Skip to main content

ಅಲ್ ಮದೀನತುಲ್ ಮುನವ್ವರ ಮೂಡಡ್ಕ ರಿಯಾದ್ ಸಮಿತಿಯ ಮಹಾಸಭೆ





ಅಲ್ ಮದೀನತುಲ್ ಮುನವ್ವರ ಮೂಡಡ್ಕ ರಿಯಾದ್ ಸಮಿತಿಯ ಮಹಾಸಭೆ

ಕಳೆದ ಸುಮಾರು 12 ವರ್ಷಗಳ ಹಿಂದೆ ಖ್ಯಾತ ವಾಗ್ಮಿಯೂ  ಧೀರ ನೇತಾರರೂ ಆಗಿದ್ದ 
ಮರ್ಹೂಂ ಟಿ.ಹೆಚ್ ಇಬ್ರಾಹಿಂ ಮದನಿ ಉಸ್ತಾದರ ಕನಸಿನ ಕೂಸಾಗಿದ್ದ ಅನಾಥ ಹಾಗೂ ನಿರ್ಗತಿಕ ವಿಧ್ಯಾಸಂಸ್ಥೆಯನ್ನು ಆರಂಭದಲ್ಲಿ 7 ಮಕ್ಕಳನ್ನು  ಸೇರಿಸಿ ತಾಜುಲ್ ಉಲಮಾ ಉಳ್ಳಾಲ ತಂಙಲ್ ರವರ ದಿವ್ಯ ಸಾನಿಧ್ಯದಲ್ಲಿ ಆರಂಬಿಸಲಾಯಿತು. ಅಲ್ ಹಂದುಲಿಲ್ಲಾಹ್..
ಟಿ.ಎಚ್ ಉಸ್ತಾದರ  ಮರಣಾನಂತರ ಸಂಸ್ಥೆಯು ತೀರಾ ಹಿಂದುಳಿಯುತ್ತಿರುವುದನ್ನು ಮನಗಂಡು ಊರಿನ ಹಾಗೂ ನೆರೆಯ 10 ಜನರು ಕಳೆದ 8 ವರ್ಷಗಳ ಹಿಂದೆ ರಿಯಾದಿನ ಒಂದು ಕಡೆ ಸೇರಿ ಅಲ್- ಮದೀನತುಲ್ ಮುನವ್ವರ ಮೂಡಡ್ಕ  ರಿಯಾದ್ ಎಂಬ ಪುಟ್ಟ ಸಮಿತಿಯನ್ನು ರಚಿಸಿದರು.

ಸಮಿತಿಯು ಕಳೆದ 8 ವರ್ಷಗಳಿಂದ ಸೌದಿಯ ರಿಯಾದಿನಲ್ಲಿ ಕಾರ್ಯಾಚರಿಸುತ್ತಾ ಬಂದಿರುತ್ತದೆ
ಸದ್ರಿ ಸಮಿತಿಯ 
ವಾರ್ಷಿಕ ಮಾಹಾ ಸಬೆಯು ಸಮಿತಿಯ ಹಾಲಿ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಉಜಿರೆ ಇವರ ಅಧ್ಯಕ್ಷತೆಯಲ್ಲಿ ರಿಯಾದಿನ ಹೈಇಲ್ ಮಸ್ನ ಎಂಬಲ್ಲಿ ಬಹಳ ವಿಜ್ರಂಭಣೆಯಿಂದ ಜರಗಿತು.
ಮಾಸಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮದೊಂದಿಗೆ ಆರಂಭಿಸಿದ ಸಭೆಯು
ಬಹು ಮಹ್ಮೂದ್ ಸಖಾಫಿ ಕೊಡಗುರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

ಕಾರ್ಯಕ್ರಮವನ್ನು ಬಹು ಅಬ್ದುಲ್ ಕರೀಂ ಲತೀಫಿ ಬೇಂಗಿಲ ಉಧ್ಘಾಟಿಸಿದರು. ಸಂಸ್ಥೆಯ ಮ್ಯಾನೇಜರ್ ಬಹು ಅಶ್ರಫ್ ಸಖಾಫಿ ಮಾಡವು ಮಾತಾಡಿ ಸ್ಥಾಪನೆಯ ಧ್ಯೇಯೋದ್ದೇಷಗಳನ್ನು ವಿವರಿಸುವುದರೊಂದಿಗೆ
ವಿಧ್ಯಾಭ್ಯಾಸ ಕ್ಷೇತ್ರದಲ್ಲಿ ಮುಸ್ಲಿಮರು ಇನ್ನಷ್ಟು ಸಂಸ್ಥೆಗಳನ್ನು ಸ್ಥಾಪಿಸಿ ಮುಂದಿನ ಪೀಳಿಗೆಯ ಅಭ್ಯುದಯಕ್ಕೆ ಶ್ರಮಿಸಬೇಕೆಂದೂ ಈ ನಿಟ್ಟಿನಲ್ಲಿ ಮುಸ್ಲಿಂ ಸಮಾಜದ ಉಲಮಾ ಉಮರಾಗಳು ಎಚ್ಚೆತ್ತುಕೊಳ್ಳಬೇಕೆಂದು
ಕರೆಯಿತ್ತರು. ಹಾಗೂ ಸ್ಥಾಪನೆಯು ನಡೆದು ಬಂದ ದಾರಿಯ ಬಗ್ಗೆ ವಿವರಿಸಿ ಮುಂದಿನ ಕಾರ್ಯ ಯೋಜನೆಗಳನ್ನು ಸಭೆಯ  ಮುಂದಿಟ್ಟರು.

ಅಬ್ದುಲ್ ರಝಾಕ್ ಹಾಜಿಯವರು ಮಾತನಾಡಿ ನಾನು ಮೊಟ್ಟ ಮೊದಲ ಬಾರಿ ಮೂಡಡ್ಕ ಸ್ಥಾಪನೆಗೆ ಹೋದಾಗ ಅಲ್ಲಿಯ ಕಾರ್ಯ ಚಟುವಟಿಕೆಗಳನ್ನು ಕಣ್ಣಾರೆ ಕಂಡಿದ್ದು, ನಾನು ಸಾಧ್ಯವಾದಷ್ಟು ಏನಾದರೂ ಅಳಿಲು ಸೇವೆಯನ್ನು ರಿಯಾದ್ ಸಮಿತಿಯ ಮೂಲಕ ಮಾಡಲು ನನಗೆ ಪ್ರೇರಣೆಯಾಯಿತು   ಎಂದರು. ಮುಂದುವರಿದ ಭಾಗವಾಗಿ ಹಿಂದಿನ 
2 ವರ್ಷಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ರಿಯಾದ್ ಸಮಿತಿಯು ಸ್ಥಾಪನೆಗೆ ನೀಡಿದ   ನೆರವು ಮತ್ತು ಕೈಗೊಂಡ ಕಾರ್ಯಕ್ರಮಗಳನ್ನು ಎಲ್ಲಾ ಕಾರ್ಯಕರ್ತರಿಗೆ ವಿವರಿಸುವುದರ ಜೊತೆಗೆ ನೀವೆಲ್ಲರೂ ಕೂಡಾ ಊರಿಗೆ ಹೋದರೆ ನಿಶ್ಚಿತವಾಗಿಯೂ ಸ್ಥಾಪನೆಗೆ ಒಮ್ಮೆ ಭೇಟಿ ನೀಡಬೇಕೆಂದು ಹೇಳಿದರು.

ಬಳಿಕ ಸಮಿತಿಯ ಜೊತೆ ಕಾರ್ಯದರ್ಶಿ ಜನಾಬ್ ಇಬ್ರಾಹಿಂ ಮುರ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.

ನಂತರ ಹಳೆಯ ಸಮಿತಿ ಬರ್ಖಾಸ್ತುಗೊಳಿಸಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರು: ಡಿ.ಪಿ ಯೂಸೂಫ್ ಸಖಾಫಿ ಬೈತಾರ್

ಅಧ್ಯಕ್ಷರು: ಅಬ್ದುಲ್ ರಝಾಕ್ ಹಾಜಿ ಉಜಿರೆ.

ಪ್ರಧಾನ ಕಾರ್ಯದರ್ಶಿ: ಇಬ್ರಾಹಿಂ ಬೇಂಗಿಲ.

ಕೋಶಾಧಿಕಾರಿ: ಕಾಸಿಂ ಹಾಜಿ ಕನರಾಜೆ.

ಉಪಾಧ್ಯಕ್ಷರುಗಳು:-

ಯೂಸುಫ್ ಹಾಜಿ ಕಳಂಜಿಬೈಲ್,
ಅಬ್ದುಲ್ ಖಾದರ್ ಮಠ,
ಕೆ.ಪಿ ರಶೀದ್ ಹಾಜಿ ಕಳಂಜಿಬೈಲ್,
ಹೈದರ್ ಹಾಜಿ ಸರಳಿಕಟ್ಟೆ.

ಜೊತೆ ಕಾರ್ಯದರ್ಶಿಗಳು:-

ಇಬ್ರಾಹಿಂ ಮುರ,
ಅಬ್ಬಾಸ್ ಮಾಣಿ,
ಹಬೀಬುಲ್ಲಾಹ್ 
ಟಿ.ಹೆಚ್.

ಸಂಘಟನಾ ಕಾರ್ಯದರ್ಶಿ:-

ಹನೀಪ್ ಹಾಜಿ ಬೆಲ್ಲಾರೆ,
ಸಲೀಂ ಕನ್ಯಾಡಿ,

ಸಂಚಾಲಕರು:-
ಅಬ್ದುಲ್ ರಝಾಕ್ ಮಾಚಾರ್.

ಸಲಹೆಗಾರರು:-
ಮಹ್ಮೂದ್ ಸಖಾಫಿ ಕೊಡಗು, 
ಇಸ್ಮಾಯಿಲ್ ಜೋಗಿಬೆಟ್ಟು
ಇಬ್ರಾಹಿಂ ಕುಂತೂರು

ಕಾರ್ಯಕಾರಿ ಸದಸ್ಯರಾಗಿ:-
ಯೂಸುಪ್ ಕೊಲ್ಪೆ,
ದಾವೂದ್ ಮಡಿಕೇರಿ, 
ಅಬ್ದುಲ್ ಕರೀಂ ಮಡಿಕೇರಿ, ಹನೀಪ್ ಕೆಮ್ಮಾರ,
ಇಬ್ರಾಹಿಂ ಮಾಣಿ,
ದಾವೂದ್ ಕಜೆಮಾರ್
ಬಶೀರ್ ಮೂರುಗೋಳಿ,
ಶೇಕಬ್ಬ ಕರಾಯ,
ಅಬ್ದುರಹ್ಮಾನ್ ಜೋಗಿಬೆಟ್ಟು,
ರಝಾಕ್ ಕಾಶಿಬೆಟ್ಟು,
ರಿಯಾಝ್ ಮೂಲೂರು,
ರಝಾಕ್ ಬಾರ್ಯ,
ಅಬ್ದುಲ್ ಹಮೀದ್ ಮಠ,
ರಫೀಕ್ ಸಅದಿ ಬೆದ್ರಡಿ ಕಳಂಜಿಬೈಲ್,

ಕಾರ್ಯಕ್ರಮದಲ್ಲಿ ಅಬ್ದುಲ್ಲಾ ಸಖಾಫಿ ಖಿರಅತ್ ಪಠಿಸಿ, ಇಬ್ರಾಹೀಮ್ ಬೇಂಗಿಲ ಸ್ವಾಗತಿಸಿದರು. ಸಲೀಂ ಕನ್ಯಾಡಿ ನಿರೂಪಿಸಿ 
ಇಬ್ರಾಹೀಮ್ ಮುರ ಕೃತಜ್ಞತೆಯನ್ನು ಸಲ್ಲಿಸಿದರು
ಈ ಸಂದರ್ಭ ನಶೀಮ್ ಉಸ್ತಾದ್ ಕೊಡಗು, ಅಬ್ದುಲ್ಲ ಮದನಿ ತೆಂಕಕಾರಂದೂರು, ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷರು ಹನೀಫ್ ಬೆಳ್ಳಾರೆ, ಅಲಿಫ್ ಇಂಟರ್ನೇಶನಲ್ ಸ್ಕೂಲ್ ಶಿಫಾ ಪ್ರಿನ್ಸಿಪಾಲ್ ಮುಸ್ತಾಫ ಕೇರಳ ಮೊದಲಾದವರು ಉಪಸ್ಥಿತರಿದ್ದರು

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.