ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ವಾರ್ಷಿಕ ಮಹಾಸಭೆ ಹಾಗು 2019 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅಳೇಕಲದ ನಜಾತುಸ್ಸಿಬಿಯಾನ್ ಮದ್ರಸ ಹಾಲಿನಲ್ಲಿ ನಡೆಯಿತು.
ಮಂಚಿಲ ಮಸೀದಿಯ ಖತೀಬರಾದ ಬುಖಾರಿ ಮದನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಅಳೇಕಲ ನಜಾತುಸ್ಸಿಬಿಯಾನ್ ಮದ್ರಸದ ಮುಖ್ಯೋಪಾಧ್ಯಾಯರಾದ ಅಗ್ರಹಾರ ಸಅದಿ ಉಧ್ಘಾಟಿಸಿದರು. ಮದನಿನಗರ ಮದ್ರಸದ ಮುಖ್ಯೋಪಾಧ್ಯಾಯರಾದ ಅಯ್ಯೂಬ್ ಮಹ್ಲರೀ ಹಾಗು ಆಝಾದ್ ನಗರ ಮದ್ರಸದ ಮುಖ್ಯೋಪಾಧ್ಯಾಯರಾದ ಜಲಾಲುದ್ದೀನ್ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಳಿಕ ಸಯ್ಯಿದ್ ಮದನಿ ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ 2019 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಗೌರವಾಧ್ಯಕ್ಷರಾಗಿ ಅಬೂಝಿಯಾದ್ ಮದನಿ ಪಟ್ಟಾಂಬಿ, ಅಧ್ಯಕ್ಷರಾಗಿ ಯೂನುಸ್ ಇಮ್ದಾದಿ ತೋಟ, ಉಪಾಧ್ಯಕ್ಷರಾಗಿ ಬುಖಾರಿ ಮದನಿ ಮಂಚಿಲ, ಜಲಾಲ್ ಮದನಿ ಮಾಸ್ತಿಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಯ್ಯೂಬ್ ಮಹ್ಲರಿ ಮದನಿ ನಗರ, ಜೊತೆ ಕಾರ್ಯದರ್ಶಿಗಳಾಗಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಹಾಗು ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ, ಕೋಶಾಧಿಕಾರಿಯಾಗಿ ಅಝೀಝ್ ಸಅದಿ ಅಗ್ರಹಾರ, ಪರೀಕ್ಷಾ ವಿಭಾಗದ ಚೇರಮಾನಾಗಿ ಬುಖಾರಿ ಮದನಿ, ಕನ್ವೀನರಾಗಿ ಉಸ್ಮಾನ್ ಸಖಾಫಿ, ಮ್ಯಾಗಜಿನ್ ವಿಭಾಗದ ಚೇಯರ್ಮಾನ್ ಆಗಿ ಇಸ್ಮಾಯಿಲ್ ನಯೀಮಿ ಮಂಗಳಪೇಟೆ, ಕನ್ವೀನರಾಗಿ ನವಾಝ್ ಸಖಾಫಿ ಉಳ್ಳಾಲ, ಕ್ಷೇಮನಿಧಿ ಚೇಯರ್ಮಾನ್ ಆಗಿ ಜಲಾಲುದ್ದೀನ್ ಮದನಿ ಉಳ್ಳಾಲ, ಕನ್ವೀನರಾಗಿ ಬಶೀರ್ ಸಖಾಫಿ ಉಳ್ಳಾಲ ಇವರುಗಳನ್ನು ಆಯ್ಕೆ ಮಾಡಲಾಯಿತು ಹಾಗು ಉಳ್ಳಾಲ ರೇಂಜಿನ ಸರ್ವ ಮದ್ರಸಗಳ ಮುಖ್ಯೋಪಾಧ್ಯಾಯರನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು.
ನೂತನ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಮಹ್ಲರಿ ಸ್ವಾಗತಿಸಿದರು.
Comments
Post a Comment