ಮಂಗಳೂರಿನಲ್ಲಿ ಪ್ರೊಲಾಝ್ ಕ್ಯಾಂಪ್
ಮಂಗಳೂರು,ಎ.16 : ಎಸ್ಸೆಸ್ಸೆಫ್ ಮಂಗಳೂರು ಸೆಕ್ಟರ್ ವತಿಯಿಂದ ಪ್ರೊಲಾಝ್ ಕ್ಯಾಂಪ್ ದಿನಾಂಕ 16ರಂದು ಅಡ್ಯಾರ್ ಕಣ್ಣೂರು ಸುನ್ನಿ ಸೆಂಟರ್‌ನಲ್ಲಿ ಹಸನ್ ಪಾಂಡೇಶ್ವರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಡಿವಿಶನ್ ಅದ್ಯಕ್ಷ ಮನ್ಸೂರ್ ಮದನಿ ಉದ್ಘಾಟಿಸಿ ಮಾತನಾಡಿದರು.ಮುಖ್ಯ ತರಬೇತಿಗಾರರಾಗಿ ಉಳ್ಳಾಲ ಡಿವಿಶನ್ ಅದ್ಯಕರು ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಹಾಗೂ ಜಿಲ್ಲಾ ನಾಯಕರಾದ ಸಿರಾಜುದ್ದೀನ್ ನಿಝಾಮಿ ಆಗಮಿಸಿದರು.
ಕ್ಯಾಂಪ್ ನಲ್ಲಿ ಸೆಕ್ಟರ್ ಯುನಿಟ್ ಅವಾರ್ಡ್ ಅಡ್ಯಾರ್ ಕಣ್ಣೂರು ಯುನಿಟ್ ಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಬ್ದುರ್ರಹ್ಮಾನ ಹಾಜಿ ಹಾಗೂ ಕೆಸಿಎಫ್ ಕಾರ್ಯಕರ್ತ ರಶೀದ್ ಮತ್ತು ಜಬ್ಬಾರ್ ಕಣ್ಣೂರು ಹಾಜರಿದ್ದರು.
ನಿಝಾಮುದ್ದೀನ್ ಷಾ ಕಂದಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಅಬ್ದುಲ್ ಮಲಿಕ್ ಧನ್ಯವಾದಗೈದರು.
Comments
Post a Comment