭುತವೆಂಬಂತೆ ಅಲ್ಲಿ ಸಂಗ್ರಹಿಸಿದ ರಕ್ತವು ನಿರೀಕ್ಷೆಗೂ ಮೀರಿತ್ತು.157 ಯುನಿಟ್ ರಕ್ತ ದಾನಿಗಳಿಂದ ಸಂಗ್ರಹಿಸುವ ಮೂಲಕ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿತು.
ಇದು ಆತ್ಮವಿಶ್ವಾಸದ ಪವರ್ ಎಷ್ಟು ಮಾತ್ರ ಇದೆ ಎಂಬುವುದನ್ನು ಮತ್ತೊಮ್ಮೆ ಜಗತ್ತಿಗೆ ತೇೂರಿಸಿ ಕೊಟ್ಟಿದೆ.
Congratulations to Derlakatte Sector
✍ *Musthafa Master Ullal*
*======================*
